'ಸಮಂತಾ' ಹೊಸ 'ಬಾಯ್‌ಫ್ರೆಂಡ್' ಈ 'ಬಾಲಿವುಡ್ ಹೀರೋ'ನಾ ? 'ಪದ್ಯ' ಹೇಳಿದ ಪ್ರೇಮಕಥೆ...!
ಪ್ರೀತಿ-ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್‌ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ.
ಇನ್ನೂ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂದು ಕೆಲವೊಮ್ಮೆ ಅನಿಸಿದಂತೆ ಪ್ರೀತಿಯಿಂದ ನೋವನ್ನು ಕೂಡ ಪದೇ ಪದೆ ಅನುಭವಿಸಬೇಕಾಗುತ್ತೆ. ಪ್ರೀತಿಯಲ್ಲಿ ಬೀಳುವುದು ಮತ್ತು ಪ್ರೀತಿಯಿಂದ ದೂರವಾಗುವುದು ಈಗೀಗ ತುಂಬಾನೇ ಕಾಮನ್ನು. ಆದರೆ ಹಿಂದೆಯೆಲ್ಲ ಅನುಭವಗಳ ಮೂಲಕ ಹಲವು ವಿಚಾರ ಕಲಿತುಕೊಂಡರೂ, ಪ್ರೀತಿಯ ವಿಷಯದಲ್ಲಿ ಮಾತ್ರ ಅನೇಕ ಸಲ ತುಂಬಾ ಹರ್ಟ್ ಆಗುತ್ತಿತ್ತು. ಜೀವನಪೂರ್ತಿ ಆ ನೋವು ಕಾಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನೂ ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಇವತ್ತು ದೂರವಾದಷ್ಟೇ ಬೇಗ ಬೇರೆಯವರಿಗೆ ಅನೇಕರು ಹತ್ತಿರವಾಗುತ್ತಾರೆ. ದಾಂಪತ್ಯ ಮುರಿದು ಬಿದ್ದ ನೋವಾಗಲಿ.. ಪ್ರೀತಿಯಲ್ಲಿ ಅನುಭವಿಸಿದ ನೋವಾಗಲಿ.. ಮುಖದಲ್ಲಿ ಈ ಯಾವ ಲವಲೇಶವೂ ಕಾಣಿಸುವುದಿಲ್ಲ. ಇದಕ್ಕೆ ಅರ್ಜುನ್ ಕಪೂರ್ ಮತ್ತು ಸಮಂತಾ ಸದ್ಯದ ಉದಾಹರಣೆ ಎನ್ನುತ್ತಿದೆ ಚಿತ್ರ ಉದ್ಯಮ.

ಹೌದು, ಎಲ್ಲರಿಗೆ ಗೊತ್ತಿರುವಂತೆ ನಾಗಚೈತನ್ಯ ಅವರಿಂದ ದೂರವಾದ ಸಮಂತಾ ಇನ್ನೂ ವಿರಹ ವೇದನೆಯಲ್ಲಿದ್ದಾರೆ. ನಾಗಚೈತನ್ಯ ಅವರನ್ನು ಮರೆತು ಚಿತ್ರರಂಗದಲ್ಲಿ ಬ್ಯುಸಿಯಾಗುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಅರ್ಜುನ್ ಕಪೂರ್ ಕಥೆ ಬೇರೆ. ಮದ್ವೆಯಾಗದೇ ಸುಖ ಸಂಸಾರ ನಡೆಸುವ ಪ್ರಯತ್ನವನ್ನು ಮಾಡಿದ ಅರ್ಜುನ್ ಕಪೂರ್ ಸದ್ಯ ಜೀವಕ್ಕೆ ಜೀವದಂತೆ ಇದ್ದ ಮಲೈಕಾ ಅರೋರಾ ಖಾನ್ ಅವರಿಂದ ದೂರವಾಗಿದ್ದಾರೆ. ಸಂಬಂಧ ಕಡಿದುಕೊಂಡಿದ್ದಾರೆ. ಆದರೆ, ಹೀಗೆ ಪ್ರೀತಿಯಲ್ಲಿ ನೊಂದವರು ಈಗ ಒಬ್ಬರೊಬ್ಬರ ಹತ್ತಿರ ಬರುತ್ತಿದ್ದಾರೆ. ಇಂತಹದ್ದೊಂದು ಅನುಮಾನ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಅರ್ಜುನ್ ಕಪೂರ್ ನಡಾವಳಿ.
