For Quick Alerts
  ALLOW NOTIFICATIONS  
  For Daily Alerts

  ಐವರು ಬಾಯ್‌ಫ್ರೆಂಡ್ಸು, ಒಬ್ಬ ಗಂಡ: ನೇಹಾ ದೂಪಿಯಾ

  |

  ನಟಿ ನೇಹಾ ದೂಪಿಯಾ ತನ್ನ ಬೆಂಕಿಯುಂಡೆಯಂಥಹಾ ಖಡಕ್ ಮಾತುಗಳಿಗೆ ಖ್ಯಾತರು, 'ನೋ ಫಿಲ್ಟರ್ ನೇಹಾ' ಶೋ ಇದೇ ಕಾರಣಕ್ಕೆ ಬಹಳ ಜನಪ್ರಿಯವಾಗಿತ್ತು.

  ಎಂಟಿವಿ ರೋಡೀಸ್‌ ಶೋ ನ ಜಡ್ಜ್‌ಗಳಲ್ಲಿ ಒಬ್ಬರಾಗಿರುವ ನೇಹಾ ಅಲ್ಲಿಯೂ ಸಹ ಬಿಡು ಬೀಸು ಮಾತು, ವರ್ತನೆಯಿಂದ ಹೆಸರು ಮಾಡಿದ್ದರು.

  ಮದುವೆಯಾಗಿ ಮಗುವಿನ ತಾಯಾಗಿರುವ ನೇಹಾ ದೂಪಿಯಾ ಈಗ ತಮ್ಮ ಐವರು ಬಾಯ್‌ಫ್ರೆಂಡ್ಸ್‌ ಬಗ್ಗೆ ಮಾತನಾಡಿದ್ದಾರೆ.

  ಹೌದು, ತಮ್ಮ ಮದುವೆ ವಾರ್ಷಿಕೋತ್ಸವದಂದೆ ನೇಹಾ ದೂಪಿಯಾ ಐವರು ಬಾಯ್‌ಫ್ರೆಂಡ್ಸ್‌ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅವರ ಟ್ವೀಟ್‌ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ನೇಹಾ ದೂಪಿಯಾ ಮತ್ತು ಅಂಗದ್ ಬೇಡಿ

  ನೇಹಾ ದೂಪಿಯಾ ಮತ್ತು ಅಂಗದ್ ಬೇಡಿ

  ನೇಹಾ ದೂಪಿಯಾ ಮತ್ತು ಅಂಗದ್ ವಿವಾಹವಾಗಿ ಮೇ 10 ಕ್ಕೆ ಎರಡು ವರ್ಷವಾಯಿತು. ಅವರಿಗೆ ಒಂದು ಮಗುವಿದೆ. ಎರಡನೇ ವರ್ಷದ ವಾರ್ಷಿಕೋತ್ಸವದ ದಿನ ನೇಹಾ ಐದು ಬಾಯ್‌ಫ್ರೆಂಡ್ಸ್‌ (!?) ಬಗ್ಗೆ ಟ್ವೀಟ್ ಮಾಡಿದ್ದಾರೆ.

  ಗಂಡನನ್ನು ಹೊಗಳಿ ಸೋಷಿಯಲ್ ಮೀಡಿಯಾ ಪೋಸ್ಟ್

  ಗಂಡನನ್ನು ಹೊಗಳಿ ಸೋಷಿಯಲ್ ಮೀಡಿಯಾ ಪೋಸ್ಟ್

  ಗಂಡನನ್ನು ಹೊಗಳಿ ಐದು ಧನಾತ್ಮಕ ಅಂಶಗಳ ಪಟ್ಟಿ ಮಾಡಿರುವ ನೇಹಾ ದೂಪಿಯಾ, ಅಂಗದ್ ನನ್ನ ಜೀವನದ ಪ್ರೀತಿ, ಸದಾ ಬೆಂಬಲಿಸುವಾತ, ಅದ್ಭುತವಾದ ತಂದೆ, ನನ್ನ ಆತ್ಮೀಯ ಗೆಳೆಯ, ಕಿರಿ-ಕಿರಿ ಉಂಟುಮಾಡುವ ರೂಂ ಮೇಟ್‌ ಎಂದಿದ್ದಾರೆ.

  ಐದು ಬಾಯ್‌ಫ್ರೆಂಡ್ಸ್‌, ಒಬ್ಬ ಗಂಡ

  ಐದು ಬಾಯ್‌ಫ್ರೆಂಡ್ಸ್‌, ಒಬ್ಬ ಗಂಡ

  ಗಂಡನ ಐದು ಗುಣಗಳ ಪಟ್ಟಿ ಮಾಡಿ, ಇದೊಂಥರಾ ನನಗೆ ಐದು ಬಾಯ್‌ ಫ್ರೆಂಡ್ಸ್‌ ಗಳು ಒಬ್ಬನಲ್ಲೇ ಸಿಕ್ಕಂತಾಗಿದೆ ಎಂದಿದ್ದಾರೆ ನೇಹಾ ದೂಪಿಯಾ. ಅಷ್ಟೇ ಅಲ್ಲ, ಇದು ನನ್ನ ಆಯ್ಕೆ ಎಂದು ಬಿಂದಾಸ್ ಆಗಿ ಹೇಳಿದ್ದಾರೆ ನೇಹಾ.

  ಮದುವೆಗೆ ಮುನ್ನಾ ಗರ್ಭಿಣಿಯಾಗಿದ್ದ ನೇಹಾ

  ಮದುವೆಗೆ ಮುನ್ನಾ ಗರ್ಭಿಣಿಯಾಗಿದ್ದ ನೇಹಾ

  ನೇಹಾ ದೂಪಿಯಾ ಮತ್ತು ಅಂಗದ್ ಬೇಡಿ 2018 ರ ಮೇ 10 ರಂದು ವಿವಾಹವಾದರು. ಆ ಹೊತ್ತಿಗಾಗಲೇ ನೇಹಾ ದೂಪಿಯಾ ಗರ್ಭಿಣಿ ಆಗಿದ್ದರು. ನವೆಂಬರ್ 18 , 2018 ಕ್ಕೆ ಅವರಿಗೆ ಮಗುವಾಯಿತು.

  English summary
  Actress Neha Dhupia talks about her five boyfriends and one husband. She posted messege in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X