ಐಸ್ ಬಾತ್ ಮಾಡಿದ 'ಚಿರುತ' ಚೆಲುವೆ ; ಯುವರಾಜ್ ಸಿಂಗ್ ಹೇಳಿದ್ದೇನು.. ?

ರಾಮ್ ಚರಣ್ ತೇಜಾ ಅಭಿನಯದ 'ಚಿರುತ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ''ನೇಹಾ ಶರ್ಮಾ''. 'ಚಿರುತ' ನಂತರ ಮತ್ತೊಂದು 'ತೆಲುಗು' ಸಿನಿಮಾ ಮಾಡಿ ''ದಕ್ಷಿಣ''ದಿಂದ ಕಾಲ್ಕಿತ್ತ ಈ 'ಬಿಹಾರ'ದ ಬ್ಯೂಟಿ ಆ ನಂತರ ಸೆಟ್ಲ್ ಆಗಿದ್ದು ಹಿಂದಿ ಚಿತ್ರರಂಗದಲ್ಲಿ.

ಆದರೆ ದಕ್ಷಿಣದಲ್ಲಿ ಸಿಕ್ಕ ಹೆಸರು ಈಕೆಗೆ ಉತ್ತರದಲ್ಲಿ ಸಿಗಲಿಲ್ಲ. 'ಕ್ಯಾ ಸೂಪರ್ ಕೂಲ್ ಹೈ ಹಮ್', 'ಜಯಂತಿ ಭಾಯಿ ಕೀ ಲವ್ ಸ್ಟೋರಿ', 'ತುಮ್ ಬಿನ್ 2' ಹೀಗೆ ಹದಿನಾಲ್ಕು-ಹದಿನೈದು ವರ್ಷದಲ್ಲಿ ಅನೇಕ ಸಿನಿಮಾ ಮಾಡಿದರೂ ಯಾವ ಚಿತ್ರವೂ ಗೆಲ್ಲಲಿಲ್ಲ. ಯಾವ ಪಾತ್ರವೂ ಸಿನಿರಸಿಕರ ಹೃದಯಕ್ಕೆ ಹತ್ತಿರವಾಗಲಿಲ್ಲ. ಇರುವುದರಲ್ಲಿ ಇಲ್ಲಿಗಲ್ ವೆಬ್ ಸರಣಿ ಇವರಿಗೆ ಹೆಸರನ್ನ ತಂದು ಕೊಡ್ತು.

neha-sharma-takes-an-ice-bath-in-a-black-swim-suit

ಇಂಥ ನೇಹಾ ಶರ್ಮಾ ಇದೀಗ ಐಸ್ ಟಬ್‌ನಲ್ಲಿ ಮುಳುಗೆದ್ದಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ಚುಮುಚುಮು ಚಳಿ ಚಳಿಯ ಆಹ್ಲಾದಕರ ಅನುಭವವನ್ನು ಹಂಚಿಕೊಂಡಿದ್ದಾರೆ. 'ನಿಜಕ್ಕೂ ಈ ಸ್ನಾನ ಅದ್ಭುತ. ಎಲ್ಲರೂ ಒಮ್ಮೆ ಮಾಡಬೇಕು' ಎಂದು ಅವರು ಮನವಿ ಮಾಡಿದ್ದಾರೆ.

