For Quick Alerts
  ALLOW NOTIFICATIONS  
  For Daily Alerts

  'ವಿವಾಹಿತ ಪುರುಷರ ಸಹವಾಸ ಮಾಡಬೇಡಿ': ಸಲಹೆ ನೀಡಿದ ಖ್ಯಾತ ನಟಿ ನೀನಾ ಗುಪ್ತಾ

  |

  ಬಾಲಿವುಡ್ ನ ಖ್ಯಾತ ನಟಿ ನೀನಾ ಗುಪ್ತಾ ನೀಡಿರುವ ಸಲಹೆ ಈಗ ಸಾಕಷ್ಟು ವೈರಲ್ ಆಗಿದೆ. ಅಂದ್ಹಾಗೆ ನೀನಾ ಗುಪ್ತಾ ಇನ್ಸ್ಟಾಗ್ರಾಮ್ ನಲ್ಲಿ ಸಚ್ ಕಹೊ ತೋ ಎನ್ನುವ ಸರಣಿಯನ್ನು ನಡೆಸುತ್ತಿದ್ದಾರೆ. ಈ ಸರಣಿಯಲ್ಲಿ ವೈಯಕ್ತಿಕ ಜೀವನದ ಸಾಕಷ್ಟು ಕಥೆಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

  ಈ ಸರಣಿಯಲ್ಲಿ ನೀನಾ ವಿವಾಹಿತ ಪುರುಷರ ಪ್ರೀತಿಯಲ್ಲಿ ಬೀಳಬೇಡಿ ಎನ್ನುವ ಸಲಹೆ ನೀಡಿರುವ ವಿಡಿಯೋ ಈಗ ಎಲ್ಲಾ ಹರಿದಾಡುತ್ತಿದೆ. ವಿವಾಹಿತ ಪುರಷರ ಪ್ರೀತಿಯಲ್ಲಿ ಯಾಕೆ ಬೀಳಬಾರದು ಎನ್ನುವುದನ್ನು ನೀನಾ ಸ್ಪಷ್ಟವಾಗಿ ವಿವರಿಸಿದ್ದಾರೆ. ಮದುವೆ ಆದ ಗಂಡಸರನ್ನು ಪ್ರೀತಿಸಿದರೆ ಏನೆಲ್ಲ ಸಮಸ್ಯೆ ಆಗುತ್ತೆ ಎಂದು ವಿಡಿಯೋ ಮೂಲಕ ವಿವರಿಸಿದ್ದಾರೆ. ಮುಂದೆ ಓದಿ...

  ಇಲ್ಲಿ ದೊಡ್ಡೋರ ಮಕ್ಕಳದ್ದೇ ಕಾರುಬಾರು: ಬಾಲಿವುಡ್ ಮೇಲೆ ತಾಪ್ಸಿ ಸಿಟ್ಟುಇಲ್ಲಿ ದೊಡ್ಡೋರ ಮಕ್ಕಳದ್ದೇ ಕಾರುಬಾರು: ಬಾಲಿವುಡ್ ಮೇಲೆ ತಾಪ್ಸಿ ಸಿಟ್ಟು

  ನಾನು ಕೂಡ ಈ ತಪ್ಪು ಮಾಡಿದ್ದೀನಿ

  ನಾನು ಕೂಡ ಈ ತಪ್ಪು ಮಾಡಿದ್ದೀನಿ

  "ನಾನು ಕೂಡ ಈ ತಪ್ಪನ್ನು ಮಾಡಿದ್ದೀನಿ. ಇದರಿಂದ ನೋವು ಅನುಭವಿಸಿದ್ದೀನಿ. ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೀನಿ. ಹಾಗಾಗಿ ನಿಮ್ಮ ಬಳಿ ಹೇಳಿಕೊಳ್ಳುತ್ತಿದ್ದೀನಿ. ನೀವು ಇಂತಹ ತಪ್ಪು ಮಾಡಬೇಡಿ ಎನ್ನುವುದು ನನ್ನ ಉದ್ದೇಶ". ಎಂದಿದ್ದಾರೆ. ಸಾಧ್ಯವಾದಷ್ಟು ಮದುವೆ ಆದ ಗಂಡಸರ ಪ್ರೀತಿಯಲ್ಲಿ ಬೀಳದಿರುವ ಹಾಗೆ ನೋಡಿಕೊಳ್ಳಿ ಎಂದಿದ್ದಾರೆ.

