ಕಾರಿನಲ್ಲೇ ಹಾಸಿಗೆ, ಕೈಕೋಳ ; ನಿನ್ನ ದೇಹದಾಕಾರಕ್ಕೆ ದುಬೈ ಕ್ಲೈಂಟ್ಸ್ ದುಡ್ಡು ಸುರಿತಾರೆ-ನಿರ್ದೇಶಕನ ಮುಖವಾಡ ಕಳಚಿದ ನಟಿ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತು ಇದೆ. ಈ ಮಾತು ಚಿತ್ರರಂಗಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಹೊರಗಡೆಯಿಂದ ತುಂಬಾನೇ ಕಲರ್ ಫುಲ್ ಆಗಿ ಕಾಣುವ ಈ ಬಣ್ಣದ ಲೋಕದಲ್ಲಿ ನಾನಾ ಬಗೆಯ ವೇಷಭೂಷಣ ಹಾಕಿಕೊಂಡ ಹಲವಾರು ಜನ ಇದ್ದಾರೆ. ಅದರಲ್ಲಿಯೂ ನಾಯಕಿಯಾಗಿ ನೆಲೆಯೂರಬೇಕೆಂದು ಕನಸೊತ್ತು ಬರುವ ಹಲವರ ಪಾಲಿಗೆ ಚಿತ್ರರಂಗ ಕಲ್ಲು ಮುಳ್ಳಿನ ಹಾದಿಯೇ.

ಅಡಿಗಡಿಗೂ ಈ ಚಿತ್ರರಂಗದಲ್ಲಿ ಸವಾಲುಗಳಿಗೆ ಎದೆಯೊಡ್ಡಬೇಕಾಗುತ್ತದೆ. ಪಾತ್ರಕ್ಕೆ ಪಲ್ಲಂಗವೇರಬೇಕು ಎಂಬ ಷರತ್ತನ್ನು ಒಪ್ಪಿಕೊಂಡರೆ ಮಾತ್ರ ಇಲ್ಲಿ ಅವಕಾಶ ಎಂದು ದುಷ್ಟ ವ್ಯವಸ್ಥೆಯೊಂದು ಇವರಿಗೆ ಮಾನಸಿಕ ಕಿರಿಕಿರಿ ನೀಡುತ್ತದೆ. ಒಟ್ನಲ್ಲಿ ಚಿತ್ರರಂಗದಲ್ಲಿ ಇಂದು ಹೆಸರು ಮಾಡಿರುವವರು.. ಹೆಸರು ಮಾಡಲಾಗದೇ ಮನೆ ಸೇರಿದವರು.. ಒಂದಿಲ್ಲೊಂದು ದಿನ.. ಒಂದಿಲ್ಲೊಂದು ರೀತಿಯಲ್ಲಿ.. ಈ ಝಗಮಗ ಲೋಕದಲ್ಲಿನ ವಿಕೃತ ಲೋಕವನ್ನು ಕಂಡು ಬೆಚ್ಚಿ ಬಿದ್ದಿಯೇ ಬಿದ್ದಿರುತ್ತಾರೆ. ಉದಾಹರಣೆಗೆ ''ನೇಹಲ್ ವಡೋಲಿಯಾ''.

Nehal Vadoliya Exposes Bollywood Director s Dark Casting Couch Reality

ಹೌದು, ನೇಹಲ್ ವಡೋಲಿಯಾ.. ''ತಾರಕ್ ಮೆಹ್ತಾ ಕಾ ಊಲ್ತಾ ಚಷ್ಮಾ'' ಧಾರಾವಾಹಿಯ ಮೂಲಕ ಮನೆ ಮಾತಾದ ಚೆಲುವೆ. ಅಭಿನಯಕ್ಕಿಂತ ತಮ್ಮ ದೇಹಸಿರಿಯನ್ನೇ ಬೆಳೆಯಲು ಬಂಡವಾಳವನ್ನಾಗಿಸಿಕೊಂಡ ಚೆಲುವೆ ಇವರು. ಇದಕ್ಕೆ ''ಗಂದಿ ಬಾತ್ 3''.. ''ಮಸ್ತ್‌ರಾಮ್''.. ''ಜೂಲಿ''.. ''ವುಡ್‌ಪೆಕ್ಕರ್'' ಮತ್ತು ''ರಸೀಲೇ ಪಡೋಸನ್'' ನಂತಹ ಬೋಲ್ಡ್ & ಹಾಟ್ ವೆಬ್ ಸೀರೀಸ್‌ ಉದಾಹರಣೆ.

