For Quick Alerts
  ALLOW NOTIFICATIONS  
  For Daily Alerts

  'ಥರ್ಡ್ ರೇಟ್' ನಟನೆ ಎಂದ ನೆಟ್ಟಿಗನಿಗೆ ಅಭಿಷೇಕ್ ಬಚ್ಚನ್ ಹೇಳಿದ್ದೇನು?

  |

  ಬಾಲಿವುಡ್ ಸ್ಟಾರ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಮಿತಾಬ್ ಬಚ್ಚನ್ ಸದಾ ಟ್ರೋಲ್‌ಗೆ ಗುರಿಯಾಗುತ್ತಿರುತ್ತಾರೆ. ಒಂದಲ್ಲೊಂದು ವಿಚಾರಕ್ಕೆ ಅಭಿಷೇಕ್ ಅವರನ್ನು ನೆಟ್ಟಿಗರು ಕಾಲೆಳೆಯುತ್ತಿರುತ್ತಾರೆ. ಆದರೆ ಅಭಿಷೇಕ್ ಟ್ರೋಲಿಗರಿಗೆ ಕೂಲ್ ಆಗಿಯೇ ಪ್ರತಿಕ್ರಿಯೆ ಕೊಡುವ ಮೂಲಕ ತಿರುಗೇಟು ನೀಡುತ್ತಿರುತ್ತಾರೆ.

  ಅಭಿಷೇಕ್ ಸದ್ಯ ಬಿಗ್ ಬುಲ್ ಸಿನಿಮಾ ಮೂಲಕ ಒಟಿಟಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಬಿಗ್ ಬುಲ್ ಸ್ಟಾಕ್ ಬ್ರೋಕರ್ ಹರ್ಷದ್ ಮೆಹ್ತಾ ಅವರ ಕಥೆ. ಹರ್ಷದ್ ಮೆಹ್ತಾ ಹಗರಣದ ಬಗ್ಗೆ ಇರುವ ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ.

  ಅಭಿಷೇಕ್ ಬಚ್ಚನ್ ನೆಚ್ಚಿನ ಸಹ ನಟಿ ಯಾರು ಗೊತ್ತೆ?ಅಭಿಷೇಕ್ ಬಚ್ಚನ್ ನೆಚ್ಚಿನ ಸಹ ನಟಿ ಯಾರು ಗೊತ್ತೆ?

  ಸಿನಿಮಾ ವೀಕ್ಷಿಸಿದ ನೆಟ್ಟಿಗನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅಭಿಷೇಕ್ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. 'ಎಂದಿನಂತೆ ಜೂ.ಬಚ್ಚನ್ ತನ್ನ ಥರ್ಡ್ ರೇಟ್ ನಟನೆಯಲ್ಲಿ ಎಲ್ಲಿಯೂ ನಿರಾಸೆಗೊಳಿಸುವುದಿಲ್ಲ. ಆದರೆ ಕಳಪೆ ಚಿತ್ರಕಥೆ ಮತ್ತು ಸಿನಿಮಾ ಕೆಟ್ಟದಾಗಿದೆ. ಚಿತ್ರದಲ್ಲಿ ಪ್ರತೀಕ್ ಗಾಂಧಿ ನಟನೆ ಅದ್ಭುತ' ಎಂದು ಹೇಳಿದ್ದಾರೆ.

  ನೆಟ್ಟಿಗನ ಪ್ರತಿಕ್ರಿಯೆಗೆ ಅಭಿಷೇಕ್ ಬಚ್ಚನ್ ಕೂಲ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. 'ಹೇ ಮ್ಯಾನ್ ನಾನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ನನಗೆ ಸಂತೋಷವಾಗಿದೆ, ನಮ್ಮ ಚಿತ್ರ ನೋಡಲು ಸಮಯ ತೆಗೆದುಕೊಂಡಿದ್ದಕ್ಕಾಗಿ, ಧನ್ಯವಾದಗಳು' ಎಂದಿದ್ದಾರೆ.

  ಅಭಿಷೇಕ್ ಬಚ್ಚನ್ ಈ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿದೆ. ಜೂ.ಬಚ್ಚನ್ ಉತ್ತರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಟ್ರೋಲ್‌ಗಳನ್ನು ನಾಜೂಕಾಗಿಯೇ ನಿಭಾಯಿಸುವ ಅಭಿಷೇಕ್ ಅವರ ಚಾಕಚಕ್ಯತೆ ನೆಟ್ಟಿಗರ ಮನಗೆದ್ದಿದೆ.

  ಯುಗಾದಿ ಹಬ್ಬದ ದಿನ ದರ್ಶನ್ ಮುಂದಿನ ಸಿನಿಮಾ ಅನೌನ್ಸ್!!! | Filmibeat Kannada

  ಈ ಹಿಂದೆ ಟ್ರೋಲಿಗರ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದ ಅಭಿಷೇಕ್, ಇದು ನ್ಯಾಯಯುತ ಆಟ ಎಂದಿದ್ದರು. ಬಿಗ್ ಬುಲ್ ಸಿನಿಮಾದಲ್ಲಿ ನಟ ಅಭಿಷೇಕ್ ಮತ್ತು ಪ್ರತೀಕ್ ಗಾಂಧಿ ನಟಿಸಿದ್ದಾರೆ. ಹರ್ಷದ್ ಪಾತ್ರದಲ್ಲಿ ಪ್ರತೀಕ್ ಮಿಂಚಿದ್ದಾರೆ. ಇಬ್ಬರ ಪಾತ್ರ ಮತ್ತು ನಟನೆಯನ್ನು ಹೋಲಿಕೆ ಮಾಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

  English summary
  Netizen calls Abhishek Bachchan acting in Big Bull third rate.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X