ರಾವಣನ ಪರವಾಗಿ ಮಾತನಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟ ಸೈಫ್ ಅಲಿ ಖಾನ್

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಭಾಸ್ ರಾಮನಾಗಿ ನಟಿಸಿದರೆ ಸೈಫ್ ರಾವಣನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ.

ಮೊದಲ ಬಾರಿಗೆ ಸೈಫ್ ಅಲಿ ಖಾನ್ ಮತ್ತು ಪ್ರಭಾಸ್ ಒಟ್ಟಿಗೆ ನಟಿಸುತ್ತಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಓಂ ರಾವತ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಈ ಬಗ್ಗೆ ಮೊದಲ ಬಾರಿಗೆ ಸೈಫ್ ಅಲಿ ಖಾನ್ ಮಾತನಾಡಿದ್ದಾರೆ. ಸಿನಿಮಾದ ಪಾತ್ರ, ರಾವಣನ ಗುಣದ ಬಗ್ಗೆ ಸೈಫ್ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ರಾವಣನ ಬಗ್ಗೆ ಸೈಫ್ ಅಲಿ ಖಾನ್ ಹೇಳಿರುವ ಹೇಳಿಕೆ ಈಗ ವಿವಾದಕ್ಕೆ ಗುರಿಯಾಗಿದೆ. ಮುಂದೆ ಓದಿ..

ಸೈಫ್ ಅಲಿ ಖಾನ್ ಹೇಳಿದ್ದೇನು?

ಸೈಫ್ ಅಲಿ ಖಾನ್ ಹೇಳಿದ್ದೇನು?

'ರಾವಣನಾಗಿ ನಟಿಸಲು ಉತ್ಸುಕನಾಗಿದ್ದೇನೆ. ಆ ಪಾತ್ರ ನಿರ್ವಹಣೆಯಲ್ಲಿ ಯಾವುದೇ ನಿರ್ಬಂಧವಿಲ್ಲ. ಮನರಂಜನೆ ದೃಷ್ಟಿಯಿಂದ ಆ ಪಾತ್ರಕ್ಕೆ ನಾವು ಮಾನವೀಯ ಗುಣಗಳನ್ನು ಅಳವಡಿಸುತ್ತಿದ್ದೇವೆ. ಲಕ್ಷ್ಮಣನು ಶೂರ್ಪನಕಿಯ ಮೂಗು ಕತ್ತರಿಸಿದಕ್ಕಾಗಿ ಪ್ರತಿಕಾರ ತೀರಿಸಿಕೊಳ್ಳುವ ಕಾರಣಕ್ಕಾಗಿಯೇ ರಾವಣನು ಸೀತೆಯನ್ನು ಅಪರಿಸಿದ್ದ ಮತ್ತು ರಾಮನ ವಿರುದ್ಧ ಯುದ್ಧ ಮಾಡಿದ್ದ ಎಂಬುದನ್ನು ಈ ಸಿನಿಮಾ ಸಮರ್ಥಿಸುತ್ತಿದೆ' ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ.

ನಟ್ಟಿಗರ ಆಕ್ರೋಶ

ನಟ್ಟಿಗರ ಆಕ್ರೋಶ

ಸೈಫ್ ಅಲ್ ಖಾನ್, ರಾವಣನು ಸೀತೆ ಅಪಹರಣ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ರಾವಣನೇ ಹೀರೋ ಎನ್ನುವ ರೀತಿಯಲ್ಲಿ ಸೈಫ್ ಮಾತನಾಡಿದ್ದಾರೆ. ಇಲ್ಲಿ ರಾಮಾಯಣವನ್ನು ತಿರುಚಲಾಗಿದೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೈಫ್ ಪಾತ್ರಕ್ಕೆ ಬೇರೆ ನಟನನ್ನು ಆಯ್ಕೆ ಮಾಡಿ

ಸೈಫ್ ಪಾತ್ರಕ್ಕೆ ಬೇರೆ ನಟನನ್ನು ಆಯ್ಕೆ ಮಾಡಿ

ಅಷ್ಟೆಯಲ್ಲ ಸಿನಿಮಾದಿಂದ ಸೈಫ್ ಅಲಿ ಖಾನ್ ರನ್ನು ಕೈಬಿಡಬೇಕು ಎಂದು ಒತ್ತಾಯ ಕೇಳಿಬರುತ್ತಿದೆ. ಆದಿಪುರುಷ್ ಸಿನಿಮಾದಲ್ಲಿ ಸೈಫ್ ನಟಿಸಬಾರದು, ಸೈಫ್ ಬದಲಿಗೆ ಬೇರೆ ನಟನನ್ನು ಆಯ್ಕೆ ಮಾಡಿ ಎಂದು ನೆಟ್ಟಿಗರು ಸಿನಿಮಾತಂಡಕ್ಕೆ ಒತ್ತಾಯ ಮಾಡುತ್ತಿದ್ದಾರೆ.

Recommended Video

ಜೀವನದಲ್ಲಿ ಯಾವತ್ತು ಒಂದೇ ಗುರಿ ಇರ್ಬೇಕು | Shivraj K R Pete | Filmibeat Kannada
ಲಕ್ಷ್ಮಣ ಪಾತ್ರದಲ್ಲಿ ಸನ್ನಿ ಸಿಂಗ್, ಸೀತೆ ಪಾತ್ರದಲ್ಲಿ ಕೃತಿ

ಲಕ್ಷ್ಮಣ ಪಾತ್ರದಲ್ಲಿ ಸನ್ನಿ ಸಿಂಗ್, ಸೀತೆ ಪಾತ್ರದಲ್ಲಿ ಕೃತಿ

ಪ್ರಭಾಸ್ ರಾಮನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಸೈಫ್ ರಾವಣ, ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸಲಿದ್ದಾರೆ. ಇನ್ನು ಸೀತೆಯ ಆಯ್ಕೆ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ಆದರೆ ಕೃತಿ ಸೆನನ್ ಹೆಸರು ಫೈನಲ್ ಆಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಮುಂದಿನ ವರ್ಷದಿಂದ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Netizens demand to replace actor Saif Ali khan as Ravan in Adipurush.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X