For Quick Alerts
  ALLOW NOTIFICATIONS  
  For Daily Alerts

  ಗಣೇಶ್‌ಗೆ ನಾಯಕಿಯಾಗಿದ್ದ ನಟಿ ಯುವಿಕಾ ಚೌಧರಿ ಬಂಧನಕ್ಕೆ ಒತ್ತಾಯ

  |

  ಕನ್ನಡ, ಹಿಂದಿ, ಪಂಜಾಬಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಯುವಿಕಾ ಚೌಧರಿಯನ್ನು ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಲಾಗುತ್ತಿದೆ.

  ಕನ್ನಡದ 'ಮಳೆಯಲಿ ಜೊತೆಯಲಿ' ಹಿಂದಿಯ 'ಓಂ ಶಾಂತಿ ಓಂ' ಹಾಗೂ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಯುವಿಕಾ ಚೌಧರಿ ಇತ್ತೀಚೆಗೆ ವ್ಲಾಗ್‌ಗಳನ್ನು ಚಿತ್ರೀಕರಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು. ಇತ್ತೀಚೆಗೆ ಮಾಡಿದ ವ್ಲಾಗ್‌ನಲ್ಲಿ ಸಮುದಾಯವೊಂದರ ಜನರ ಭಾವನೆಗಳಿಗೆ ಧಕ್ಕೆ ತರಬಹುದಾದಂತಹಾ ಮಾತುಗಳನ್ನಾಡಿದ್ದಾರೆ ಹಾಗಾಗಿ ಯುವಿಕಾ ಅನ್ನು ಬಂಧಿಸಿ ಎಂಬ ಒತ್ತಾಯ ಕೇಳಿಬರುತ್ತಿದೆ.

  ವ್ಲಾಗ್‌ನಲ್ಲಿ ಮಾತನಾಡುತ್ತಾ ತಾವು ಸರಿಯಾಗಿ ರೆಡಿಯಾಗಿಲ್ಲ, ಮೇಕಪ್ ಮಾಡಿಕೊಂಡಿಲ್ಲ, ಚೆನ್ನಾಗಿರುವ ಬಟ್ಟೆಗಳನ್ನು ಉಟ್ಟಿಲ್ಲ ಎನ್ನುತ್ತಾ ಒಂದು ಜಾತಿಯ ಹೆಸರು ಹೇಳಿ ನಾನು ಆ ಜಾತಿಯವರಂತೆ ಕಾಣುತ್ತಿದ್ದೇನೆ ಎಂದಿದ್ದರು ಯುವಿಕಾ. ನಟಿಯ ಈ ಹೋಲಿಕೆ ಹಲವರಿಗೆ ಸಿಟ್ಟು ತರಿಸಿದೆ.

  ವಿಡಿಯೋ ಹೊರಬೀಳುತ್ತಿದ್ದಂತೆ ಯುವಿಕಾ ಮೇಲೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಕೂಡಲೇ ಎಚ್ಚೆತ್ತುಕೊಂಡ ಯುವಿಕಾ ಆ ವಿಡಿಯೋ ಅನ್ನು ಡಿಲೀಟ್ ಮಾಡಿದ್ದಾರೆ. ಜೊತೆಗೆ 'ನಾನು ಉದ್ದೇಶಪೂರ್ವಕವಾಗಿ ಅಥವಾ ಯಾವುದೇ ಸಮುದಾಯದವರಿಗೆ ಬೇಸರ ತರಿಸಬೇಕೆಂದು ವಿಡಿಯೋ ಮಾಡಲಿಲ್ಲ. ನಾನು ಬಳಸಿದ ಪದದ ಅರ್ಥವೂ ನನಗೆ ಗೊತ್ತಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿಬಿಡಿ' ಎಂದಿದ್ದಾರೆ ಯುವಿಕಾ.

  ಯುವಿಕಾ ಪತಿ ಪ್ರಿನ್ಸ್ ನಾರುಲಾ ಸಹ ಈ ಬಗ್ಗೆ ಕ್ಷಮೆ ಕೇಳಿದ್ದು, 'ಯುವಿಕಾ ಸೇರಿದಂತೆ ನಮಗೆ ಯಾರಿಗೂ ಆ ಪದದ ಅರ್ಥ ಗೊತ್ತಿರಲಿಲ್ಲ. ವಿಡಿಯೋ ಚಿತ್ರೀಕರಣ ಮಾಡಿದಾಗ ನಾನೂ ಅಲ್ಲಿಯೇ ಇದ್ದೆ. ಇದು ಬೇಕೆಂದು ಮಾಡಿದ ತಪ್ಪಲ್ಲ. ಒಮ್ಮೆ ನಮಗೆ ಆ ಪದದ ಅರ್ಥ ಗೊತ್ತಾದ ಬಳಿಕ ನಾವು ಮಾಡಿದ ತಪ್ಪು ಎಷ್ಟು ದೊಡ್ಡದೆಂದು ಅರಿವಾಯಿತು. ದಯವಿಟ್ಟು ನಮ್ಮನ್ನು ಕ್ಷಮಿಸಿ' ಎಂದಿದ್ದಾರೆ ಪ್ರಿನ್ಸ್ ನಾರುಲಾ.

  Sonu Sood ತಮ್ಮ ಅಭಿಮಾನಿಗಳಿಗೆ ಹೀಗೆ ಮಾಡಬೇಡಿ ಅಂದಿದ್ದಾರೆ | Filmibeat Kannada

  ಕೆಲವು ದಿನಗಳ ಹಿಂದಷ್ಟೆ ನಟಿ ಮುನ್‌ಮುನ್‌ ದತ್ ಸಹ ವಿಡಿಯೋ ಒಂದರಲ್ಲಿ ಇದೇ ರೀತಿ ಜಾತಿಯೊಂದರ ಅವಹೇಳನ ಮಾಡಿದ್ದರು. ಮುನ್‌ಮುನ್‌ ದತ್ ಹೆಸರಿಸಿದ್ದ ಜಾತಿಯ ಹೆಸರನ್ನೇ ಯುವಿಕಾ ಸಹ ಬಳಸಿದ್ದಾರೆ.

  English summary
  Actress Yuvika Chaudhary uses casteist slur in her vlog. Netizen demanding of her arrest. She and her husband apologies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X