For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್ ವಿಚ್ಛೇಧನಕ್ಕೆ ಕಾರಣಳಾದಳೆ 'ದಂಗಲ್' ನಟಿ?

  |

  ಅಮೀರ್ ಖಾನ್ ತಮ್ಮ ಪತ್ನಿ ಕಿರಣ್ ರಾವ್‌ಗೆ ವಿಚ್ಛೇಧನ ನೀಡಿದ್ದಾರೆ. ಕಿರಣ್ ರಾವ್ ಹಾಗೂ ಅಮೀರ್ ಖಾನ್ ತಮ್ಮ 15 ವರ್ಷದ ದಾಂಪತ್ಯವನ್ನು ಅಂತ್ಯಗೊಳಿಸಿದ್ದು ಜಂಟಿಯಾಗಿ ಬಹಿರಂಗ ಪತ್ರವೊಂದನ್ನು ಇಂದು ಬರೆದಿದ್ದಾರೆ.

  ಅಮೀರ್ ಖಾನ್ ಹಾಗೂ ಕಿರಣ್ ರಾವ್ ವಿಚ್ಛೇಧನದ ಸುದ್ದಿ ಹೊರಬಿದ್ದ ಕೆಲವೇ ಗಂಟೆಗಳಲ್ಲಿ 'ದಂಗಲ್' ಸಿನಿಮಾದಲ್ಲಿ ಅಮೀರ್ ಖಾನ್ ಜೊತೆಗೆ ನಟಿಸಿದ್ದ ನಟಿಯೊಬ್ಬರ ಹೆಸರು ಟ್ವಿಟ್ಟರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದು ಆಕೆಯಿಂದಲೇ ಅಮೀರ್ ಖಾನ್-ಕಿರಣ್ ರಾವ್ ವಿವಾಹ ಅಂತ್ಯವಾಯಿತು ಎಂದು ಆರೋಪಿಸಲಾಗುತ್ತಿದೆ.

  'ದಂಗಲ್' ಸಿನಿಮಾದಲ್ಲಿ ಅಮೀರ್ ಖಾನ್ ಜೊತೆಗೆ ನಟಿಸಿದ್ದ ಫಾತಿಮಾ ಸನಾ ಶೇಖ್, ಅಮೀರ್ ಖಾನ್‌ ಹೊಸ ಪ್ರೇಯಸಿ ಆಗಿದ್ದು, ಆಕೆಯ ಕಾರಣದಿಂದಲೇ ಅಮೀರ್ ಖಾನ್ ತಮ್ಮ ಪತ್ನಿ ಕಿರಣ್ ರಾವ್‌ಗೆ ವಿಚ್ಛೇಧನ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಾದ ಮುಂದಿಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಅಮೀರ್ ಖಾನ್, ಫಾತಿಮಾ ಜೊತೆಗೆ ಇರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  ಅಮೀರ್ ಖಾನ್ ವಿಚ್ಛೇಧನದ ಬಳಿಕ ಫಾತಿಮಾ ಸನಾ ಶೇಖ್ ಸಾಮಾಜಿಕ ಜಾಲತಾಣ ಖಾತೆ ಮೇಲಿ ದಾಳಿ ಇಟ್ಟಿರುವ ಕೆಲವು ನೆಟ್ಟಿಗರು ಫಾತಿಮಾ ಅವರನ್ನು ನಿಂದಿಸಿದ್ದಾರೆ. ''ನಿನ್ನಂದಲೇ ಅಮೀರ್ ಖಾನ್ ಸಂಸಾರ ಒಡೆಯಿತು'' ಇನ್ನತರೆ ದೂರುಗಳನ್ನು ಹೇಳಿ ನಿಂದಿಸಿದ್ದಾರೆ. ಆದರೆ ಇದಾವುದರ ಬಗ್ಗೆಯೂ ಫಾತಿಮಾ ಸನಾ ಶೇಖ್ ಪ್ರತಿಕ್ರಿಯೆ ನೀಡಿಲ್ಲ.

  ಅಸಲಿಗೆ Dvitva ಪದದ ಅರ್ಥ ಹೇಳಿದ ನಿರ್ದೇಶಕ | Filmibeat Kannada

  ಅಮೀರ್ ಖಾನ್ ಮೊದಲಿಗೆ 1986 ರಲ್ಲಿ ನಟಿ ರೀನಾ ದತ್ತ ಅನ್ನು ವಿವಾಹವಾದರು. ಅವರೊಟ್ಟಿಗೆ 16 ವರ್ಷ ದಾಂಪತ್ಯ ನಡೆಸಿದ ಬಳಿಕ 2005 ರಲ್ಲಿ ವಿಚ್ಛೇಧನ ನೀಡಿ ಈ ಇಬ್ಬರು ದೂರಾದರು. ಆ ನಂತರ ಅಮೀರ್ ಖಾನ್ ತಮ್ಮ 'ಲಗಾನ್' ಸಿನಿಮಾದಲ್ಲಿ ಸಹಾಯಕ ನಿರ್ದೇಶಕಿ ಆಗಿದ್ದ ಕಿರಣ್ ರಾವ್ ಅವರನ್ನು ಬಯಸಿ ವಿವಾಹವಾದರು. ಇದೀಗ ಅವರೊಟ್ಟಿಗೆ 15 ವರ್ಷ ದಾಂಪತ್ಯ ನಡೆಸಿದ ಬಳಿಕ ಈಗ ಕಿರಣ್‌ಗೆ ವಿಚ್ಛೇಧನ ನೀಡಿದ್ದಾರೆ.

  English summary
  Netizen blame Dangal actress Fatima Sana Shaikh for Aamir Khan and Kiran Rao's divorce. Netizen accuse Fatima is the reason that Aamir gave divorce to Kiran Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X