For Quick Alerts
  ALLOW NOTIFICATIONS  
  For Daily Alerts

  JNU ವಿದ್ಯಾರ್ಥಿಗಳಿಗೆ ದೀಪಿಕಾ ಬೆಂಬಲ: 'ಚಪಾಕ್' ಟಿಕೆಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿರುವ ನೆಟ್ಟಿಗರು

  |

  ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಈಗ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಇತ್ತೀಚಿಗೆ ಜೆ ಎನ್ ಯೂ ಕ್ಯಾಂಪಸ್ ಗೆ ಭೇಟಿ ನೀಡಿದ ದೀಪಿಕಾ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಅನೇಕರು ನಡೆಸುತ್ತಿರುವ ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ.

  ದೀಪಿಕಾ ಸಿನಿಮಾ ಬಿಟ್ಟರೆ ಬೇರೆ ವಿಚಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸದಾ ಸಿನಿಮಾದಲ್ಲಿ ಬ್ಯುಸಿಯಾಗಿರುತ್ತಿದ್ದ ದೀಪಿಕಾ ದಿಢೀರನೆ ಜೆ ಎನ್ ಯು ಗೆ ಭೇಟಿ ನೀಡಿ ವಿದ್ಯಾರ್ಥಿಗಳು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ಅಚ್ಚರಿ ಮೂಡಿಸಿರುವುದಲ್ಲದೆ, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

  JNU ವಿದ್ಯಾರ್ಥಿಗಳಿಗೆ ದೀಪಿಕಾ ಬೆಂಬಲ: ಶ್ಲಾಘಿಸಿ ಟ್ವೀಟ್ ಡಿಲಿಟ್ ಮಾಡಿದ ಪಾಕ್ ಆರ್ಮಿ ವಕ್ತಾರJNU ವಿದ್ಯಾರ್ಥಿಗಳಿಗೆ ದೀಪಿಕಾ ಬೆಂಬಲ: ಶ್ಲಾಘಿಸಿ ಟ್ವೀಟ್ ಡಿಲಿಟ್ ಮಾಡಿದ ಪಾಕ್ ಆರ್ಮಿ ವಕ್ತಾರ

  ದೀಪಿಕಾ ಪರ ಮತ್ತು ವಿರೋಧ ಚರ್ಚೆಯಾಗುತ್ತಿದ್ದಂತೆ ದೀಪಿಕಾ ಅಭಿನಯದ 'ಚಪಾಕ್' ಸಿನಿಮಾಗೆ ದೊಡ್ಡ ಹೊಡೆತ ಬಿದ್ದಿದೆ. ಸಿನಿಮಾ ಬಹಿಷ್ಕರಿಸುವಂತೆ ಟ್ವಿಟ್ಟರ್ ನಲ್ಲಿ ಅಭಿಯಾನ ಮಾಡಲಾಗುತ್ತಿದೆ. ಅಲ್ಲದೆ ಈಗಾಗಲೆ ಸಿನಿಮಾಗೆ ಮುಂಗಡ ಟಿಕೆಟ್ ಬುಕ್ ಮಾಡಿದ ಅಭಿಮಾನಿಗಳು ಕ್ಯಾನ್ಸಲ್ ಮಾಡುತ್ತಿದ್ದಾರಂತೆ. ಟಿಕೆಟ್ ಕ್ಯಾನ್ಸಲ್ ಮಾಡಿ ಸ್ಕ್ರೀನ್ ಶಾಟ್ ತೆಗೆದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ.

  ಅಷ್ಟೆಯಲ್ಲ ಟ್ವಿಟ್ಟರ್, ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ ಅವರನ್ನು ಫಾಲೋ ಮಾಡುತ್ತಿದ್ದ ಅಭಿಮಾನಿಗಳು ಅನ್ ಫಾಲೋ ಮಾಡುತ್ತಿದ್ದಾರೆ. ಇನ್ನು ಕೆಲವರು ಬ್ಲಾಕ್ ಮಾಡುತ್ತಿದ್ದಾರೆ. ಬಹುನಿರೀಕ್ಷೆಯ ಚಪಾಕ್ ಸಿನಿಮಾ ಇದೆ ತಿಂಗಳು 10ಕ್ಕೆ ತೆರೆಗೆ ಬರುತ್ತಿದೆ. ನೈಜ ಘಟನೆ ಆಧಾರಿತ ಚಪಾಕ್ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಆದರೀಗ ಅಭಿಮಾನಿಗಳು ದೀಪಿಕಾ ಮೇಲೆ ಸಿಟ್ಟಾಗಿ ಸಿನಿಮಾ ಬಹಿಷ್ಕರಿಸುತ್ತಿದ್ದಾರೆ.

  English summary
  Netizens Cancelled their ticket for Chhapaak as Deepika Padukone support JNU student. BoycottChapak trend on Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X