ನಟಿಯ ರೂಪಕ್ಕೆ ಮನಸೋತು ಅಸಭ್ಯ ಮೆಸೇಜ್ ಮಾಡಿದ ನಟ ? ಚಾಟ್ ಲೀಕ್ ಮಾಡಿ ಸವಾಲು ಹಾಕಿದ ಸುಂದರಿ

ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಹೆಸರೇ ಗೊತ್ತಾಗದಂತೆ ಹೆಂಗಳೆಯರಿಗೆ ಅಶ್ಲೀಲವಾದ, ಕೆಟ್ಟಾತಿ ಕೆಟ್ಟ ಸಂದೇಶಗಳನ್ನು ಕಳಿಸೋದು, ಹೇಗೋ ಬಲೆಗೆ ಕೆಡವಿಕೊಂಡು ಬ್ಲಾಕ್‌ಮೇಲ್ ಮಾಡೋದೂ ಸೇರಿದಂತೆ ಡಿಜಿಟಲ್ ಕಾಮುಕರು ಥರ ಥರದಲ್ಲಿ ಕಾಡುತ್ತಿದ್ದಾರೆ.

ಇನ್ನು, ಚಿತ್ರರಂಗದಲ್ಲಿರುವ ನಾಯಕಿಯರ ಪಾಡು ಹೇಳತೀರದು. ಅಭಿಮಾನದ ಹೆಸರಿನಲ್ಲಿ ಅನೇಕರು ಅನೇಕ ನಾಯಕಿಯರ ನೆಮ್ಮದಿಗೆ ಕೊಳ್ಳಿ ಇಡುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಎಷ್ಟೇ ಪ್ರಯತ್ನ ಮಾಡಿದರೂ ಸೈಬರ್ ಕ್ರೈಮ್ ಮೊರೆ ಹೋದರು ಕೂಡ ಇವರಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ದುರಂತ ಅಂದರೆ ಚಿತ್ರರಂಗದಲ್ಲಿಯೇ ಈ ಆನ್‌ಲೈನ್‌ ಕಾ*ಮುಕರು ಇದ್ದಾರೆ. ಈ ಸಾಲಿನಲ್ಲಿ ಕೆಲ ದಿನಗಳ ಹಿಂದೆಯಷ್ಟೇ ''ಕೆಆರ್‌ಕೆ'' ಅಲಿಯಾಸ್ ''ಕಮಲ್ ಆರ್ ಖಾನ್'' ಮತ್ತು ಅಜಾಜ್ ಖಾನ್ ಸೇರಿಕೊಂಡಿದ್ದರು. ಈಗ ಕರಣ್ ಜೋಶಿ ಅವರ ಮೇಲೀಗ ಈ ಆರೋಪ ಕೇಳಿ ಬಂದಿದೆ.

Prove It TMKOC s Nehal Vadoliya Fires Back After Karan Joshi Claims Instagram Hacking Over Obscene T

ಹೌದು, ಕರಣ್ ಜೋಶಿ.. ಮೂಲತಃ ಗುಜರಾತಿ ಚೆಲುವ. ಹಿಂದಿ ಮತ್ತು ಗುಜರಾತಿ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿರುವ ಕರಣ್ ಜೋಶಿಗೆ ಈ ವರ್ಷ ''ಲಾಲೋ- ಶ್ರೀ ಕೃಷ್ಣ ಸದಾ ಸಹಾಯತೇ'' ಎಂಬ ಸಿನಿಮಾ ಅಪಾರವಾದ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಬಾಕ್ಸಾಫೀಸ್‌ನಲ್ಲೂ ಭಾರೀ ಹಣ ಗಳಿಸಿದೆ.

ಇಂಥಾ ಕರಣ್ ಜೋಶಿ ಸದ್ಯ ನೇಹಲ್ ವಡೋಲಿಯಾಗೆ ಅಸಭ್ಯ ಮತ್ತು ಅಶ್ಲೀಲ ಮೆಸೇಜ್ ಕಳಿಸಿದ್ದಾರೆ ಎಂಬ ಆರೋಪದಡಿ ಸುದ್ದಿಯಲ್ಲಿದ್ದಾರೆ. ಈ ನೇಹಲ್ ವಡೋಲಿಯಾ ಬೇರೆ ಯಾರು ಅಲ್ಲ ಬದಲಿಗೆ ಕರಣ್ ಅವರಂತೆಯೇ ಹಿಂದಿ ಮತ್ತು ಗುಜರಾತಿಯಲ್ಲಿ ಹೆಸರು ಮಾಡಿರುವ ಚೆಲುವೆ.