ಇನ್ನೂ ನೇಹಾ ಶರ್ಮಾ ಈ ಐಸ್ ಸಾಹಸವನ್ನ ಮಾಡಿದ ಬೆನ್ನಲ್ಲಿಯೇ, ಅನೇಕರ ಕಣ್ಣು ಇವರ ಬಟ್ಟೆ ಮೇಲೆ ಬಿದ್ದಿದೆ. ಇನ್ನೂ ಕೆಲವರಿಗೆ ಶ್ರೀದೇವಿಯ ದುರಂತ ಅಂತ್ಯ ನೆನಪಾಗಿದೆ. ಇದೆಲ್ಲದರ ನಡುವೆ ಕ್ರಿಕೆಟಿಗ ಯುವರಾಜ್ ಸಿಂಗ್ ಮಾಡಿರುವ ಕಮೆಂಟ್ ಎಲ್ಲರ ಗಮನವನ್ನೂ ಸೆಳೆಯುತ್ತಿದೆ. ಎಲ್ಲಿಯ ನೇಹಾ ಶರ್ಮಾ.. ಎಲ್ಲಿಯ ಯುವರಾಜ್ ಸಿಂಗ್... ಎಲ್ಲಿಂದ ಎಲ್ಲಿಗೆ ಸಂಬಂಧ ಅನ್ನುವ ಪ್ರಶ್ನೆ ಕೂಡ ಅನೇಕರಿಗೆ ಕಾಡುತ್ತಿದೆ.

ಅಂದ್ಹಾಗೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಯುವರಾಜ್ ಸಿಂಗ್ ನಿವೃತ್ತಿಯನ್ನ ಘೋಷಿಸಿದ ನಂತರ, ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಆ ಪಾರ್ಟಿಯಲ್ಲಿ ನೇಹಾ ಶರ್ಮಾ ಕೂಡ ಕಾಣಿಸಿಕೊಂಡಿದ್ದರು. ಆ ನಂತರ ಕೂಡ ಯುವರಾಜ್ ಮತ್ತು ನೇಹಾ ಶರ್ಮಾ ಅನೇಕ ಕಡೆ ಕ್ಯಾಮರಾಗಳಿಗೆ ಜೊತೆ ಜೊತೆಯಾಗಿ ಫೋಸ್ ಕೂಡ ಕೊಟ್ಟಿದ್ದರು.

ಇಬ್ಬರ ನಡುವೆ ಇರುವ ಈ ಆತ್ಮೀಯತೆಯನ್ನ ಅನೇಕರು ಹಿಂದೆ ಅನುಮಾನದ ದೃಷ್ಟಿಯಿಂದ ನೋಡಿದ್ದು ಇದೆ. ಆ ಅನುಮಾನ ಈಗ ಅನೇಕರಲ್ಲಿ ಇನ್ನೂ ಹೆಚ್ಚಾಗಿದೆ. ನೇಹಾ ಶರ್ಮಾ ಅವರ ಈ ಐಸ್ ಬಾತ್‌ ವಿಡಿಯೋಗೆ ಯುವರಾಜ್ ಸಿಂಗ್ ಮಾಡಿರುವ Welcome to ice bath life ಎಂಬ ಕಮೆಂಟ್ ಎಲ್ಲರ ಕಣ್ಣು ಕುಕ್ಕುತ್ತಿದೆ. ಯುವರಾಜ್ ಸಿಂಗ್ ಅವರ ಅಭಿಪ್ರಾಯಕ್ಕೆ ಹತ್ತಾರು ಅಭಿಪ್ರಾಯಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿವೆ.

neha-sharma-takes-an-ice-bath-in-a-black-swim-suit

ಉಳಿದಂತೆ ಐಸ್ ಟಬ್‌ನಲ್ಲಿ ನೇಹಾ ಶರ್ಮಾ ಸ್ನಾನ ಮಾಡಿದ್ದು ಇದು ಮೊದಲೇನಲ್ಲ. ಕಳೆದ ವರ್ಷ ಕೂಡ ಕೆಂಪು ಬಿಕಿನಿಯಲ್ಲಿ ನೇಹಾ ಶರ್ಮಾ ಐಸ್ ಬಾತ್ ಮಾಡಿದ್ದರು. ತಮ್ಮ ಸಮಸ್ತ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಅವತ್ತು ಕೂಡ ಈಗ ವೈರಲ್ ಆದಂತೆ ನೇಹಾ ಶರ್ಮಾ ಅವರ ಐಸ್ ಬಾತ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು

More from Filmibeat

English summary
Illegal Web Series Fame Bollywood Actress Neha Sharma Takes An Ice Bath In A Black Swim Suit
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X