For Quick Alerts
  ALLOW NOTIFICATIONS  
  For Daily Alerts

  ಮಕ್ಕಳಿಂದ ದೂರ ವಾಸಿಸುತ್ತಿರುವುದೇಕೆ ಎಂದು ಕಾರಣ ಬಿಚ್ಚಿಟ್ಟ ರಣಬೀರ್ ತಾಯಿ ನೀತು ಕಪೂರ್

  |

  ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ತಾಯಿ ನೀತು ಕಪೂರ್ ತನ್ನ ಮಕ್ಕಳಿಂದ ದೂರ ವಾಸಿಸುತ್ತಿರುವುದೇಕೆ ಎಂದು ಕಾರಣ ಬಿಚ್ಚಿಟ್ಟಿದ್ದಾರೆ. ಒಂದು ಕಾಲದ ಜನಪ್ರಿಯ ನಟಿ ನೀತು ಕಪೂರ್, ಪತಿ ರಿಷಿ ಕಪೂರ್ ನಿಧನದ ಬಳಿಕ ಒಬ್ಬೊಂಟಿಯಾಗಿ ಬದುಕುತ್ತಿದ್ದಾರೆ.

  ಬಾಲಿವುಡ್ ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನೀತು ಕಪೂರ್ 1980ರಲ್ಲಿ ಖ್ಯಾತ ನಟ ರಿಷಿ ಕಪೂರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗೆ ರಣಬೀರ್ ಕಪೂರ್ ಮತ್ತು ರಿಧಿಮಾ ಕಪೂರ್ ಇಬ್ಬರು ಮಕ್ಕಳಿದ್ದಾರೆ. ರಣಬೀರ್ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಆದರೆ ಮಗಳು ರಿಧಿಮಾ ಮದುವೆಯಾಗಿ ವೈವಾಹಿಕ ಜೀವನ ನಡೆಸುತ್ತಿದ್ದಾರೆ.

  ಮುಂಬೈನಲ್ಲಿ ಕೊರೊನಾ ಕಾಟ, ಊರು ಬಿಟ್ಟು ಸೆಲೆಬ್ರಿಟಿಗಳು: ಕಾಲೆಳೆದ ನೆಟ್ಟಿಗರುಮುಂಬೈನಲ್ಲಿ ಕೊರೊನಾ ಕಾಟ, ಊರು ಬಿಟ್ಟು ಸೆಲೆಬ್ರಿಟಿಗಳು: ಕಾಲೆಳೆದ ನೆಟ್ಟಿಗರು

  ನೀತು ಕಪೂರ್ ಪತಿ ರಿಷಿ ಕಪೂರ್ ಕಳೆದ ವರ್ಷ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಿಷಿ ಕಪೂರ್ ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ನಿಧನರಾಗಿದ್ದಾರೆ. ಪತಿಯ ನಿಧನದ ಬಳಿಕ ನೀತು ಮಕ್ಕಳಿಂದ ದೂರ ಇದ್ದು ಒಬ್ಬರೇ ಬದುಕುತ್ತಿದ್ದಾರೆ. ಕೆಲವು ದಿನಗಳು ಮಗಳು ರಿಧಿಮಾ ಜೊತೆ ಇದ್ದ ನೀತು ಬಳಿಕ ಮಗಳನ್ನು ಸಹ ಗಂಡನ ಮನೆಗೆ ಕಳುಹಿಸಿ ಪ್ರತ್ಯೇಕವಾಗಿ ಜೀವಿಸುತ್ತಿದ್ದಾರೆ. ಇದಕ್ಕೆ ಕಾರಣ ಬಿಚ್ಚಿಟ್ಟ ನೀತು ತನ್ನ ಖಾಸಗಿತನಕ್ಕೆ ಸಮಯ ಸಿಗಬೇಕು ಎಂದು ಹೇಳಿದ್ದಾರೆ. ಮುಂದೆ ಓದಿ...

  ಮಕ್ಕಳಿಂದ ದೂರ ಇರುವ ನೀತು ಕಪೂರ್

  ಮಕ್ಕಳಿಂದ ದೂರ ಇರುವ ನೀತು ಕಪೂರ್

  ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ನೀತು, 'ಅವರು ಅವರದೇ ಜೀವನದಲ್ಲಿ ಬ್ಯುಸಿಯಾಗಿರಬೇಕೆಂದು ಬಯಸುತ್ತೇನೆ. ಅವರಿಗೆ ನಾನು, ನನ್ನ ಹೃದಯದಲ್ಲಿ ಇರಿ, ನನ್ನ ತಲೆಯ ಮೇಲೆ ನಿಲ್ಲಬೇಡಿ ಎಂದು ಹೇಳುತ್ತೇನೆ.' ಎಂದಿದ್ದಾರೆ.