''ತಾರಕ್ ಮೆಹ್ತಾ ಕಾ ಊಲ್ತಾ ಚಷ್ಮಾ'' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ನೇಹಲ್ ''ಗಂದಿ ಬಾತ್ 3''.. ''ಮಸ್ತ್‌ರಾಮ್''.. ''ಜೂಲಿ''.. ''ವುಡ್‌ಪೆಕ್ಕರ್'' ಮತ್ತು ''ರಸೀಲೇ ಪಡೋಸನ್'' ನಂತಹ ಬೋಲ್ಡ್ & ಹಾಟ್ ವೆಬ್ ಸೀರೀಸ್‌ಗಳಲ್ಲಿ ನಟಿಸಿದ್ದಾರೆ. ಸದ್ಯ ತಮಗೆ ಕರಣ್ ಜೋಶಿ ಕಳಿಸಿರುವ ಮೆಸೇಜ್‌ಗಳ ಸ್ಕ್ರೀನ್ ಶಾಟ್ ಹಂಚಿಕೊಂಡು ಬಿಕ್ಕಿದ್ದಾರೆ.

ಈ ಕುರಿತು ಮಾತನಾಡಿರುವ ನೇಹಲ್, ನಾನು ಯಾವುದೇ ಪ್ರಚಾರದ ಹುಚ್ಚಿಂದ ಈ ಆರೋಪ ಮಾಡುತ್ತಿಲ್ಲ, ಇದೇ ಪರಿಸ್ಥಿತಿ ಮತ್ತಾವುದೇ ಹೆಣ್ಣುಮಗಳಿಗೆ ಎದುರಾಗಬಾರದು ಎಂಬ ಕಾರಣಕ್ಕಾಗಿ ನನ್ನ ಅಳಲನ್ನು ತೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಕರಣ್ ಮಾಡಿರುವ ಮೆಸೇಜ್‌ಗಳನ್ನು ಕೂಡ ತೋರಿಸಿದ್ದಾರೆ.

Prove It TMKOC s Nehal Vadoliya Fires Back After Karan Joshi Claims Instagram Hacking Over Obscene T

ನೇಹಲ್ ಅವರ ಈ ಆರೋಪದಿಂದ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಚಂಡಮಾರುತ ಎದ್ದ ಮೇಲೆ ಕರಣ್ ಜೋಶಿ ಕೂಡ ಪ್ರತಿಕ್ರಿಯೆ ನೀಡಿದ್ದು, ಸಾಮಾನ್ಯವಾಗಿ ಎಲ್ಲರು ಉಪಯೋಗಿಸುವ ಹ್ಯಾಕಿಂಗ್ ಅಸ್ತ್ರವನ್ನು ಉಪಯೋಗಿಸಿದ್ದಾರೆ. ಆರೋಪಗಳನ್ನು ನಿರಾಕರಿಸಿ ಈ ವರ್ಷದ ಆರಂಭದಲ್ಲಿ ನನ್ನ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದರು ಎಂದಿದ್ದಾರೆ.

ಆಗ ನನ್ನ ''ಲಾಡೋ: ಶ್ರೀ ಕೃಷ್ಣ ಸದಾ ಸಹಾಯತೇ'' ಚಿತ್ರ ಬಿಡುಗಡೆಯಾಗುತ್ತಿತ್ತು, ಆ ಸಮಯದಲ್ಲಿ ನಾನು ಚಿತ್ರದ ಪ್ರಚಾರದ ಕೆಲಸಗಳಲ್ಲಿ ಅತಿಯಾಗಿ ಬ್ಯುಸಿಯಾಗಿದ್ದೆ ಎಂದು ಹೇಳಿರುವ ಕರಣ್, ನನ್ನ ಪ್ರೊಫೈಲ್‌ನಲ್ಲಿ ನಡೆದ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ನಂತರ ನೇಹಲ್‌ಗೆ ಮೆಸೇಜ್ ಹೋಗಿದೆ ಎನ್ನುವ ವಿಚಾರ ಗೊತ್ತಾದಾಗ ತಾವು ನೇಹಲ್ ಅವರೊಂದಿಗೆ ಖಾಸಗಿ ಗ್ರೂಪ್ ಚಾಟ್‌ನಲ್ಲಿ ಮಾತನಾಡಿ ಗೊಂದಲ ಬಗೆಹರಿಸಿಕೊಂಡಿದ್ದಾಗಿ ಭಾವಿಸಿದ್ದೆ ಎಂದು ಕರಣ್ ಹೇಳಿಕೊಂಡಿದ್ದು, ನಾನ್ಯಾವ ತಪ್ಪು ಮಾಡಿಲ್ಲ, ನಾನು ನೇಹಲ್‌ಗೆ ಮೆಸೇಜ್ ಕಳಿಸಿಲ್ಲ ಎಂದಿದ್ದಾರೆ. ಇದೆಲ್ಲದರಿಂದ ನನ್ನ ಮೇಲೆ ನನ್ನ ಕುಟುಂಬದ ಮೇಲೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ ಎಂದಿದ್ದಾರೆ. ನಮಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ಧಾರೆ.

