For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಪ್ರಕರಣದ ತನಿಖೆ ಮಧ್ಯೆ ನಟಿ ಶ್ರೀದೇವಿ ಸಾವಿನ ಬಗ್ಗೆ CBI ತನಿಖೆಗೆ ನೆಟ್ಟಿಗರ ಒತ್ತಾಯ

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ. ಸುಶಾಂತ್ ಸಿಂಗ್ ಅವರದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೂ ಎನ್ನುವ ಚರ್ಚೆ ನಡೆಯುತ್ತಿದೆ. ನೆಟ್ಟಿಗರು ಸುಶಾಂತ್ ಸಿಂಗ್ ಅವರದ್ದು ಕೊಲೆ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯ ಮಾಡುತ್ತಿದ್ದರು. ಈಗ ಸುಶಾಂತ್ ಸಾವಿನ ಪ್ರಕರಣ ಸಿಬಿಐ ಅಂಗಳದಲ್ಲಿದೆ.

  ಈ ನಡುವೆ ಇದೀಗ ನಟಿ ಶ್ರೀದೇವಿ ಸಾವಿನ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ನೆಟ್ಟಿಗರು ಶ್ರೀದೇವಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ #CBIEnquiryForSridevi ಎಂದು ಟ್ರೆಂಡ್ ಮಾಡುತ್ತಿದ್ದಾರೆ.

  ರಿಯಾ ಕುಟುಂಬಕ್ಕೆ ED ಅಧಿಕಾರಿಗಳಿಂದ ಮತ್ತೊಂದು ಶಾಕ್: 4 ಮೊಬೈಲ್ ಫೋನ್ ಸೀಜ್ರಿಯಾ ಕುಟುಂಬಕ್ಕೆ ED ಅಧಿಕಾರಿಗಳಿಂದ ಮತ್ತೊಂದು ಶಾಕ್: 4 ಮೊಬೈಲ್ ಫೋನ್ ಸೀಜ್

  ನಟಿ ಶ್ರೀದೇವಿ ನಿಧನಹೊಂದಿ ಎರಡು ವರ್ಷಗಳಾಗಿದೆ. 2018 ಫೆಬ್ರವರಿ 25ರಂದು ದುಬೈನ ಹೋಟಲ್ ನಲ್ಲಿ ಶ್ರೀದೇವಿ ಸಾವನ್ನಪ್ಪಿದ್ದರು. ಹೋಟೆಲ್ ನ ಬಾತ್ ಟಬ್ ನಲ್ಲಿ ಶ್ರೀದೇವಿ ಶವವಾಗಿ ಪತ್ತೆಯಾಗಿದ್ದರು. ದುಬೈ ವಿಧಿ ವಿಜ್ಞಾನ ವರದಿ ಶ್ರೀದೇವಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿರುದಾಗಿ ವರದಿ ನೀಡಿತ್ತು. ಆದರೆ ಶ್ರೀದೇವಿ ಸಾವಿನ ಬಗ್ಗೆಯು ಸಾಕಷ್ಟು ಅನುಮಾನ ಮೂಡಿಸಿತ್ತು.

  ಆದರೀಗ ಶ್ರೀದೇವಿ ಸಾವಿನ ಪ್ರಕರಣವನ್ನು ಸಿಬಿಐಗೆ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದಾರೆ. ಶ್ರೀದೇವಿ ಅವರದ್ದು ಕೊಲೆ, ಬಾತ್ ಟಬ್ ನಲ್ಲಿ ಮುಳುಗಿ ಸಾಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ. ಶ್ರೀದೇವಿ ಅವರದ್ದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎನ್ನುವ ಅನುಮಾನ ಅಭಿಮಾನಿಗಳನ್ನು ಈಗಲು ಕಾಡುತ್ತಿದೆ.

  English summary
  Netizens demand CBI enquiry for Sridevi death amid Sushant Singh case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X