For Quick Alerts
  ALLOW NOTIFICATIONS  
  For Daily Alerts

  ಮುಂಬೈನಲ್ಲಿ ಕೊರೊನಾ ಕಾಟ, ಊರು ಬಿಟ್ಟು ಸೆಲೆಬ್ರಿಟಿಗಳು: ಕಾಲೆಳೆದ ನೆಟ್ಟಿಗರು

  |

  ಕಳೆದ ವರ್ಷ ಕೊರೊನಾ ವೈರಸ್ ವಿಪರೀತವಾದಾಗ ಜನಸಾಮಾನ್ಯರು ನಗರಗಳನ್ನು ಬಿಟ್ಟು ಊರುಗಳ ಕಡೆ ಹೋಗುತ್ತಿದ್ದ ದೃಶ್ಯಗಳು ಕಂಡು ಬಂದಿದ್ದವು. ಆದ್ರೀಗ, ಕೊರೊನಾ ಎರಡನೇ ಅಲೆಯ ಪರಿಣಾಮ ಸೆಲೆಬ್ರಿಟಿಗಳು ಊರು ಬಿಟ್ಟು ಹೋಗುತ್ತಿದ್ದಾರೆ.

  ಕೊರೊನಾಗೆ ಹೆದರಿ ಮುಂಬೈ ಬಿಟ್ಟು ಹೋಗ್ತಿರೋ ನಟ-ನಟಿಯರು | Filmibeat Kannada

  ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಿದೆ. ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಶಿವಸೇನೆ ಸಾಮ್ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಭಾರಿ ಏರಿಕೆ ಕಾಣುತ್ತಿದೆ. ಅದರಲ್ಲೂ ವಾಣಿಜ್ಯ ನಗರಿ ಮುಂಬೈನಲ್ಲಿ ಕೋವಿಡ್ ನಿಯಂತ್ರಣ ತಪ್ಪಿದೆ ಎಂಬ ಆತಂಕ ಉಂಟಾಗಿದೆ. ನಗರದಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸೆಲೆಬ್ರಿಟಿಗಳು ಊರು ಬಿಟ್ಟು ಹೊರಗೆ ಹೋಗುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ. ಸೆಲೆಬ್ರಿಟಿಗಳ ಈ ನಡೆಯನ್ನು ನೆಟ್ಟಿಗರು ಖಂಡಿಸಿದ್ದಾರೆ. ಮುಂದೆ ಓದಿ...

  'ಕೇರ್‌ಲೆಸ್' ಆಲಿಯಾ ಭಟ್-ರಣಬೀರ್ ಕಪೂರ್

  'ಕೇರ್‌ಲೆಸ್' ಆಲಿಯಾ ಭಟ್-ರಣಬೀರ್ ಕಪೂರ್

  ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಸೋಮವಾರವಷ್ಟೇ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು. ಈ ಹಿಂದೆ ಇಬ್ಬರಿಗೂ ಕೊರೊನಾ ಸೋಂಕು ತಗುಲಿತ್ತು. ಕೋವಿಡ್‌ನಿಂದ ಗುಣಮುಖರಾಗುತ್ತಿದ್ದಂತೆ ಮುಂಬೈ ಬಿಟ್ಟು ಮಾಲ್ಡೀವ್ಸ್‌ಗೆ ಪ್ರಯಾಣ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಸುದ್ದಿ ತಿಳಿದ ನೆಟ್ಟಿಗರು ಆಲಿಯಾ ಭಟ್ ಮತ್ತು ರಣ್ಬೀರ್ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  ಮಹಾರಾಷ್ಟ್ರದಲ್ಲಿ ಕರ್ಫ್ಯೂ: ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ ಪಡುಕೋಣೆ ದಂಪತಿಮಹಾರಾಷ್ಟ್ರದಲ್ಲಿ ಕರ್ಫ್ಯೂ: ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ ಪಡುಕೋಣೆ ದಂಪತಿ

  ಇಂತವರಿಂದಲೇ ಸೋಂಕು ಹೆಚ್ಚಾಗುತ್ತಿರುವುದು

  ಇಂತವರಿಂದಲೇ ಸೋಂಕು ಹೆಚ್ಚಾಗುತ್ತಿರುವುದು

  ''ಕೊರೊನಾ ನೆಗೆಟಿವ್ ಬಂದ್ಮೇಲೆ ಮನೆಯಲ್ಲಿ ವಿಶ್ರಾಂತಿ ಪಡೆಯುವ ಮೂಲಕ ಜವಾಬ್ದಾರಿ ಮೆರೆಯಬೇಕು. ಕೊರೊನಾ ಕುರಿತು ಜಾಗೃತಿ ಮೂಡಿಸುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಬೇಕು. ಆದ್ರೆ, ಇವರು ಮಾಡುತ್ತಿರುವುದೇನು? ಇವರ ಅಕ್ಕಪಕ್ಕದಲ್ಲಿವವರಿಗೆ ತೊಂದರೆ ಕೊಡ್ತಿದ್ದಾರೆ. ಇಂತಹ ಸಮಯದಲ್ಲಿ ಎಂಜಾಯ್ ಮಾಡಲು ಹೋಗ್ತಿದ್ದಾರೆ. ಮುಂಬೈನಲ್ಲಿ ಇಂತವರಿಂದಲೇ ಸೋಂಕು ಹರಡುತ್ತಿರುವುದು. ಕೇರ್‌ಲೆಸ್ ಜನ ಇವರು'' ಎಂದು ನೆಟ್ಟಿಗರು ಟೀಕಿಸಿದ್ದಾರೆ.

