twitter
    For Quick Alerts
    ALLOW NOTIFICATIONS  
    For Daily Alerts

    ಸೋನು ಸೂದ್ ಆಪ್ತ ಗೆಳತಿ, ಯಾರಿದು ನೀತಿ ಗೋಯಲ್?

    |

    ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡುವ ಸೋನು ಸೂದ್, ನಿಜ ಜೀವನದಲ್ಲಿ ಹೀರೋ ಎಂಬುದನ್ನು ಕೊರೊನಾ ಸಂಕಷ್ಟದ ಸೋನು ಸೂದ್ ಮಾಡಿದ ಕಾರ್ಯಗಳು ಜಗಕ್ಕೆ ಸಾರಿ ಹೇಳಿವೆ.

    Recommended Video

    ಅಂದು ರಾಜ್ ಕುಮಾರ್ ಇಂದು ರಚಿತಾ | Rachita Ram statement | Filmibeat Kannada

    ಕಾರ್ಮಿಕರಿಗೆ, ಕೊರೊನಾ ವಾರಿಯರ್‌ಗಳಿಗೆ, ವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ ನೆರವು ಕೇಳಿದ ಎಲ್ಲರಿಗೂ ಸಹಾಯ ಹಸ್ತ ಚಾಚಿದ್ದಾರೆ ನಟ ಸೋನು ಸೂದ್.

    ಅಧಿಕಾರ, ಸರ್ಕಾರದ ಹಣ ಎಲ್ಲವೂ ಉಳ್ಳ ಮಂತ್ರಿಯೊಬ್ಬರು ಮಾಡಬಹುದಾಗಿದ್ದ ಕಾರ್ಯದ ಹತ್ತು ಪಟ್ಟು ಕಾರ್ಯವನ್ನು ಸೋನು ಸೂದ್, ಸ್ವಂತ ಹಣದಿಂದ, ಸ್ವಂತ ತಂಡದ ಸಹಾಯದಿಂದ ಮಾಡಿದ್ದಾರೆ. ಅವರ ಸಮಾಜ ಸೇವೆ ಇನ್ನೂ ನಡೆಯುತ್ತಲೇ ಇದೆ.

    ವಾರಿಯರ್ ಅಜ್ಜಿಗೆ ಸೋನು ಸೂದ್ ಸಹಾಯ: ಮಾರ್ಷಲ್ ಆರ್ಟ್ಸ್ ತರಬೇತಿ ಶಾಲೆ ನಿರ್ಮಿಸಿದ ನಟವಾರಿಯರ್ ಅಜ್ಜಿಗೆ ಸೋನು ಸೂದ್ ಸಹಾಯ: ಮಾರ್ಷಲ್ ಆರ್ಟ್ಸ್ ತರಬೇತಿ ಶಾಲೆ ನಿರ್ಮಿಸಿದ ನಟ

    ಸೋನು ಸೂದ್ ಸಹಾಯ ಮಾಡಿದ ಚಿತ್ರಗಳು ವಿಡಿಯೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಈ ಚಿತ್ರಗಳು, ವಿಡಿಯೋಗಳನ್ನು ನೀವು ಸೂಕ್ಷ್ಮವಾಗಿ ಗಮಿನಿಸಿದರೆ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಸೂನು ಸೂದ್ ಜೊತೆಗೆ ಮುಖಕ್ಕೆ ಮಾಸ್ಕ್ ಹಾಕಿರುವ ಮಹಿಳೆಯೊಬ್ಬರು ಕಂಡು ಬರುತ್ತಾರೆ. ಯಾರೀ ಮಹಿಳೆ?

    ಸೋನು ಸೂದ್ ಮಾಡಿದ ಕಾರ್ಯದಲ್ಲಿ ಈ ಮಹಿಳೆಯ ಪಾಲು ಇದೆ

    ಸೋನು ಸೂದ್ ಮಾಡಿದ ಕಾರ್ಯದಲ್ಲಿ ಈ ಮಹಿಳೆಯ ಪಾಲು ಇದೆ

    ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸೋನು ಸೂದ್ ಮಾಡಿದ ಬಹುತೇಕ ಒಳ್ಳೆಯ ಕಾರ್ಯಸಗಳಲ್ಲಿ ಈ ಮಹಿಳೆಯದ್ದೂ ಪಾಲಿದೆ. ಈ ಮಹಿಳೆ ಹೆಸರು ನೀತಿ ಗೋಯಲ್. ಸೋನು ಸೂದ್ ಮಾಡಿದ ಒಳ್ಳೆಯ ಕಾರ್ಯಗಳಿಗೆ ಹೆಗಲಾಗಿದ್ದವರು ಈಕೆ.

    ರೆಸ್ಟೋರೆಂಟ್ ಬ್ಯುಸಿನೆಸ್ ಮಾಡುವ ನೀತಿ ಗೋಯಲ್

    ರೆಸ್ಟೋರೆಂಟ್ ಬ್ಯುಸಿನೆಸ್ ಮಾಡುವ ನೀತಿ ಗೋಯಲ್

    ರೆಸ್ಟೋರೆಂಟ್ ಬ್ಯುಸಿನೆಸ್ ನಿರ್ವಹಿಸುವ ನೀತಿ ಗೋಯಲ್, ಸೋನು ಸೂದ್‌ ಗೆ ಹಳೆಯ ಗೆಳತಿ. ಕೊರೊನಾ ಸಂಕಷ್ಟದಲ್ಲಿ ಇಬ್ಬರೂ ಸೇರಿ ಆಹಾರ ಉಚಿತವಾಗಿ ನೀಡಲು ಪ್ರಾರಂಭಿಸಿದರು. ನೂರು ಆಹಾರದ ಪೊಟ್ಟಣಗಳಿಂದ ಪ್ರಾರಂಭವಾದ ಇವರಿಬ್ಬರ ಸೇವೆ ಇಂದು ದಿನಕ್ಕೆ 45,000 ಊಟಗಳನ್ನು ಹಂಚುವವರೆಗೆ ತಲುಪಿದೆ. 'ಕಾನಾಚಾಹಿಯೆ' ಎಂಬ ಅಭಿಯಾನವನ್ನೇ ನಡೆಸುತ್ತಿದ್ದಾರೆ ನೀತಿ ಗೋಯಲ್.

