"ಕುಂಕುಮ ಇಲ್ಲ..ಮಾಂಗಲ್ಯವಿಲ್ಲ": ಹನಿಮೂನ್‌ ಮುಗಿಸಿ ಬಂದ ಜೋಡಿ ಮೇಲೆ ನೆಟ್ಟಿಗರ ಕೆಂಗಣ್ಣು!

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್‌ ಲವ್‌ ಬರ್ಡ್ಸ್‌ ಕೆಲವೇ ದಿನಗಳ ಹಿಂದಷ್ಟೇ ಜೋಡಿ ಹಕ್ಕಿಗಳಾಗಿದ್ದು ಗೊತ್ತೇ ಇದೆ. ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇದೇ ತಿಂಗಳು ಫೆಬ್ರವರಿ 7 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಘರ್ ಪ್ಯಾಲೇಸ್ ಹೋಟೆಲ್‌ನಲ್ಲಿ ಈ ಜೋಡಿ ಕುಟುಂಬದ ಸದಸ್ಯರು ಹಾಗೂ ಆಪ್ತರ ಸಮ್ಮುಖದಲ್ಲಿ ಕೌಟುಂಬಿಕ ಜೀವನ ಆರಂಭಿಸಿದ್ದರು. ಮದುವೆ ಸಮಾರಂಭ ಮುಗಿಯುತ್ತಿದ್ದಂತೆ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಜೋಡಿ ಸೀದಾ ಹನಿಮೂನ್‌ಗೆ ಹಾರಿದ್ದರು. ಅಲ್ಲಿಂದ ಈ ಜೋಡಿ ಈಗ ಹಿಂತಿರುಗಿದೆ. ಹನಿಮೂನ್ ಮುಗಿಸಿದ ಮುಂಬೈಗೆ ಕಾಲಿಡುತ್ತಿದ್ದಂತೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ.

ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇಬ್ಬರೂ ಮದುವೆ ಬಳಿಕವೂ ಸಿಂಪಲ್ ಆಗಿದ್ದಾರೆ. ಮದುವೆ ಸಮಾರಂಭವನ್ನು ತೀರಾ ಆಡಂಬರದಂತೆ ಏನೂ ತೋರಿಸಿಕೊಂಡಿಲ್ಲ. ವಿವಾಹದ ಬಳಿಕವೂ ಹಿಂದೆ ಹೇಗೆ ಇದ್ದರೋ ಹಾಗೇ ಇದ್ದಾರೆ. ಅದರಲ್ಲೂ ಕಿಯರಾ ಅಡ್ವಾಣಿ ಮದುವೆ ಬಳಿಕ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿಲ್ಲ. ಸೀರೆ, ಇಲ್ಲವೇ ಡಿಸೈನಲ್ ಡ್ರೆಸ್‌ಗಳಲ್ಲಿ ಕಂಡಿಲ್ಲ. ಕೈಗೆ ಮೆಹೆಂದಿ, ಮೈ ತುಂಬಾ ಒಡವೆಗಳನ್ನು ಧರಿಸಿಲ್ಲ. ಇದೇ ನೆಟ್ಟಿಗರಿಗೆ ಕೊಂಚ ಇರಿಸು ಮುರಿಸು ಎನಿಸಿದೆ. ಈ ಜೋಡಿ ಮೇಲೆ ನೆಟ್ಟಿಗರ ಬೇಸರ ವ್ಯಕ್ತಪಡಿಸುತ್ತಿರುವುದಕ್ಕೂ ಇದೇ ಕಾರಣ. ಅಸಲಿಗೆ ನೆಟ್ಟಿಗರು ಏನು ಟೀಕೆ ಮಾಡುತ್ತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

Netizens disappointed on Kiara Advani And Sidharth Malhotra With no sindoor,no mangalsutra

ಕೈ ಬರೆಳಿಗೆ ರಿಂಗ್‌ ಕೂಡ ಹಾಕಿಲ್ಲ

ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಹನಿಮೂನ್ ಡೆಸ್ಟಿನೇಷನ್‌ನಲ್ಲೂ ಏನೂ ಸ್ಪೆಷಲ್ ಇರಲಿಲ್ಲ. ಆಗಾಗ ಹೋಗಿ ಬರುವ ಮಾಲ್ಡೀವ್ಸ್‌ಗೆ ಹೋಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಈ ಜೋಡಿ ಈಗ ಹನಿಮೂನ್‌ನಿಂದ ಹಿಂತಿರುಗಿದೆ. ಈ ವೇಳೆ ಮುಂಬೈ ಏರ್‌ಪೋರ್ಟ್‌ಗಳಲ್ಲಿ ಪಾಪರಾಜಿಗಳಿಗೆ ಕಣ್ಣಿಗೆ ಬಿದ್ದಿದ್ದಾರೆ. ಕಿಯಾರಾ ಅಡ್ವಾಣಿ ಸಿಂಪಲ್ ಸ್ಲೀವ್ ಲೆಸ್ ಟಾಪ್ ಹಾಗೂ ವೈಟ್ ಪ್ಯಾಂಟ್ ಧರಿಸಿ ಜೊತೆ ಗೋಲ್ಡನ್ ಸ್ಲಿಂಗ್ ಬ್ಯಾಗ್ ಅನ್ನು ಧರಿಸಿದ್ದರು. ಇತ್ತ ಸಿದ್ದಾರ್ಥ್ ಮಲ್ಹೋತ್ರಾ ಕೂಡ ಪರ್ಪಲ್ ಕಲರ್ ಶರ್ಟ್ ಹಾಗೂ ವೈಟ್ ಪ್ಯಾಂಟ್‌ನಲ್ಲಿ ಸಿಂಪಲ್ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಸೆರೆಯಾದ ವಿಡಿಯೋದಲ್ಲಿ ಕಿಯಾರಾ ಅಡ್ವಾಣಿ ನವ ವಧುವಿನಂತೆ ಕಾಣುತ್ತಿಲ್ಲವೆಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.