ಕರಣ್ ಜೋಶಿ ಅವರ ಈ ಮಾತುಗಳಿಗೆ ಸದ್ಯ ಮತ್ತೆ ತಿರುಗೇಟು ಕೊಟ್ಟಿರುವ ನೇಹಲ್, ಸಾಕ್ಷಿ ಎಲ್ಲಿದೆ ಎಂಬ ಪ್ರಶ್ನೆ ಕೇಳಿದ್ದಾರೆ. ಸಾಕ್ಷಿ ಸಮೇತ ಅಸಲಿ ಸತ್ಯ ಇಲ್ಲಿದೆ. ಈಗ ಯಾರು ಸರಿ, ಯಾರು ತಪ್ಪು ಎಂಬುದನ್ನು ನೀವೇ ನಿರ್ಧರಿಸಿ, ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಂಡಿರುವ ನೇಹಲ್ ತಮ್ಮಿಬ್ಬರ ನಡುವಿನ ಸುದೀರ್ಘ ಚಾಟ್ ಹಿಸ್ಟರಿಯನ್ನು ತೋರಿಸಿದ್ದಾರೆ.

ಇಲ್ಲಿ ಯಾವುದೇ ''ಕಣ್ಮರೆಯಾಗುವ ಸಂದೇಶ'' (disappearing messages) ಫೀಚರ್ ಆನ್ ಆಗಿರಲಿಲ್ಲ. ಅಪರಿಚಿತ ಹ್ಯಾಕರ್ ಒಬ್ಬ ಈ ರೀತಿ ಸತತವಾಗಿ ಮತ್ತು ವ್ಯವಸ್ಥಿತವಾಗಿ ಚಾಟ್ ಮಾಡಲು ಸಾಧ್ಯವೇ ಇಲ್ಲ ಎಂದು ವಾದ ಮಾಡಿರುವ ನೇಹಲ್, ಒಂದು ವೇಳೆ ನಿಮ್ಮ ಖಾತೆ ಹ್ಯಾಕ್ ಆಗಿದ್ದರೆ ನನಗೆ ಕಳಿಸಿರುವಂತೆ ಬೇರೆಯವರಿಗೆ ಕೂಡ ಆ ಹ್ಯಾಕರ್ ಮೆಸೇಜ್ ಮಾಡಿರಬಹುದು, ನೀವೇ ಹೇಳಿದಂತೆ ನಿಮ್ಮ ಸ್ನೇಹಿತರಿಗೆ ಹಣದ ಸಹಾಯವನ್ನು ಕೇಳಿ ಹ್ಯಾಕರ್ ಮೆಸೇಜ್ ಮಾಡಿದ್ದಾನೆ, ಆ ಮೆಸೇಜ್‌ಗಳ ಸ್ಕ್ರೀನ್ ಶಾಟ್‌ಗಳನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ.

ಇಷ್ಟಕ್ಕೇ ಸುಮ್ಮನಾಗದ ನೇಹಲ್, ಕರಣ್ ಜೋಶಿ ಮತ್ತು ಅವರ ಆಪ್ತ ವಲಯದವರು ತಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಕೂಡ ಮಾಡಿದ್ದಾರೆ. ಚಾಟ್ ಲೀಕ್ ಆದ ಬೆನ್ನಲ್ಲೇ ಕರಣ್ ಜೋಶಿ, ಅವನ ಸ್ನೇಹಿತರು, ನಿರ್ಮಾಪಕ ಹಾಗೂ ನಿರ್ದೇಶಕರು ಸೇರಿಕೊಂಡು ಪೋಸ್ಟ್‌ಗಳನ್ನು ಡಿಲೀಟ್ ಮಾಡುವಂತೆ ಮತ್ತು ಈ ಕುರಿತು ಮಾತನಾಡದಂತೆ ತಮ್ಮ ಮೇಲೆ ತೀವ್ರ ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎಂದು ಕೂಡ ನೇಹಲ್ ಆರೋಪ ಮಾಡಿದ್ದಾರೆ.

ಸದ್ಯ ಈ ವಿವಾದ ಚಿತ್ರರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಇಬ್ಬರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.ಯಾವುದೇ ಕಡೆಯಿಂದ ಪೊಲೀಸ್ ದೂರು ಸದ್ಯದವರೆಗೆ ದಾಖಲಾಗಿಲ್ಲ.

English summary
Hacked or caught? TMKOC’s Nehal Vadoliya challenges Karan Joshi to prove his Instagram hacking claims following an inappropriate messaging scandal. Click for details!
Read more about: social media ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X