    ಪ್ರವಾಹದಿಂದ ಹಾನಿಗೊಳಗಾದ ಕುಟುಂಬಕ್ಕೆ ಎಮ್ಮೆ ಖರೀದಿಸಿ ಸೋನು ಸೂದ್ ಹೇಳಿದ್ದೇನು?ಪ್ರವಾಹದಿಂದ ಹಾನಿಗೊಳಗಾದ ಕುಟುಂಬಕ್ಕೆ ಎಮ್ಮೆ ಖರೀದಿಸಿ ಸೋನು ಸೂದ್ ಹೇಳಿದ್ದೇನು?

    ಸಂದರ್ಶನಗಳಲ್ಲಿ ನೀತಿ ಘೋಯಲ್ ಅವರನ್ನು ಉಲ್ಲೇಖಿಸುತ್ತಾರೆ ಸೋನು

    ಸಂದರ್ಶನಗಳಲ್ಲಿ ನೀತಿ ಘೋಯಲ್ ಅವರನ್ನು ಉಲ್ಲೇಖಿಸುತ್ತಾರೆ ಸೋನು

    ಸೋನು ಸೂದ್ ಸಹ ನೀತಿ ಗೋಯಲ್ ಅವರನ್ನು ಹಲವು ಸಂದರ್ಶನಗಳಲ್ಲಿ ಉಲ್ಲೇಖಿಸಿದ್ದಾರೆ. 'ಆಕೆ ನನ್ನ ಒಳ್ಳೆಯ ಗೆಳತಿ. ನಾವಿಬ್ಬರೂ ಸೇರಿ 'ಘರ್ ಬೇಜೋ' (ಮನೆಗೆ ತಲುಪಿಸಿ) ಅಭಿಯಾನವನ್ನು ಪ್ರಾರಂಭಿಸಿದೆವು. ಮೊದಲಿಗೆ ಕರ್ನಾಟಕದ ಕಾರ್ಮಿಕರನ್ನು 21 ಬಸ್‌ ಗಳ ಮೂಲಕ ಮನೆಗೆ ಕಳುಹಿಸಿದೆವು ಆನಂತರ ದೇಶದ ಕಾರ್ಮಿಕರನ್ನು ಅವರ ಮನೆಗೆ ಕಳುಹಿಸುವ ಕಾರ್ಯ ಮಾಡಿದೆವು ಎಂದು ಸಂದರ್ಶನದಲ್ಲಿ ಹೇಳಿದ್ದರು ಸೋನು ಸೂದ್.

    ಎಲ್ಲೆಡೆ ನೀತಿ ಅವರನ್ನು ಕರೆದುಕೊಂಡು ಹೋಗ್ತಾರೆ ಸೋನು

    ಎಲ್ಲೆಡೆ ನೀತಿ ಅವರನ್ನು ಕರೆದುಕೊಂಡು ಹೋಗ್ತಾರೆ ಸೋನು

    ಕಾರ್ಮಿಕರನ್ನು ಮನೆಗೆ ತಲುಪಿಸುವ ಕಾರ್ಯ, ಆಹಾರ ಹಂಚುವ ಕಾರ್ಯ, ಆಸ್ಪತ್ರೆ ಭೇಟಿ ಎಲ್ಲೆಡೆ ಸೋನು ಸೂದ್ ಜೊತೆಗೆ ನೀತಿ ಗೋಯಲ್ ಇದ್ದೇ ಇರುತ್ತಾರೆ. ಕೆಲವು ರಾಜಕಾರಣಿಗಳು ಸೋನು ಸೂದ್ ಅವರನ್ನು ಭೇಟಿಗೆ ಆಹ್ವಾನಿಸಿದ್ದಾಗಲೂ ಸಹ ಸೋನು ಸೂದ್ ಗೆಳತಿ ನೀತಿ ಘೋಯಲ್ ಅವರನ್ನು ಕರೆದುಕೊಂಡು ಹೋಗಿದ್ದರು. ಕಪಿಲ್ ಶರ್ಮಾ ಶೋ ಗೂ ಸಹ ಸೋನು ಸೂದ್ ಅವರು ನೀತಿ ಅವರನ್ನು ಕರೆದುಕೊಂಡು ಹೋಗಿದ್ದರು.

    ಯಾದಗಿರಿಯ ಬಡ ದಂಪತಿ ಮೊಬೈಲ್‌ಗೆ ಸೋನು ಸೂದ್ ಸಂದೇಶ!ಯಾದಗಿರಿಯ ಬಡ ದಂಪತಿ ಮೊಬೈಲ್‌ಗೆ ಸೋನು ಸೂದ್ ಸಂದೇಶ!

    English summary
    Neeti Goel is the woman who supported Sonu Sood to his good works done in lock down time. both were very good friends.
    Saturday, August 29, 2020, 12:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X