Just In
Don't Miss!
- Sports
SMAT: ಅನಿರುದ್ಧ ಜೋಶಿ ಅರ್ಧ ಶತಕ, ರೈಲ್ವೇಸ್ ಮಣಿಸಿದ ಕರ್ನಾಟಕ
- Automobiles
ವರ್ಕ್ ಫ್ರಂ ವ್ಯಾನ್ ಅನುಭವವನ್ನು ನೀಡಲಿದೆ ನಿಸ್ಸಾನ್ ಕಂಪನಿಯ ಈ ವಾಹನ
- News
ನಿಯಮ ಉಲ್ಲಂಘಿಸಿದ ಚಿತ್ರದುರ್ಗದ ಅಬಕಾರಿ ಡಿಸಿ ಅಮಾನತ್ತಿಗೆ ಶಿಫಾರಸ್ಸು
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೊರೊನಾ ಪರೀಕ್ಷೆ ವಿಡಿಯೋ ಟ್ರೋಲ್ ಆಗುತ್ತಿದ್ದಂತೆ ಡಿಲೀಟ್ ಮಾಡಿದ ನಟಿ ನೀತು ಕಪೂರ್
ಬಾಲಿವುಡ್ ಹಿರಿಯ ನಟಿ ನೀತು ಕಪೂರ್ ಅನೇಕ ವರ್ಷಗಳ ಬಳಿಕ ಬೆಳ್ಳಿ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. ಅದ್ಭುತ ನಟನೆಯ ಮೂಲಕ ಚಿತ್ರಪ್ರೇಕ್ಷಕರ ಗಮನ ಸೆಳೆದಿದ್ದ ನೀತು ಕಪೂರ್ 2013ರ ಬಳಿಕ ಮತ್ತೆ ಬಣ್ಣಹಚ್ಚಿರಲಿಲ್ಲ. ಇದೀಗ ಮತ್ತೆ ನೀತು ಬಣ್ಣದ ಲೋಕಕ್ಕೆ ವಾಪಸ್ ಆಗಿದ್ದಾರೆ.
ಸದ್ಯ ನೀತು ತನ್ನ ಹೊಸ ಸಿನಿಮಾದ ಚಿತ್ರೀಕರಣಕ್ಕೆ ಹೊರಟಿದ್ದಾರೆ. ಧರ್ಮ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಜಗ್ ಜಗ್ ಜೀಯೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಿದ್ದು, ನಿಯಮದಂತೆ ನೀತು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ನೀತು ಕೊರೊನಾ ಪರೀಕ್ಷೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ..
ಕೊರೊನಾ ಭಯ: ಬಿಡುಗಡೆ ಮುಂದೂಡಿದ ಪ್ರಮುಖ ಹಾಲಿವುಡ್ ಸಿನಿಮಾಗಳು

ನೀತು ಕಪೂರ್ ಕೊರೊನಾ ಪರೀಕ್ಷೆ ವಿಡಿಯೋ ಟ್ರೋಲ್
ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ನೀತು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ವಿಡಿಯೋ ನೋಡಿದ ನೆಟ್ಟಿಗರು ಟ್ರೋಲ್ ಮಾಡಲು ಪ್ರಾರಂಭಿಸಿದರು. ಟ್ರೋಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ನೀತು ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.

ಸ್ವ್ಯಾಬ್ ಸ್ಯಾಂಪಲ್ ಸರಿಯಾಗಿ ಕಲೆಕ್ಟ್ ಮಾಡದ ವಾರಿಯರ್ಸ್
ಅಷ್ಟಕ್ಕೂ ವಿಡಿಯೋ ಟ್ರೋಲ್ ಆಗಲು ಕಾರಣ ಸ್ವ್ಯಾಬ್ ಸ್ಯಾಂಪಲ್ ಸರಿಯಾಗಿ ಕಲೆಕ್ಟ್ ಮಾಡದೆ ಇರುವುದ. ಹೌದು, ಕೊರೊನಾ ಪರೀಕ್ಷೆ ವೇೆಳೆ ಸ್ವ್ಯಾಬ್ ಸ್ಯಾಂಪಲ್ ತೆಗೆಯಲಾಗುತ್ತೆ. ಗಂಟಲಿನ ಆಳಕ್ಕೆ ಕಾಟನ್ ಸ್ಟಿಕ್ ಹಾಕುತ್ತಾರೆ, ಹಾಗೆ ಮೂಗಿನೊಳಗೂ ಹಾಕಿ ಸ್ಯಾಂಪಲ್ ತೆಗೆದುಕೊಳ್ಳಲಾಗುತ್ತದೆ.
ಕೊರೊನಾ ಕಾರಣಕ್ಕೆ ವಿಜಯ್ ಸೇತುಪತಿ ಮೇಲೆ ಸಿಟ್ಟಾದ ಶ್ರುತಿ ಹಾಸನ್

ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ನೆಟ್ಟಿಗರ ಸಲಹೆ
ಆದರೆ ನೀತು ಕಪೂರ್ ಗೆ ಸರಿಯಾಗಿ ಸ್ಯಾಂಪಲ್ ಕಲೆಕ್ಟ್ ಮಾಡಿಲ್ಲ. ವಿಡಿಯೋ ನೋಡಿದ ನೆಟ್ಟಿಗರು ಟ್ರೋಲ್ ಇದು ಯಾವ ರೀತಿಯಾ ಪರೀಕ್ಷೆ ಎಂದು ಪ್ರಶ್ನಿಸುತ್ತಿದ್ದಾರೆ. 'ನೀತು ಜೀ ನಿಮ್ಮ ಕೊರೊನಾ ಪರೀಕ್ಷೆ ಸರಿಯಾಗಿಲ್ಲ, ಸ್ವ್ಯಾಬ್ ಸ್ಯಾಂಪಲ್ ಸರಿಯಾಗಿ ಸಿಕ್ಕಿಲ್ಲ, ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ' ಎಂದು ಹೇಳುತ್ತಿದ್ದಾರೆ. ನೆಟ್ಟಿಗರು ತರವೇವಾರಿ ಕಾಮೆಂಟ್ಸ್ ಮಾಡುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ್ದಾರೆ.
ಸಲ್ಮಾನ್‌ಗೆ ಕೊರೊನಾ ಪರೀಕ್ಷೆ, ನಿಟ್ಟುಸಿರು ಬಿಟ್ಟ ಖಾನ್ ಕುಟುಂಬ

7 ವರ್ಷದ ಬಳಿಕ ಮತ್ತೆ ನಟನೆ
ನಟಿ ನೀತು ಕೊನೆಯದಾಗಿ ಜಬ್ ತಕ್ ಹೇ ಜಾನ್ ಮತ್ತು ಬೆಶರಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ 7 ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಅನಿಲ್ ಕಪೂರ್ ಮತ್ತು ಕಿಯಾರ ಅಡ್ವಾಣಿ, ವರುಣ್ ಧವನ್ ನಟನೆಯ ಜಗ್ ಜಗ್ ಜೀಯೋ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.