ರಾಜಕೀಯಕ್ಕೆ ''ಚಿರುತ'' ಚೆಲುವೆ ; ಬಿಹಾರದಲ್ಲಿ ''ಕೈ'' ಬೀಸಲು ರೆಡಿಯಾದ ಮಾದಕ ನಟಿ..?
ರಾಮ್ ಚರಣ್ ತೇಜಾ ಅಭಿನಯದ ''ಚಿರುತ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ''ನೇಹಾ ಶರ್ಮಾ''. ''ಚಿರುತ'' ನಂತರ ಮತ್ತೊಂದು ''ತೆಲುಗು'' ಸಿನಿಮಾ ಮಾಡಿ ''ದಕ್ಷಿಣ''ದಿಂದ ''ಕಾಲ್ಕಿತ್ತ'' ಈ 'ಬಿಹಾರ'ದ ಬ್ಯೂಟಿ ಆ ನಂತರ ಸೆಟ್ಲ್ ಆಗಿದ್ದು ಹಿಂದಿ ಚಿತ್ರರಂಗದಲ್ಲಿ.
ಆದರೆ ದಕ್ಷಿಣದಲ್ಲಿ ಸಿಕ್ಕ ''ಹೆಸರು'' ಈಕೆಗೆ ಉತ್ತರದಲ್ಲಿ ಸಿಗಲಿಲ್ಲ. 'ಕ್ಯಾ ಸೂಪರ್ ಕೂಲ್ ಹೈ ಹಮ್', 'ಜಯಂತಿ ಭಾಯಿ ಕೀ ಲವ್ ಸ್ಟೋರಿ', 'ತುಮ್ ಬಿನ್ 2' ಹೀಗೆ ಹದಿನಾಲ್ಕು-ಹದಿನೈದು ವರ್ಷದಲ್ಲಿ ಅನೇಕ ಸಿನಿಮಾ ಮಾಡಿದರೂ ಯಾವ ಚಿತ್ರವೂ ಗೆಲ್ಲಲಿಲ್ಲ. ಯಾವ ಪಾತ್ರವೂ ಸಿನಿರಸಿಕರ ಹೃದಯಕ್ಕೆ ಹತ್ತಿರವಾಗಲಿಲ್ಲ. 'ಜೋಗಿರಾ ಸಾರಾ ರಾ..ರಾ'.. ನೇಹಾ ಶರ್ಮಾ ಅಭಿನಯದ ಕೊನೆಯ 'ಹಿಂದಿ' ಸಿನಿಮಾ.

ಇಂಥ ನೇಹಾ ಶರ್ಮಾ ಇದೀಗ 'ರಾಜಕೀಯ'ಕ್ಕೆ ಎಂಟ್ರಿ ಕೊಡಲಿದ್ದಾರೆ ಅನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಹೌದು, ನಿಮಗೆ ಗೊತ್ತಿರಲಿ, ನೇಹಾ ಶರ್ಮಾ ತಂದೆ ಅಜಿತ್ ಶರ್ಮಾ ಬೆಸಿಕಲಿ ಪೊಲಿಟಿಶಿಯನ್. ಬಿಹಾರದಲ್ಲಿ ಅದರಲ್ಲಿಯೂ ವಿಶೇಷವಾಗಿ ಭಾಗಲಪುರ್ ಕ್ಷೇತ್ರದಲ್ಲಿ ಇವ್ರದ್ದೇ ಆದ ''ಹವಾ'' ಇದೆ.
ಇನ್ನೂ ಅಲ್ಲಿ ಸದ್ಯಕ್ಕೆ ''ಮಹಾಘಟಬಂದನ್'' ಹೆಸರಿನಲ್ಲಿ 'ಕಸರತ್ತು', 'ಮಸಲತ್ತು' ನಡೆಯುತ್ತಿದೆ. ಈ ಕಾರಣಕ್ಕೆ ಒಂದು ವೇಳೆ ಚರ್ಚೆ ಎಲ್ಲವೂ ಅಂದುಕೊಂಡತೆ ನಡೆದರೆ, 'ಭಾಗಲಪುರ್' ಕ್ಷೇತ್ರ 'ಕಾಂಗ್ರೆಸ್' ಗೆ ಸಿಕ್ಕರೆ ಅಲ್ಲಿ ತಮ್ಮ ಬದಲು ತಮ್ಮ 'ಪುತ್ರಿ' ನೇಹಾ ಶರ್ಮಾ ಅವರನ್ನ ಕಣಕ್ಕಿಳಿಸುವ ಯೋಚನೆಯನ್ನ ಮಾಡಿ ಯೋಜನೆಯನ್ನ ಇವರ ತಂದೆ 'ಅಜಿತ್ ಶರ್ಮಾ' ಹಮ್ಮಿಕೊಂಡಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಗುಲ್ಲಾಗಿದೆ.

ಅಂದ್ಹಾಗೇ ಬಿಹಾರದ ಭಾಗಲಪುರ್ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಇಲ್ಲಿ ನಿಂತರೆ ಗೆಲುವು ಕಟ್ಟಿಟ್ಟ ಬುತ್ತಿ ಅನ್ನುವ ಮಾತು ಇದೆ. ಇನ್ನೂ ನೇಹಾ ಶರ್ಮಾ ಅವರ ತಂದೆ ಅಜಿತ್ ಶರ್ಮಾಗೆ ಈಗ 70ರ ಪ್ರಾಯ. ಈ ಕಾರಣಕ್ಕೆ ತಮ್ಮ ಬದಲು ತಮ್ಮ ಪುತ್ರಿಯನ್ನ ಕಣಕ್ಕಿಳಿಸಿ, ಆಕೆಯ ಭವಿಷ್ಯವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಅಜಿತ್ ಶರ್ಮಾ ಇಂಥಹದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ ಅನ್ನುವ ಸುದ್ದಿಯೂ ಸದ್ಯಕ್ಕೆ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ ತನ್ನ ಅಂದ ಚೆಂದದಿಂದ, ಪ್ರೇಕ್ಷಕರ ಮನಸು ಗೆದ್ದ ನೇಹಾ ಶರ್ಮಾ ಅಭಿನಯದಿಂದ ಹೃದಯ ಗೆದ್ದ ಉದಾಹರಣೆ ತುಂಬಾ ಕಡಿಮೆ. ಇಲಿಗಲ್ ವೆಬ್ ಸರಣಿ ಹೊರತು ಪಡಿಸಿದರೆ ಹಿಂದಿ ಚಿತ್ರರಂಗದಲ್ಲಿ ನೇಹಾ ಶರ್ಮಾ ಸಾಧಿಸಿ ಭೇದಿಸಿದ್ದು ಏನಿಲ್ಲ. ಇಂಥ ನೇಹಾ ಶರ್ಮಾ ಹರಿದಾಡ್ತಿರುವ ಈ ಸುದ್ದಿಗಳಂತೆ ನಿಜಕ್ಕೂ ರಾಜಕೀಯಕ್ಕೆ ಬರುತ್ತಾರಾ..? ಬಂದರೂ ಬಿಹಾರದ ಭಾಗಲಪುರ್ ದಲ್ಲಿ ಗೆಲುವಿನ ಬಾವುಟ ಹಾರಿಸುತ್ತಾರಾ ..? ಉತ್ತರ ಆ ದೇವರಿಗೆ ಗೊತ್ತು...!


Click it and Unblock the Notifications











