'ಚಿಲ್ಲರೆ' ಕೆಲಸ ಮಾಡಿ ಕೆಂಗಣ್ಣಿಗೆ ಗುರಿಯಾದ ಸೈಫ್ ಅಲಿ ಖಾನ್..!

ಚಿತ್ರರಂಗದಲ್ಲಿರುವವರಲ್ಲಿ ಎಲ್ಲವೂ ಇರುತ್ತೆ. ಆದರೆ ಕೆಲವರ ಬಳಿ ಹೃದಯ ವೈಶಾಲ್ಯತೆ ಇರುವುದಿಲ್ಲ. ಉದಾಹರಣೆಗೆ ಸೈಫ್ ಅಲಿ ಖಾನ್ ಅವರನ್ನೇ ತೆಗೆದುಕೊಳ್ಳಿ. ಹೌದು. ಎಲ್ಲರಿಗೆ ಗೊತ್ತಿರುವಂತೆ ಕೆಲ ದಿನಗಳ ಹಿಂದೆ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಸೈಫ್ ಅಲಿ ಖಾನ್ ಅವರನ್ನು ಭಜನ್ ಸಿಂಗ್ ರಾಣಾ ಎಂಬ ಆಟೋ ಚಾಲಕ ಆಸ್ಪತ್ರೆಗೆ ಕರೆದೊಯ್ದರು.

ನಿಜಾ, ಆ ಕ್ಷಣಕ್ಕೆ ತನ್ನ ಆಟೋದಲ್ಲಿ ಮಲಗಿರುವ ವ್ಯಕ್ತಿ ಸೈಫ್ ಅಲಿ ಖಾನ್ ಎಂಬ ವಿಚಾರ ಆಟೋ ಡ್ರೈವರ್‌ ಭಜನ್ ಸಿಂಗ್‌ಗೂ ಗೊತ್ತಿರಲಿಲ್ಲ. ಯಾರೋ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕು ಎನ್ನುವುದಷ್ಟೆಅವರ ಮನಸ್ಸಿನಲ್ಲಿ ಇತ್ತು. ಖುದ್ದು ಆಟೋ ಡ್ರೈವರ್ ಭಜನ್ ಸಿಂಗ್ ಮಾಧ್ಯಮಗಳ ಬಳಿ ಈ ವಿಚಾರ ಹೇಳಿಕೊಂಡಿದ್ದಾರೆ. ಆಸ್ಪತ್ರೆಯ ಬಳಿ ಹೋದ ನಂತರವೇ ಸೈಫ್ ಅಲಿ ಖಾನ್ ಅವರನ್ನು ತಾವು ಕರೆತಂದ ವಿಚಾರ ಗೊತ್ತಾಯ್ತು ಎಂದು ಹೇಳಿದ್ದಾರೆ. ಆದರೂ ಕೂಡ ಒಂದು ಪೈಸೆಯನ್ನು ಕೂಡ ಭಜನ್ ಸಿಂಗ್ ರಾಣಾ ಸೈಫ್ ಜೊತೆ ಇದ್ದ ಇಬ್ರಾಹಿಂ ಖಾನ್ ಅವರಿಂದ ತೆಗೆದುಕೊಳ್ಳಲಿಲ್ಲ. ಆ ಕ್ಷಣದಲ್ಲಿ ಮಾನವೀಯತೆಯನ್ನು ಮೆರೆದರು ಭಜನ್ ಸಿಂಗ್. ಆದರೆ, ಆಸ್ಪತ್ರೆಯಿಂದ ಹೊರ ಬಂದ ನಂತರ ಸೈಫ್ ಅಲಿ ಖಾನ್ ಮಾನವೀಯತೆಯನ್ನು ಮರೆತಿದ್ದು ದುರಂತ.

netizens-angry-as-saif-ali-khan-pays-auto-driver-only-rs-50-000-for-saving-his-life

ಹೌದು, ಆಸ್ಪತ್ರೆಗೆ ತಮ್ಮನ್ನು ದಾಖಲಿಸಿದ ಭಜನ್ ಸಿಂಗ್ ರಾಣಾ ಅವರನ್ನು ಸೈಫ್ ಅಲಿ ಖಾನ್ ಭೇಟಿಯಾಗಿದ್ದಾರೆ. ಅಭಿಮಾನದಿಂದ ಭಜನ್ ಸಿಂಗ್ ಜೊತೆ ಫೋಟೊ ಕೂಡ ಕ್ಲಿಕಿಸಿಕೊಂಡಿದ್ದಾರೆ. ಅದರಲ್ಲಿ ತಾವ ತಪ್ಪಿಲ್ಲ. ಆದರೆ, ತಮ್ಮ ಪ್ರಾಣ ಉಳಿಸಿದ್ದಕ್ಕೆ ಭಜನ್ ಸಿಂಗ್‌ಗೆ ಸೈಫ್ ಅಲಿ ಖಾನ್‌ ನೀಡಿದ ಹಣದ ಬಗ್ಗೆ ಈಗ ತಕರಾರು ಎದ್ದಿದೆ. ಅಪಸ್ವರ ಕೇಳಿ ಬರುತ್ತಿದೆ.

