ಮದುವೆಗೂ ಮುನ್ನ ಗರ್ಭಿಣಿಯಾಗಿದ್ದೆ.. ಅದರಿಂದ ಒಳ್ಳೆದಾಯ್ತು; ಖ್ಯಾತ ನಟಿ ಅಚ್ಚರಿಯ ಹೇಳಿಕೆ

ಚಿತ್ರರಂಗದಲ್ಲಿ ಲವ್, ಬ್ರೇಕಪ್ ಹೊಸದೇನು ಅಲ್ಲ. ಆದರೆ ಕೆಲವೊಮ್ಮೆ ಭಾರೀ ವಿವಾದಗಳು ಸೃಷ್ಟಿಯಾಗಿ ಅಲ್ಲೋಲ ಕಲ್ಲೋಲ ಆಗಿ ಬಿಡುತ್ತದೆ. ಕೆಲ ನಟಿಯರು ಮದುವೆ ಆಗುವುದಕ್ಕೂ ಮುನ್ನ ಗರ್ಭಿಣಿ ಆಗಿದ್ದು ಗುಟ್ಟಾಗಿ ಏನು ಉಳಿದಿಲ್ಲ. ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ತರಾತುರಿಯಲ್ಲಿ ಮದುವೆ ಆಗಿರುವುದು ಇದೆ. ಆದರೆ ಈ ಬಗ್ಗೆ ಯಾರು ಹೆಚ್ಚು ಮಾತನಾಡಲ್ಲ.

ಬಾಲಿವುಡ್ ನಟಿ ನೇಹಾ ಧೂಪಿಯಾ ಕೂಡ ಮದುವೆಗೆ ಮುನ್ನ ಗರ್ಭ ಧರಿಸಿದ್ದರು ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ನೇಹಾ ಹಾಗೂ ಪತಿ ಅಂಗದ್ ಬೇಡಿ ಮೊದಲ ಬಾರಿ ಮಾತನಾಡಿದ್ದಾರೆ. ಮಗಳ ಕಾರಣದಿಂದಲೇ ನಾವಿಬ್ಬರು ಮದುವೆ ಆಗಲು ನಿರ್ಧರಿಸಿದ್ದರು. ಹಾಗಾಗಿ ಮದುವೆಗೆ ಮುನ್ನ ನಾನು ಗರ್ಭಿಣಿ ಆಗಿದ್ದರು ಲಾಭವೇ ಆಯಿತು ಎಂದು ನೇಹಾ ಹೇಳಿರುವುದು ವೈರಲ್ ಆಗ್ತಿದೆ.

Neha Dhupia Reveals Pregnancy Before Marriage helps Wedding With Angad Bedi

2018ರಲ್ಲಿ ಗುರುದ್ವಾರದಲ್ಲಿ ನೇಹಾ ಹಾಗೂ ಅಂಗದ್ ಮದುವೆ ಸರಳವಾಗಿ ನಡೆದಿತ್ತು. ದಂಪತಿಗೆ ಮೆಹರ್ ಎಂಬ ಮಗಳು ಇದ್ದಾಳೆ. ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಪಾಡ್‌ಕಾಸ್ಟ್‌ನಲ್ಲಿ ಅಂಗದ್ ದಂಪತಿ ಭಾಗಿ ಆಗಿದ್ದಾರೆ. ತಮ್ಮ ಲವ್ ಸ್ಟೋರಿ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮಿಬ್ಬರ ಸ್ನೇಹ, ಪ್ರೀತಿ ಹಾಗೂ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

"ನಾನು 8 ವರ್ಷಗಳ ಕಾಲ ನೇಹಾ ಹಿಂದೆ ಬಿದ್ದಿದ್ದೆ. ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಕೇಳುತ್ತಿದ್ದೆ. ಆದ್ರೆ ಆಕೆ ಓಕೆ ಎನ್ನಲಿಲ್ಲ. ತನ್ನ ಕೆಲಸಗಳಲ್ಲಿ ಸದಾ ಬ್ಯುಸಿ ಇರ್ತಿದ್ಲು.. ಮೊದಲ ನೋಟದಲ್ಲೇ ನೇಹಾ ಮೇಲೆ ಮನಸ್ಸಾಗಿತ್ತು" ಎಂದು ಅಂಗದ್ ಬೇಡಿ ಹೇಳಿದ್ದಾರೆ.

