ಕಾಲೆಳೆದವರಿಗೆ ಉತ್ತರ ಕೊಟ್ಟ ನೇಹಾ ಧೂಪಿಯಾ: ಗರ್ಭಿಣಿ ಫೋಟೋ ಬಹಿರಂಗ
ನಟಿ ನೇಹಾ ಧೂಪಿಯಾ ಮತ್ತು ಅಂಗದ್ ಸಿಂಗ್ ಬೇಡಿ ಸದ್ಡು ಮಾಡದೆ, ಸುದ್ದಿ ಆಗದೇ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೇ 10, 2018 ರಂದು ಇಬ್ಬರು ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು. ಇದೀಗ, ನೇಹಾ ಧೂಪಿಯಾ ಗರ್ಭಿಣಿ ಎನ್ನುವ ಸುದ್ದಿ ಹರಿದಾಡಿತ್ತು.
ಮದುವೆ ಆಗಿ ಸರಿಯಾಗಿ ಮೂರು ತಿಂಗಳು ಆಗಿಲ್ಲ, ಅಷ್ಟರಲ್ಲೇ ಗರ್ಭಿಣಿ ಎನ್ನುವ ಸುದ್ದಿ ಕೆಲವು ಅನುಮಾನಗಳಿಗೆ ಜಾಗ ಮಾಡಿಕೊಟ್ಟಿತ್ತು. ಅಂದ್ರೆ, ನೇಹಾ ಧೂಪಿಯಾ ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದರು ಎಂಬ ವಿಷ್ಯ ಚರ್ಚೆಯಾಯಿತು. ಹಾಗಾಗಿಯೇ ಇಬ್ಬರು ತುಂಬಾ ಅವಸರವಾಗಿ, ತುಂಬಾ ಸರಳವಾಗಿ ವಿವಾಹ ಮಾಡಿಕೊಂಡರು ಎನ್ನಲಾಯಿತು.
ಈ ಬಗ್ಗೆ ಎಲ್ಲಿಯೂ ಸ್ಪಷ್ಟನೆ ನೀಡದ ಜೋಡಿ ಸುಮ್ಮನಿರುವ ಮೂಲಕ ಮತ್ತಷ್ಟು ಅನುಮಾನ ಉಂಟು ಮಾಡಿದ್ದರು. ಆದ್ರೀಗ, ನೇಹಾ ಧೂಪಿಯಾ ಗರ್ಭಿಣಿ ಎನ್ನುವುದನ್ನ ಸ್ವತಃ ದಂಪತಿಗಳೇ ಅಧಿಕೃತವಾಗಿ ಘೋಷಿಸಿದ್ದಾರೆ.

ನೇಹಾ ಧೂಪಿಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ದಂಪತಿಗಳು ಒಟ್ಟಿಗೆ ಇರುವ ಫೋಟೋ ಹಾಕಿದ್ದು, 'ಇನ್ಮುಂದೆ ನಾವು ಮೂರು ಜನ' ಎಂದು ಅಡಿಬರಹ ನೀಡಿದ್ದಾರೆ. ನೇಹಾ ಧೂಪಿಯಾ ಗರ್ಭಿಣಿ ಆಗಿರುವುದು ಫೋಟೋದಲ್ಲಿ ಖಚಿತವಾಗಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅಭಿಮಾನಿಗಳು ಅಂಗದ್ ಬೇಡಿ ಮತ್ತು ನೇಹಾ ಧೂಪಿಯಾಗೆ ಶುಭಕೋರಿದ್ದಾರೆ. ಇನ್ನು ಕೆಲವರು ಮದುವೆ ಆಗಿ ಬರಿ ಮೂರು ತಿಂಗಳಾಗಿದೆ. ಹಾಗಿದ್ದರೇ, ಮದುವೆಗೂ ಮುಂಚೆಯೇ ಗರ್ಭಿಣಿಯಾಗಿರಬೇಕು ಎಂದು ಕಾಲೆಳೆಯುತ್ತಿದ್ದಾರೆ.
ಮದುವೆಗೂ ಮುನ್ನವೇ ನೇಹಾ ಧೂಪಿಯಾ ಗರ್ಭಿಣಿ ಆಗಿದ್ದರು ಅನ್ನೋದು ಶುದ್ಧ ಸುಳ್ಳು ಸುದ್ದಿ. ಆ ತರಹ ಏನೂ ಇರಲಿಲ್ಲ. ಇದ್ದಕ್ಕಿದ್ದಂತೆ ಇಬ್ಬರೂ ಮದುವೆ ಆಗಿದ್ರಿಂದ, ಈ ತರಹ ಗಾಳಿಮಾತು ಕೇಳಿಬರುತ್ತಿದೆ ಅಷ್ಟೇ. ಕೆಲವರು ತಮಗೆ ಇಷ್ಟಬಂದಂತೆ ರೂಮರ್ಸ್ ಹಬ್ಬಿಸುತ್ತಿರುತ್ತಾರೆ'' ಎಂದು ದಿನಪತ್ರಿಕೆಯೊಂದಕ್ಕೆ ನೇಹಾ ಧೂಪಿಯಾ ತಂದೆ ಪ್ರದೀಪ್ ಧೂಪಿಯಾ ಸ್ಪಷ್ಟನೆ ಕೊಟ್ಟಿದ್ದರು.


Click it and Unblock the Notifications