ಕಿಯಾರಾ ಅಡ್ವಾಣಿಯನ್ನು ನೋಡುತ್ತಿದ್ದಂತೆ ನೆಟ್ಟಿಗರ ಕಣ್ಣುಗಳು ಅರಳಿವೆ. ಸೋಶಿಯಲ್‌ ಮೀಡಿಯಾದಲ್ಲಿ ಕಿಯಾರಾ ಅಡ್ವಾಣಿಯನ್ನು ನೋಡಿ ಬ್ಯಾಕ್‌ ಟು ಬ್ಯಾಕ್ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೈಯಲ್ಲಿ ಎಂಗೇಜ್‌ಮೆಂಟ್ ರಿಂಗ್ ಕೂಡ ಇಲ್ವಲ್ಲ ಅಂತ ಕಿಡಿಕಾರಿದ್ದಾರೆ. " ಏನಿಲ್ಲಾ ಅಂದರೂ ಒಂದು ತಿಂಗಳಾದರೂ, ಎಲ್ಲವನೂ ಧರಿಸುವ ಮೂಲಕ ಎಂಜಾಯ್ ಮಾಡಬಹುದಾಗಿತ್ತು." ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ಇಂಥವರಲ್ಲಿ ಕೇವಲ ಒಂದು ದಿನ ಹಣೆಯಲ್ಲಿ ಕುಂಕುಮ ಹಾಗೂ ಮಾಂಗಲ್ಯವಿರುತ್ತೆ. ಮಧ್ಯಮ ವರ್ಗದವರೇ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾರೆ" ಎಂದಿದ್ದಾರೆ. ಮತ್ತೊಬ್ಬರು " ಬಿಳಿ ಬಣ್ಣದ ಬಟ್ಟೆ ಧರಿಸಿ, ಜ್ಯೂವೆಲರಿನೇ ಹಾಕಿಕೊಂಡಿಲ್ಲ. ಮದುವೆ ಬಳಿಕ ಭಾರತದ ಸಂಸ್ಕೃತಿನೇ ಕಾಣಿಸುತ್ತಿಲ್ಲ. ಕ್ರಿಶ್ಚಿಯನ್ಸ್ ಕೂಡ ಜೀವನ ಪರ್ಯಂತ ವೆಡ್ಡಿಂಗ್ ರಿಂಗ್ ಅನ್ನು ಧರಿಸುತ್ತಾರೆ. ಆದರೆ, ಭಾರತೀಯ ಪಾಶ್ಚಿಮಾತ್ಯ ಡ್ರೆಸ್‌ಗಳನ್ನು ಧರಿಸುವುದು ಆರಾಮ ಎಂದುಕೊಳ್ಳುತ್ತಾರೆ. ಆದರೆ, ಅವರು ತಮ್ಮ ಸಂಸ್ಕೃತಿಯನ್ನು ಕಟ್ಟುನಿಟ್ಟಾಗಿ ಫಾಲೋ ಮಾಡುತ್ತಾರೆ." ಎಂದು ಮತ್ತೊಬ್ಬರು ಟೀಕಿಸಿದ್ದಾರೆ.

Netizens disappointed on Kiara Advani And Sidharth Malhotra With no sindoor,no mangalsutra

ಅದೇ ಇನ್ನೊಂದು ಕಡೆ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಜೋಡಿಗೆ ಶುಭಾಶಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಸೆಲೆಬ್ರೆಟಿಯಾಗಿದ್ದೂ, ಸಿಂಪಲ್ ಆಗಿರುವುದಕ್ಕೆ ಈ ಜೋಡಿಯನ್ನು ಮೆಚ್ಚಿಕೊಂಡವರೂ ಇದ್ದಾರೆ. ಒಟ್ಟಾರೆ, ಹನಿಮೂನ್‌ನಿಂದ ಹಿಂತಿರುಗುತ್ತಿದ್ದಂತೆ ನವ ಜೋಡಿಗೆ ನೆಟ್ಟಿಗರ ಕಮೆಂಟ್‌ಗಳು ನಿದ್ದೆ ಕಡಿಸಿರುವುದಂತೂ ನಿಜ.

More from Filmibeat

English summary
Netizens disappointed on Kiara Advani And Sidharth Malhotra With no sindoor,no mangalsutra, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X