Neha Dhupia Reveals Pregnancy Before Marriage helps Wedding With Angad Bedi

ಮೊದಲ ಬಾರಿ ನೇಹಾಳನ್ನು ನೋಡಿ ಅಚ್ಚರಿಗೊಂಡಿದ್ದೆ. ಬಹಳ ಸುಂದರವಾಗಿದ್ದಳು, ಟ್ರೆಡ್‌ಮಿಲ್ ಮೇಲೆ ಓಡುವುದನ್ನು ನೋಡುವುದು, ಅವಳ ಮೈಮಾಟ, ಕ್ರೀಡಾ ಮನೋಭಾವ ಇಷ್ಟವಾಗಿತ್ತು. ಅದು ನನ್ನ ಮೇಲೆ ಪ್ರಭಾವ ಬೀರಿತ್ತು ಎಂದು ಅಂಗದ್ ತಿಳಿಸಿದ್ದಾರೆ. ನೇಹಾಳ ಜೊತೆ ಹೆಚ್ಚು ಸಮಯ ಕಳೆಯಬೇಕು ಎನ್ನುವ ಕಾರಣಕ್ಕೆ ಸ್ಕ್ರಿಪ್ಟ್ ಕೇಳದೇ ಸಿನಿಮಾವೊಂದರಲ್ಲಿ ಜೊತೆ ನಟಿಸೋಕೆ ಒಪ್ಪಿಕೊಂಡೆ. ಆಕೆಯ ಫ್ಯಾಮಿಲಿಗೆ ನಾನು ಹೊಂದಿಕೊಂಡರೂ ಪ್ರಯೋಜನವಾಗಿರಲಿಲ್ಲ" ಎಂದಿದ್ದಾರೆ.

ನೇಹಾ ಗರ್ಭಿಣಿ ಎಂದು ಗೊತ್ತಾದಾಗಲೇ ನಮ್ಮ ಸಂಬಂಧ ಒಂದು ತಿರುವು ಪಡೆಯಿತು ಎಂದು ದಂಪತಿ ಹೇಳಿದ್ದಾರೆ. "ನಾನು ಗರ್ಭಿಣಿಯಾಗಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ, ಮಗಳಿಂದಲೇ ನಮ್ಮ ಪ್ರೇಮಕಥೆ.. ಇಲ್ಲದಿದ್ದರೆ, ಸುತ್ತಲೂ ನೋಡುತ್ತಲೇ ಇರ್ತೀವಿ. ನಾವು ಹುಡುಕುತ್ತಿರುವ ಪ್ರೀತಿ ನಿಮ್ಮ ಪಕ್ಕದಲ್ಲಿದ್ರು, ನಾವು ಯಾವಾಗಲೂ ದೂರ ಹುಡುಕುತ್ತೇವೆ. ಅಂಗದ್ ಯಾವಾಗಲೂ ನನ್ನ ಪಕ್ಕದಲ್ಲಿಯೇ ಇದ್ದ" ಎಂದು ನೇಹಾ ನೆನಪಿಸಿಕೊಂಡಿದ್ದಾರೆ.

ಬಳಿಕ ಮಾತು ಮುಂದುವರೆಸಿರುವ ನೇಹಾ "ನಾನು ಗರ್ಭಿಣಿ ಆಗಿದ್ದರಿಂದ ನಮ್ಮ ಮಗಳೇ ನಮ್ಮಿಬ್ಬರನ್ನು ಒಂದು ಮಾಡಿದಳು. ಇಡೀ ಯೂನಿವರ್ಸ್ ಮೊದಲು ಅಂಗದ್ ಜೊತೆಯಾಯಿತು, ಬಳಿಕ ನನಗೆ ಕೊನೆಗೆ ನಮಗೆ ಜೊತೆಯಾಗಿ ಎಲ್ಲವೂ ಸಾಧ್ಯವಾಯಿತು" ಎಂದು ನೇಹಾ ಧೂಪಿಯಾ ವಿವರಿಸಿದ್ದಾರೆ.

ಕೇರಳದ ಕೊಚ್ಚಿಯಲ್ಲಿ ಹುಟ್ಟಿ ಬೆಳೆದ ನೇಹಾ ಧೂಪಿಯಾ ದೆಹಲಿಯಲ್ಲಿ ಪದವಿ ಪಡೆದಿದ್ದರು. 'ಖಯಾಮತ್' ಸಿನಿಮಾ ಮೂಲಕ ಆಕೆ ಬಾಲಿವುಡ್ ಪ್ರವೇಶಿಸಿದ್ದರು. 'ಜ್ಯೂಲಿ', 'ಚುಪ್ ಚುಪ್ ಕೆ', 'ಶೂಟೌಟ್ ಅಟ್ ಲೋಖಂಡ್ವಾಲಾ', 'ಉಂಗ್ಲಿ', 'ಹಿಂದಿ ಮೀಡಿಯಂ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಪತಿ ಅಂಗದ್ ಬೇಡಿ ಕೂಡ ಕೆಲಸ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ಪಿಂಕ್', 'ಟೈಗರ್ ಜಿಂದಾಹೈ', 'ಡಿಯರ್ ಜಿಂದಗಿ', 'ಲಸ್ಟ್‌ ಸ್ಟೋರಿಸ್-2' ಹೀಗೆ ವಿಭಿನ್ನ ಸಿನಿಮಾಗಳಲ್ಲಿ ಮಿಂಚಿದ್ದಾರೆ. ದಂಪತಿಗೆ 5 ವರ್ಷಗಳ ಹಿಂದೆ ಒಬ್ಬ ಮಗ ಹುಟ್ಟಿದ್ದಾನೆ.

Read more about: actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X