ಯಾಕೆಂದರೆ ಸರಿಯಾದ ಸಮಯಕ್ಕೆ ಬಂದು ತಮ್ಮ ಪ್ರಾಣವನ್ನು ಉಳಿಸಿದ್ದ ಭಜನ್ ಸಿಂಗ್‌ ಅವರ ಕೈಯನ್ನು ಸೈಫ್ ಅಲಿ ಖಾನ್ ಹಿಡಿಯುತ್ತಾರೆ. ಕಷ್ಟಕ್ಕೆ ನೆರವಾಗುತ್ತಾರೆ. ಕೊನೆ ಪಕ್ಷ ಐದು ಹತ್ತು ಲಕ್ಷ ಹಣವನ್ನಾದರೂ ಕೊಡುತ್ತಾರೆ ಎಂದು ಅನೇಕರು ಅಂದುಕೊಂಡಿದ್ದರು. ಆದರೆ ಬಾಲಿವುಡ್‌ನ ಕುಬೇರ ಸ್ಟಾರ್‌ಗಳಲ್ಲಿ ಒಬ್ಬರಾದ ಸೈಫ್ ಅಲಿ ಖಾನ್ ಕೇವಲ ಕೇವಲ ಐವತ್ತು ಸಾವಿರ ರೂಪಾಯಿಯನ್ನು ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿಯೇ ಕೆರಳಿರುವ ಅನೇಕರು ಸೈಫ್ ಅಲಿ ಖಾನ್ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಪ್ರಾಣಕ್ಕೆ ಇರುವ ಬೆಲೆ ಕೇವಲ ಐವತ್ತು ಸಾವಿರ ಮಾತ್ರಾನಾ ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಕಷ್ಟಕಾಲದಲ್ಲಿ ಬಂದು ಕೈ ಹಿಡಿದವರ ಕಷ್ಟವನ್ನು ಕೇಳದೆ ಆ ಕಷ್ಟ ನಿವಾರಿಸದೆ ಕೇವಲ ಐವತ್ತು ಸಾವಿರ ಹಣ ನೀಡಿ ಕೈ ತೊಳೆದುಕೊಳ್ಳುವುದಕ್ಕೆ ಮನಸಾದಾರೂ ಹೇಗೆ ಬಂತು ಎಂದು ಕಿಡಿ ಕಾರುತ್ತಿದ್ಧಾರೆ.

ಅಂದ್ಹಾಗೇ ಸೈಫ್ ಅಲಿ ಖಾನ್ ಅವರನ್ನು ಭೇಟಿಯಾದ ನಂತರ ಭಜನ್ ಸಿಂಗ್ ಅವರಿಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ. ಹಣ ನೀಡಿದ್ರಾ ? ನೀಡಿದ್ದರೆ ಎಷ್ಟು ಕೊಟ್ಟಿದ್ದಾರೆ ? ಎಂದೆಲ್ಲ ಕೇಳಿದ್ದರು. ಇದಕ್ಕೆ ಉತ್ತರವನ್ನು ನೀಡಿರುವ ಭಜನ್ ಸಿಂಗ್, ನಾನು ಸೈಫ್ ಅಲಿ ಖಾನ್ ಅವರಿಂದ ಯಾವ ಸಹಾಯದ ನಿರೀಕ್ಷೆಯನ್ನು ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಆದರೂ ಅವರು ಹಣ ನೀಡಿದ್ದಾರೆ, ಕಷ್ಟ ಕಾಲದಲ್ಲಿ ನೆರವಾಗುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿರುವ ಭಜನ್ ಸಿಂಗ್ ಅವರು ನೀಡಿರುವ ಹಣ ಎಷ್ಟು ಎಂದು ನೀವು ಎಷ್ಟೇ ಕೇಳಿದರು ನಾನು ಯಾವುದೇ ಕಾರಣಕ್ಕೂ ಹೇಳುವುದಿಲ್ಲ ಎಂದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X