ಇಂಥಾ ನೇಹಲ್ ವಡೋಲಿಯಾ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಅವಕಾಶ ನೀಡುವ ನೆಪದಲ್ಲಿ ನಿರ್ದೇಶಕನೊಬ್ಬ ತಮ್ಮ ಅಸಭ್ಯವಾಗಿ ವರ್ತಿಸಿದ್ದ ಎಂದು ಹೇಳಿದ್ದಾರೆ. ಈ ಕುರಿತು ''ಸುನೋ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನೇಹಲ್ ವಡೋಲಿಯಾ ನಿರ್ದೇಶಕರೊಬ್ಬರು ಕಾರಿನಲ್ಲಿ ಭೇಟಿಯಾಗುವಂತೆ ನನಗೆ ಹೇಳಿದ್ದರು ಎಂದಿದ್ದಾರೆ.

ಅವರು ಹೇಳಿದಂತೆ ನಾನು ಕಾರಿನೊಳಗೆ ಭೇಟಿಯಾಗಲು ಹೋದಾಗ ನನಗೆ ಶಾಕ್ ಕಾದಿತ್ತು, ಯಾಕೆಂದರೆ ಆ ಕಾರು, ಕಾರಾಗಿರಲಿಲ್ಲ ಬದಲಿಗೆ ಒಂದು ರೀತಿಯ ವಿಕೃತ ಮಾಯಾಲೋಕದಂತಿತ್ತು ಎಂದು ಹೇಳಿರುವ ನೇಹಲ್, ಅಲ್ಲಿ ಕೂರಲು ಸೀಟ್ ಇರಲಿಲ್ಲ, ಬದಲಿಗೆ ಮಲ್ಲಿಗೆಯಂತಹ ಹಾಸಿಗೆ ಇತ್ತು, ನಾನು ಕಾರಿನೊಳಗೆ ಹೋಗುತ್ತಿದ್ದಂತೆಯೇ ಆ ನಿರ್ದೇಶಕ ತಕ್ಷಣ ಬಾಗಿಲನ್ನು ಲಾಕ್ ಮಾಡಿದ ಎಂದು ಆತಂಕದ ಆ ಕ್ಷಣಗಳನ್ನು ಬಿಚ್ಚಿಟ್ಟಿದ್ಧಾರೆ.

ಪರದೆಗಳಿಂದ ಆ ಕಾರಿನ ಕಿಟಕಿಗಳನ್ನು ಮುಚ್ಚಲಾಗಿತ್ತು ಎಂದು ಹೇಳಿರುವ ನೇಹಲ್, ಅಲ್ಲಿ ಹ್ಯಾಂಡ್ ಕಫ್ ಸೇರಿ ಚಿತ್ರ ವಿಚಿತ್ರ ವಸ್ತುಗಳೆಲ್ಲವೂ ಇದ್ದವು ಎಂದು ಹೇಳಿದ್ದಾರೆ. ಅದನ್ನೆಲ್ಲಾ ನೋಡಿ ನಾನೆಲ್ಲಿದ್ದೇನೆ ಎಂದು ನನಗೆ ಗೊತ್ತಾಗದೇ ಒಂದು ಕ್ಷಣ ನಾನು ಗಾಬರಿಯಾದೆ ಎಂದಿದ್ದಾರೆ.

