For Quick Alerts
  ALLOW NOTIFICATIONS  
  For Daily Alerts

  ರಾಹುಲ್ ಗಾಂಧಿ ಗಡ್ಡಕ್ಕೆ ಕೈ ಹಾಕಿದ ಹಾಟ್ ಚೆಲುವೆ

  By Rajendra
  |

  'ಸಿಂಗ್ ಈಸ್ ಕಿಂಗ್' ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಮಾಜಿ ಮಿಸ್ ಇಂಡಿಯಾ ನೇಹಾ ಧುಪಿಯಾ ರಾಜಕಾರಣಿಗಳಿಗೆ ಗ್ಲಾಮರ್ ಪಾಠ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ನೇಹಾ ನುಣುಪಾದಂತಹ ಸಲಹೆ ಕೊಟ್ಟಿದ್ದಾರೆ.

  ಬರಲಿರುವ ಲೋಕಸಭೆ ಚುನಾವಣೆಗಾಗಿ ರಾಹುಲ್ ಗಾಂಧಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಅವರಿಗೆ ಪಾಪ ಗಡ್ಡ ಬೋಳಿಸಿಕೊಳ್ಳಲೂ ಸಮಯ ಸಿಗುತ್ತಿದೆಯೋ ಇಲ್ಲವೋ. ಅವರು ನುಣ್ಣಗೆ ಶೇವ್ ಮಾಡಿಕೊಂಡರೆ ಇನ್ನಷ್ಟು ಸುಂದರವಾಗಿ ಕಾಣಿಸುತ್ತಾರೆ ಎಂದು ನೇರವಾಗಿ ಅವರ ಗಡ್ಡಕ್ಕೇ ಕೈ ಹಾಕಿದ್ದಾರೆ ನೇಹಾ ಧುಪಿಯಾ.

  ರಾಹುಲ್ ಗಾಂಧಿ ಗಡ್ಡ ಬೆಳೆಸಿದಕ್ಕೆ ಹೋಲಿಸಿದರೆ ನೀಟಾಗಿ ಬೋಳಿಸಿದಾಗಲೇ ಅಂದವಾಗಿ ಕಾಣುತ್ತಾರೆ ಎಂದಿದ್ದಾರೆ ನೇಹಾ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, "ರಾಹುಲ್ ನುಣ್ಣಗೆ ಶೇವ್ ಮಾಡಿಕೊಂಡಿದ್ದನ್ನು ನೋಡಬೇಕೆಂದಿದ್ದೇನೆ..."ಎಂದು ತಮ್ಮ ಆಸೆ ತೋಡಿಕೊಂಡಿದ್ದಾರೆ.

  "ಅವರು ಗಡ್ಡ ಬೋಳಿಸಿದಾಗ ಚೆನ್ನಾಗಿ ಕಾಣಿಸುತ್ತಾರೆ. ಇನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಗಡ್ಡದಲ್ಲಿ ಕಾಣಿಸುತ್ತಿರುವುದು ಸಾಮಾನ್ಯವಾಗಿದೆ. ಮೋದಿಗಿಂತಲೂ ರಾಹುಲ್ ವಯಸ್ಸಿನಲ್ಲಿ ಚಿಕ್ಕವರಾದ ಕಾರಣ ಗಡ್ಡ ತೆಗೆದರೆ ಚೆನ್ನಾಗಿರುತ್ತದೆ" ಎಂದಿದ್ದಾರೆ ನೇಹಾ.

  ಬಳಿಕ ನೇಹಾ ಮಾತು ಬಿಕಿನಿ ಕಡೆಗೆ ಹೊರಳಿತು. ಈಗ ಅವಶ್ಯಕತೆ ಇರಲಿ ಬಿಡಲಿ ಬಿಕಿನಿ ತೊಡುವುದು ಸಿನಿಮಾಗಳಲ್ಲಿ ಸಾಮಾನ್ಯವಾಗಿದೆ. ನಿರ್ದೇಶಕ, ನಿರ್ಮಾಪಕರು ಅದನ್ನೇ ಕಮರ್ಷಿಯಲ್ ಎಂದು ಭಾವಿಸುತ್ತಿದ್ದಾರೆ. ಮಾಧ್ಯಮಗಳು ಸಹ ಹೆಚ್ಚು ಪ್ರಚಾರ ನೀಡುತ್ತಿವೆ. ಚಿತ್ರದಲ್ಲಿ ಕಥೆ ಇಲ್ಲದೆ ಬರೀ ಬಿಕಿನಿ ತೋರಿಸುವುದರಿಂದ ನಯಾಪೈಸೆ ಪ್ರಯೋಜನವಿಲ್ಲ ಎಂದಿದ್ದಾರೆ. (ಏಜೆನ್ಸೀಸ್)

  English summary
  Actress Neha Dhupia has a piece of advice for Congress vice-president Rahul Gandhi to sport a clean-shaven look rather than his rugged one."Rahul has donned many looks in the past. But I would like to see him in a clean-shaven look because he looks good in it. Modi's look has become common now. Since Rahul is younger to him, so he can have the suave look," she said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X