ಹೌದು, ಅಸಲಿಗೆ ಸಮಂತಾ ಮೊನ್ನೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪದ್ಯವೊಂದನ್ನು ಹಂಚಿಕೊಂಡಿದ್ದರು. ಜೀವನ ಮತ್ತು ಎದುರಾಗುವ ಸವಾಲುಗಳ ಬಗ್ಗೆ ರುಡ್ಯಾರ್ಡ್ ಕಿಪ್ಲಿಂಗ್ ಬರೆದ ಸಾಲುಗಳನ್ನು ಹಂಚಿಕೊಂಡಿದ್ದರು. ಇದಕ್ಕೆ ಮಲೈಕಾ ಅರೋರಾ ಅವರ ಮಾಜಿ ಪ್ರಿಯತಮ ಅರ್ಜುನ್ ಕಪೂರ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ, ಈ ಕವಿತೆಯನ್ನು ನಾನು ಪ್ರಿಂಟ್ ಪಡೆದು ನನ್ನ ಗೋಡೆ ಮೇಲೆ ನೇತು ಹಾಕಿದ್ದೇನೆ ಎಂದಿರುವ ಅರ್ಜುನ್ ಕಪೂರ್ ನನಗೆ ಹತಾಶವಾದಾಗ, ಸೋತೆ ಎಂಬ ಭಾವನೆ ಮೂಡಿದಾಗ, ಸ್ಫೂರ್ತಿ ಬೇಕಾದಾಗೆಲ್ಲ ನಾನು ಈ ಸಾಲುಗಳನ್ನು ಓದುತ್ತೇನೆ ಎಂದಿದ್ದಾರೆ. ಈ ಪದ್ಯ ನನ್ನ ಸ್ಫೂರ್ತಿಯ ಸೆಲೆ ಎಂದಿದ್ದಾರೆ. ಅರ್ಜುನ್ ಕಪೂರ್ ಅವರ ಈ ಮಾತುಗಳಿಗೆ ಸಮಂತಾ ಕೂಡ ತಲೆದೂಗಿದ್ದಾರೆ. ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಅರ್ಜುನ್ ಕಪೂರ್ ಅವರ ಈ ಅಭಿಪ್ರಾಯ ಈಗ ಹಲವರ ಅನುಮಾನಕ್ಕೆ ಕಾರಣವಾಗಿದೆ. ಸಮಂತಾ ಅವರನ್ನು ಓಲೈಸಿಕೊಳ್ಳಲು ಅರ್ಜುನ್ ಕಪೂರ್ ಕಸರತ್ತು ಶುರು ಮಾಡಿದ್ದಾರಾ ಎನ್ನುವ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ. ಅರ್ಜುನ್ ಕಪೂರ್ ಮತ್ತು ಸಮಂತಾ ಅವರ ಹಾವ-ಭಾವ-ನಡೆಯ ಮೇಲೀಗ ಒಂದು ವರ್ಗ ಸಾಮಾಜಿಕ ಜಾಲತಾಣದ ಮೂಲಕ ಕಣ್ಣಿಟ್ಟಿದೆ. ಅರ್ಜುನ್ ಕಪೂರ್ ಲವ್ಸ್ ಸಮಂತಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಶುರುವಾಗಿದೆ.ಸಮಂತಾ ಅರ್ಜುನ್ ಪ್ರೇಮ ಕಥೆಗೆ ರೆಕ್ಕೆಪುಕ್ಕ ಹುಟ್ಟಿಕೊಂಡಿದೆ. ನಿಜಕ್ಕೂ ಸಮಂತಾ ಹಿಂದೆ ಅರ್ಜುನ್ ಕಪೂರ್ ಬಿದ್ದಿದ್ದಾರಾ..? ಉತ್ತರವನ್ನು ಈಗ ಅವರೇ ನೀಡಬೇಕಿದೆ.


Click it and Unblock the Notifications