  ವಿವಿಯನ್ ರಿಚರ್ಡ್ಸ್ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದರು

  ವಿವಿಯನ್ ರಿಚರ್ಡ್ಸ್ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದರು

  ನೀನಾ ಗುಪ್ತಾ ಮದುವೆಗೂ ಮೊದಲು ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಆದರೆ ಇಬ್ಬರು ಮದುವೆ ಆಗಿಲ್ಲ. ಇವರಿಬ್ಬರಿಗೂ ಒಬ್ಬಳು ಮಗಳಿದ್ದಾರೆ. ವಿವಿಯನ್ ದೂರ ಆದ ಮೇಲೆ ನೀನಾ, ದೆಹಲಿ ಮೂಲಕ ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮೆಹ್ರಾ ಅವರನ್ನು ಮದುವೆ ಆಗುತ್ತಾರೆ.

  ಮದುವೆಯಾದ ಪುರಷರನ್ನು ಪ್ರೀತಿಸಿದರೆ ಏನೆಲ್ಲ ಸಮಸ್ಯೆ ಆಗುತ್ತೆ?

  ಮದುವೆಯಾದ ಪುರಷರನ್ನು ಪ್ರೀತಿಸಿದರೆ ಏನೆಲ್ಲ ಸಮಸ್ಯೆ ಆಗುತ್ತೆ?

  ಮದುವೆ ಆದ ಪುರಷರನ್ನು ಪ್ರೀತಿಸಿದರೆ ಏನಾಗುತ್ತೆ ಎಂದು ಹೇಳಿರುವ ನೀನಾ "ಪತ್ನಿಗೆ ವಿಚ್ಛೇದನ ನೀಡುವಂತೆ ಕೇಳುತ್ತೀರಿ, ಆದರೆ ಆತ ಮಕ್ಕಳಿದ್ದಾರೆ ಆಗಲ್ಲ ಎಂದು ಹೇಳುತ್ತಾನೆ. ಆತನ ಜೊತೆ ಬೇರ ಊರಿಗೆ ಹೋಗಲು ಬಯಸುತ್ತೀರಿ, ಆತ ಸುಳ್ಳು ಹೇಳಿ ಬರಬೇಕಾಗುತ್ತೆ. ರಾತ್ರಿ ಕಳೆಯಲು ಬಯಸುತ್ತೀರಿ, ಆತ ಹೋಟೆಲ್ ಗೆ ಕರೆದುಕೊಂಡು ಹೋಗುತ್ತಾನೆ. ಆತನ ಜೊತೆ ರಾತ್ರಿ ಕಳೆಯಲು ಬಯಸುತ್ತೀರಿ. ಹಾಗಾಗಿ ಪತ್ನಿಗೆ ವಿಚ್ಛೇದನ ನೀಡುವಂತೆ ಒತ್ತಡ ಹಾಕುತ್ತೀರಿ. ಆದರೆ ಆತ ಇದಕ್ಕೆ ಒಪ್ಪುದಿಲ್ಲ" ಇದರಿಂದ ಸಮಸ್ಯೆ ಆಗುತ್ತೆ ಎಂದಿದ್ದಾರೆ.

  ಎಲ್ಲರ ನೆಮ್ಮದಿ ಹಾಳು

  ಎಲ್ಲರ ನೆಮ್ಮದಿ ಹಾಳು

  "ಇದು ಪ್ರೀತಿಸುತ್ತಿರುವ ಹುಡುಗಿಯರ ಕೋಪಕ್ಕೆ ಕಾರಣವಾಗುತ್ತೆ. ಪತ್ನಿಗೆ ಕರೆ ಮಾಡಿ ಈತನ ಬಣ್ಣ ಬಯಲು ಮಾಡುತ್ತೀರಿ. ಇದರಿಂದ ಗೊಂದಲಗಳಾಗಿ ಆತ ನಿಮ್ಮನ್ನು ದೂರ ತಳ್ಳುತ್ತಾನೆ. ಎಲ್ಲರ ನೆಮ್ಮದಿ ಹಾಳಾಗುತ್ತೆ" ಹಾಗಾಗಿ ಮದುವೆ ಆದ ಪುರುಷರ ಸಹವಾಸ ಮಾಡಬೇಡಿ ಎಂದು ನೀನಾ ಸಲಹೆ ನೀಡಿದ್ದಾರೆ.

  English summary
  Bollywood Actress Neena Gupta revealed her life story. She said don't get involved married men.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X