ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ 'KGF' ಗಾಯಕಿ: ಅರಿಶಿಣ-ಮೆಹಂದಿ ಶಾಸ್ತ್ರದ ಫೋಟೋ ವೈರಲ್
ಬಾಲಿವುಡ್ ನ ಖ್ಯಾತ ಗಾಯಕಿ ನೆಹಾ ಕಕ್ಕರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಪ್ರಿಯತಮ ರೋಹನ್ ಪ್ರೀತ್ ಸಿಂಗ್ ಜೊತೆ ನೇಹಾ ಸಪ್ತಪದಿ ತುಳಿಯುತ್ತಿದ್ದಾರೆ. ಈಗಾಗಲೇ ಮದುವೆ ಸಮಾರಂಭ ಪ್ರಾರಂಭವಾಗಿದ್ದು, ಕುಟುಂಬದವರು ಮತ್ತು ಸ್ನೇಹಿತರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ನೇಹಾ ಮತ್ತು ರೋಹನ್ ಪ್ರೀತ್ ಅವರ ಅರಿಶಿಣ ಶಾಸ್ತ್ರ ಮತ್ತು ಮೆಹಂದಿ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದೆಹಲಿಯಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದು, ನಿನ್ನೆ (ಅ.23) ಹಳದಿ ಶಾಸ್ತ್ರವನ್ನು ಅದ್ದೂರಿ ಮಾಡಿದ್ದಾರೆ. ದೆಹಲಿಯ ಖ್ಯಾತ ಮೆಹಂದಿ ಡಿಸೈನರ್ ರಾಜು ಮೆಹಂದಿ ವಾಲಾ ಮೆಹಂದಿ ಉಸ್ತುವಾರಿ ವಹಿಸಿಕೊಂಡಿದ್ದರು. ಮುಂದೆ ಓದಿ..

ಹಳದಿ ಡ್ರೆಸ್ ನಲ್ಲಿ ಮಿಂಚಿಂಗ್
ಗಾಯಕಿ ನೇಹಾ ಮತ್ತು ಭಾವಿ ಪತಿ ರೋಹನ್ ಹಳದಿ ಬಟ್ಟೆಯಲ್ಲಿ ಮಿಂಚುತ್ತಿದ್ದಾರೆ. ಇಡೀ ಕುಟುಂಬ ಹಳದಿ ಉಡುಪು ಧರಿಸಿ ಹಳದಿ ಸಂಬ್ರಮದಲ್ಲಿ ಕಾಣಿಸಿಕೊಂಡಿದೆ. ನೇಹಾ ಮತ್ತು ರೋಹನ್ ಕುಟುಂಬ ಮೆಹಂದಿ ಹಾಕಿಕೊಂಡು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ನೇಹಾ ಕಕ್ಕರ್ ಸಹೋದರಿಯ ಸಂಭ್ರಮ
ನೇಹಾ ಕಕ್ಕರ್ ಸಹೋದರಿ ಸೋನು ಕಕ್ಕರ್ ಪ್ರೀತಿಯ ಸಹೋದರಿಯ ಮದುವೆ ಫೋಟೋಗಳನ್ನು ಶೇರ್ ಸಂಭ್ರಮ ಹಂಚಿಕೊಂಡಿದ್ದಾರೆ. ನೇಹಾ ಕ್ಕರ್ ಮತ್ತು ರೋಹನ್ ಪ್ರೀತಿ ಸಿಂಗ್ ಹಳದಿ ಶಾಸ್ತ್ರದ ಫೋಟೋಗಳು. ಅವರೊಂದಿಗೆ ನನ್ನ ಸೆಲ್ಫಿ ಎಂದು ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ ಸಹೋದರಿಯ ಮದುವೆ ಸಂಭ್ರಮದಲ್ಲಿ ಮಿಂಚುತ್ತಿದ್ದಾರೆ.

ತಿಂಗಳ ಪ್ರಾರಂಭದಲ್ಲಿ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದ ಜೋಡಿ
ನೇಹಾ ಮತ್ತು ರೋಹನ್ ಪ್ರೀತ್ ಸಿಂಗ್ ಈ ತಿಂಗಳ ಆರಂಭದಲ್ಲಿ ಇಬ್ಬರು ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದ್ದರು. ಬಳಿಕ ಇಬ್ಬರು ರೋಕಾ ಸಮಾರಂಭದ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಇದೀಗ ಇಬ್ಬರು ಮದುವೆ ಬಂಧನಕ್ಕೆ ಒಳಗಾಗುತ್ತಿದ್ದಾರೆ.
Recommended Video

ನೇಹಾ ಕಕ್ಕಕ್ ಹಾಡುಗಳು
ಗಾಯಕಿ ನೇಹಾ ಕಕ್ಕರ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾದ ಹಿಂದಿ ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನೂ ದಿಲ್ಬರ್ ರಿಡಕ್ಸ್, ಕಲಾ ಚಸ್ಮಾ, ಆಂಖ್ ಮಾರೆ ಸೇರಿದಂತೆ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ರೋಹನ್ ಪ್ರೀತ್ ಸಿಂಗ್ ಸಹ ಗಾಯಕರಾಗಿದ್ದಾರೆ. ಜೊತೆಗೆ ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಿದ್ದಾರೆ.


Click it and Unblock the Notifications