  ಮಗಳ ಜೊತೆ ಇದ್ದು ಒತ್ತಡ ಅನುಭವಿಸಿದ್ದೆ

  ಮಗಳ ಜೊತೆ ಇದ್ದು ಒತ್ತಡ ಅನುಭವಿಸಿದ್ದೆ

  'ಕೊರೊನಾ ಲಾಕ್ ಡೌನ್ ವೇಳೆ ರಿಧಿಮಾ ನನ್ನ ಜೊತೆಯೇ ಇದ್ದಳು. ಅವಳು ಹಿಂದಿರುಗಲು ಸಾಧ್ಯವಾಗದ ಕಾರಣ ನಾನು ತುಂಬಾ ಒತ್ತಡಕ್ಕೆ ಒಳಗಾಗಿದ್ದೆ. ನಾನು ಅವಳಿಗೆ ವಾಪಸ್ ಹೋಗಲು ಹೇಳುತ್ತಿದ್ದೆ. ನಾನು ನನ್ನ ಖಾಸಗಿತನವನ್ನು ಇಷ್ಟಪಡುತ್ತೇನೆ. ನಾನು ಈ ಬದುಕಿಗೆ ಹೊಂದಿಕೊಂಡಿದ್ದೇನೆ' ಎಂದು ಹೇಳಿದ್ದಾರೆ.

  ರಣ್ಬೀರ್ ಕಪೂರ್ ಮೊದಲ ಸಂಭಾವನೆಯಿಂದ ಖರೀದಿ ಮಾಡಿದ ವಸ್ತುವೇನು?ರಣ್ಬೀರ್ ಕಪೂರ್ ಮೊದಲ ಸಂಭಾವನೆಯಿಂದ ಖರೀದಿ ಮಾಡಿದ ವಸ್ತುವೇನು?

  ಕೆಲವು ವರ್ಷಗಳ ಹಿಂದೆ ನಾನು ಹೀಗೆ ಇರಲಿಲ್ಲ; ನೀತು

  ಕೆಲವು ವರ್ಷಗಳ ಹಿಂದೆ ನಾನು ಹೀಗೆ ಇರಲಿಲ್ಲ; ನೀತು

  ಕೆಲವು ವರ್ಷಗಳ ಹಿಂದೆ ನೀತು ಹೀಗೆ ಇರಲಿಲ್ಲವಂತೆ. 'ಪುತ್ರಿ ರಿಧಿಮಾ ವಿದ್ಯಾಭ್ಯಾಸಕ್ಕೆಂದು ಲಂಡನ್ ಗೆ ಹೋದಾಗ ನಾನು ಅನೇಕ ದಿನಗಳ ವರೆಗೆ ಕಣ್ಣೀರು ಹಾಕುತ್ತಿದ್ದೆ. ಅವಳನ್ನು ಭೇಟಿಯಾಗಲು ಬಂದು ಅವಳಿಗೆ ಗುಡ್ ಬೈ ಹೇಳಿದರೆ ಕಣ್ಣೀರು ಹಾಕುತ್ತಿದೆ. ಆದರೆ ರಣಬೀರ್ ವಿದೇಶಕ್ಕೆ ಹೋಗುವ ಸಮಯದಲ್ಲಿ ನಾನು ಅಳುತ್ತಿರಲಿಲ್ಲ. ಆಗ ರಣಬೀರ್ ನನ್ನ ಮೇಲೆ ಪ್ರೀತಿ ಇಲ್ಲ ಎಂದು ಹೇಳುತ್ತಿದ್ದ. ಆದರೆ ಅದು ಹಾಗಲ್ಲ. ಮಕ್ಕಳಿಂದ ದೂರ ಇದ್ದು ಬದುಕುವುದು ಅಭ್ಯಾಸವಾಗಿ ಬಿಟ್ಟಿತ್ತು. ಅವರು ವಿದೇಶದಲ್ಲಿ ಇದ್ದಾಗ ನನ್ನ ತುಂಬಾ ಸ್ಟ್ರಾಂಗ್ ಆದೆ. ಒಬ್ಬೊಂಟಿಯಾಗಿ ಬದುಕುವುದನ್ನು ಕಲಿತೆ' ಎಂದಿದ್ದಾರೆ.

  ನನ್ನ ತಾಯಿ ಯಾರು ಅಂತಾ ಗೊತ್ತಾಗೋದೇ ಬೇಡ ಅಂದ್ರು ಶರಣ್ | Filmibeat Kannada
  ಮತ್ತೆ ತೆರೆಮೇಲೆ ಮಿಂಚಲು ಸಜ್ಜಾಗಿರುವ ನೀತು

  ಮತ್ತೆ ತೆರೆಮೇಲೆ ಮಿಂಚಲು ಸಜ್ಜಾಗಿರುವ ನೀತು

  ನೀತು ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ್ದಾರೆ. ಪತಿಯ ನಿಧನದ ಬಳಿಕ ತೆರೆಮೇಲೆ ಮಿಂಚಲು ಸಜ್ಜಾಗಿರುವ ನೀತು ಕಪೂರ್ ಜುಗ್ ಜುಗ್ ಜಿಯೋ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಸಜ್ಜಾಗಿದ್ದಾರೆ. ಚಿತ್ರದಲ್ಲಿ ವರುಣ್ ಧವನ್ ಮತ್ತು ಕಿಯಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Bollywood senior Actress Neetu Kapoor reveals why she doesn't live with childrens.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X