nehal-vadoliya-exposes-bollywood-directors-dark-casting-couch-reality

ಮುಂದುವರೆದು ಈ ಕುರಿತು ಮಾತನಾಡಿರುವ ನೇಹಲ್, ಆ ನಂತರ ಆ ವ್ಯಕ್ತಿ ನನ್ನ ಸೌಂದರ್ಯವನ್ನು ಹೊಗಳಲು ಶುರು ಮಾಡಿದ, ನಿನ್ನ ದೇಹದ ಆಕಾರ ತುಂಬಾನೇ ಅದ್ಭುತವಾಗಿದೆ, ಸಿನಿಮಾ ರಂಗದಲ್ಲಿ ನೀನು ಹೇಗೆಲ್ಲಾ ಬೆಳೆಯಬಹುದು ಎನ್ನುವುದು ನಿನಗೆ ಗೊತ್ತಾ..? ನಿನ್ನ ಬೆಳವಣಿಗೆ ನೋಡಲು ಬಯಸುತ್ತೀಯಾ..? ಎಂದು ತನ್ನ ಮೊಬೈಲ್‌ನಲ್ಲಿದ್ದ ಕೆಲ ಹುಡುಗಿಯರ ಅಸಹ್ಯ, ಅಸಭ್ಯ ಮತ್ತು ಆಕ್ಷೇಪಾರ್ಹ ವಿಡಿಯೋ ತೋರಿಸಲು ಶುರು ಮಾಡಿದ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

ಆ ನಿರ್ದೇಶಕ ಇಷ್ಟಕ್ಕೆ ಸುಮ್ಮನಾಗಲಿಲ್ಲ ಎಂದು ಹೇಳಿರುವ ನೇಹಲ್, ತನ್ನ ಮೊಬೈಲ್‌ನಲ್ಲಿದ್ದ ಹುಡುಗಿಯರನ್ನು ತೋರಿಸುತ್ತಾ, ಈಕೆಗೆ ದುಬೈನಲ್ಲಿ ಸಾಕಷ್ಟು ಕ್ಲೈಂಟ್‌ಗಳಿದ್ದಾರೆ. ನಿನ್ನ ಬಾಡಿ ಶೇಪ್ ನೋಡಿದರೆ, ನೀನು ಇವಳಿಗಿಂತಲೂ ಜಾಸ್ತಿ ಹಣ ಸಂಪಾದಿಸಬಹುದು ಎಂದು ಆಮಿಷ ಒಡ್ಡಿದ, ರಾಜಿಯಾಗುವಂತೆ ಹೇಳಿದ ಎಂದು ನೆನಪು ಮಾಡಿಕೊಂಡಿದ್ದಾರೆ.

ನಿರ್ದೇಶಕನ ಈ ಮಾತುಗಳಿಗೆ ಮೊದಲನೆಯದಾಗಿ ನನಗೆ ಬಾಲಿವುಡ್ ಆಗಲಿ ಅಥವಾ ದುಬೈ ಕನೆಕ್ಷನ್ ಆಗಲಿ ಯಾವುದರಲ್ಲೂ ಆಸಕ್ತಿಯಿಲ್ಲ. ನನಗೆ ಅಲ್ಲಿಗೆ ಹೋಗುವ ಮನಸ್ಸು ಇಲ್ಲ ಎಂದು ನಾನು ಹೇಳಿದೆ ಎಂದಿರುವ ನೇಹಲ್, ಈ ವಿಡಿಯೋದಲ್ಲಿ ಇರುವುದನ್ನು ಮಾಡಲು ನಾನು ಎಂದಿಗೂ ಬಯಸುವುದಿಲ್ಲ. ನನಗೆ ಬಾಲಿವುಡ್ ಸಿನಿಮಾಗಳೇ ಬೇಡ ಎಂದ ಮೇಲೆ ನೀವು ನನಗೆ ಇದನ್ನು ಏಕೆ ತೋರಿಸುತ್ತಿದ್ದೀರಿ? ಎಂದು ಮುಖಕ್ಕೆ ಹೊಡೆದಂತೆ ಹೇಳಿ ಅಲ್ಲಿಂದ ಹೊರ ಬಂದೆ ಎಂದಿದ್ದಾರೆ. ನಾನೊಬ್ಬಳೇ ಅಲ್ಲ ಹಲವು ನಟಿಯರಿಗೆ ಇಂತಹ ಅನುಭವಗಳಾಗಿರುತ್ತವೆ ಎಂದು ಕಿಡಿ ಕಾರಿದ್ದಾರೆ. ಸದ್ಯ ನೇಹಲ್ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

English summary
TMKOC actress Nehal Vadoliya unmasks the entertainment industry's dark side as she shares her horrifying casting couch ordeal with a Bollywood director.
Read more about: casting couch me too
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X