  ಬೆಂಗಳೂರಿನಲ್ಲಿ ದೀಪಿಕಾ-ರಣ್ವೀರ್ ಸಿಂಗ್

  ಬೆಂಗಳೂರಿನಲ್ಲಿ ದೀಪಿಕಾ-ರಣ್ವೀರ್ ಸಿಂಗ್

  ಮುಂಬೈನಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆ ಕರ್ಫ್ಯೂ ಜಾರಿ ಮಾಡಿದ್ದರು. ಈ ಹಿನ್ನೆಲೆ ಮುಂಬೈ ನಗರ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ದಂಪತಿ.

  ಮುಂಬೈನಲ್ಲಿ ಕರ್ಫ್ಯೂ: ಬಾಯ್ ಫ್ರೆಂಡ್ ಜೊತೆ ಮಾಲ್ಡೀವ್ಸ್‌ಗೆ ಹಾರಿದ ನಟಿ ಆಲಿಯಾ ಭಟ್ಮುಂಬೈನಲ್ಲಿ ಕರ್ಫ್ಯೂ: ಬಾಯ್ ಫ್ರೆಂಡ್ ಜೊತೆ ಮಾಲ್ಡೀವ್ಸ್‌ಗೆ ಹಾರಿದ ನಟಿ ಆಲಿಯಾ ಭಟ್

  ಹೈದರಾಬಾದ್‌ಗೆ ಹಾರಿದ ರಶ್ಮಿಕಾ

  ಹೈದರಾಬಾದ್‌ಗೆ ಹಾರಿದ ರಶ್ಮಿಕಾ

  ಬಾಲಿವುಡ್ ಚಿತ್ರದ ಶೂಟಿಂಗ್ ಹಿನ್ನೆಲೆ ಮುಂಬೈಗೆ ತಲುಪಿದ್ದ ರಶ್ಮಿಕಾ ಮಂದಣ್ಣ, ಕರ್ಫ್ಯೂ ಜಾರಿ ಮಾಡುತ್ತಿದ್ದಂತೆ ಹೈದರಾಬಾದ್‌ಗೆ ಹಾರಿದ್ದಾರೆ. ಕರ್ಫ್ಯೂ ಹಿಂಪಡೆದ ನಂತರ ವಾಪಸ್ ಬರುತ್ತೇನೆ, ನಿಮ್ಮ ಸುರಕ್ಷಿತೆ ಮುಖ್ಯ, ಜಾಗೃತರಾಗಿರಿ ಎಂದು ಏರ್‌ಪೋರ್ಟ್‌ನಲ್ಲಿ ಹೇಳಿ ಹೋಗಿದ್ದರು.

  ಮಾಲ್ಡೀವ್ಸ್‌ಗೆ ಸಾರಾ ಅಲಿ ಖಾನ್?

  ಮಾಲ್ಡೀವ್ಸ್‌ಗೆ ಸಾರಾ ಅಲಿ ಖಾನ್?

  ಎರಡು ದಿನಗಳ ಹಿಂದೆಯಷ್ಟೇ ನಟಿ ಸಾರಾ ಅಲಿ ಖಾನ್ ಮತ್ತು ಆಕೆಯ ತಾಯಿ ಮುಂಬೈ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ವರದಿಗಳ ಪ್ರಕಾರ ಸಾರಾ ಅಲಿ ಖಾನ್ ಸಹ ಮಾಲ್ಡೀವ್ಸ್‌ಗೆ ಹೋಗಿದ್ದಾರೆ.

  ಮಹಾರಾಷ್ಟ್ರದಲ್ಲಿ ಕರ್ಫ್ಯೂ: ಮುಂಬೈ ಬಿಟ್ಟು ಹೈದರಾಬಾದ್‌ಗೆ ಹಾರಿದ ರಶ್ಮಿಕಾಮಹಾರಾಷ್ಟ್ರದಲ್ಲಿ ಕರ್ಫ್ಯೂ: ಮುಂಬೈ ಬಿಟ್ಟು ಹೈದರಾಬಾದ್‌ಗೆ ಹಾರಿದ ರಶ್ಮಿಕಾ

  ಟೈಗರ್ ಶ್ರಾಫ್-ದಿಶಾ ಪಟಾನಿ

  ಟೈಗರ್ ಶ್ರಾಫ್-ದಿಶಾ ಪಟಾನಿ

  ಇತ್ತೀಚಿಗಷ್ಟೆ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಜೋಡಿ ಸಹ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಕೂಡ ಮಾಲ್ಡೀವ್ಸ್‌ಗೆ ಹೋಗಿದ್ದಾರೆ ಎನ್ನಲಾಗಿದೆ.

  English summary
  Netizens Called Careless To aliya bhat and ranbir kapoor for jetting off to Maldives.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X