ಬೆಳ್ಳಿ ತೆರೆಯಲ್ಲಿ ರಾಣಿಯಂತೆ ಮೆರೆಯುವ ಕನಸು ಕಂಡಿದ್ದಳು.. ಆದರೆ ಬಿ ಗ್ರೇಡ್‌ ನಾಯಕಿ ಆದಳು..!

ಒಂದು ಸಿನಿಮಾ ಕೆಲವೊಮ್ಮೆ ಬದುಕನ್ನೂ ಬದಲಿಸುತ್ತೆ. ಇನ್ನೂ ಕೆಲವೊಮ್ಮೆ ಜೀವನವನ್ನೂ ಹಾಳು ಮಾಡುತ್ತೆ. ಎಲ್ಲರೂ ಇಲ್ಲಿ ಸಮಯದ ಆಟಕ್ಕೆ ಕೈಗೊಂಬೆ ಮಾತ್ರ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಒಂದು ಚಿತ್ರದಿಂದ ಮೇಲೇದ್ದ ತೃಪ್ತಿ ದಿಮ್ರಿ ಇದೀಗ ಅದೇ ಚಿತ್ರದಲ್ಲಿ ನಿರ್ವಹಿಸಿದ್ದ ಪಾತ್ರದಿಂದ ಪಾತಾಳಕ್ಕೆ ಕುಸಿಯುವ ಎಲ್ಲ ಲಕ್ಷಣ ಕಂಡು ಬರುತ್ತಿದೆ.

ಹೌದು, ರಣ್ಭೀರ್ ಕಪೂರ್ ಅಭಿನಯದ ''ಅನಿಮಲ್'' ಮೂಲಕ ಅಖಂಡ ಭಾರತದಲ್ಲಿ ಜಗತ್ ಪ್ರಸಿದ್ದರಾದವರು ತೃಪ್ತಿ ದಿಮ್ರಿ. ಕ್ರೌರ್ಯ, ಹಿಂಸೆ ಮತ್ತು ರಕ್ತದ ಕಲೆಗಳಿಂದ ಕೂಡಿದ್ದ ಈ ಚಿತ್ರದಲ್ಲಿ ಪಡ್ಡೆಗಳ ಮನಸಿಗೆ ತೃಪ್ತಿಯಾಗುವಷ್ಟು ಈ ನಾಯಕಿ ಬಟ್ಟೆಯನ್ನೂ ಬಿಚ್ಚಿದ್ದರು. ಹಸಿ-ಬಿಸಿ ದೃಶ್ಯಗಳಲ್ಲಿ ಅಳುಕಿಲ್ಲದೇ ನಟಿಸಿದ್ದರು. ಪುರುಷಾಹಂಕಾರ ಮತ್ತು ಹೆಣ್ಣಿನ ಅವಹೇಳನದಿಂದ ಈ ಚಿತ್ರ ತುಂಬಿ ತುಳುಕಿದ್ದರೂ ಪ್ರೇಕ್ಷಕರು ಈ ಚಿತ್ರವನ್ನು ಗೆಲ್ಲಿಸಿದರು. ತೃಪ್ತಿಗೆ ತಮ್ಮ ಹೃದಯದಲ್ಲಿ ಜಾಗವನ್ನೂ ಕೊಟ್ಟರು.

Netizens mercilessly troll Triptii Dimri labeling the Bad Newz actress as a soft porn girl

ಆದರೆ, ಈ ವಿಶೇಷವಾದ ಜಾಗ ಕಾಪಾಡಿಕೊಳ್ಳುವುದೇ ಸದ್ಯಕ್ಕೆ ತೃಪ್ತಿಯ ಮುಂದೆ ಇರುವ ಬಹುದೊಡ್ಡ ಸವಾಲು. ಈ ಸವಾಲನ್ನು ತೃಪ್ತಿ ಹೇಗೆ ಜಯಿಸುತ್ತಾರೆ ಅನ್ನುವುದು ಮುಂದೆ ಗೊತ್ತಾಗಲಿದೆಯಾದರೂ, ತೃಪ್ತಿ ದಿಮ್ರಿಯನ್ನೂ ಬಾಲಿವುಡ್‌ ಬಿಚ್ಚಮ್ಮನ ಪಾತ್ರಕ್ಕೆ ಬ್ರ್ಯಾಂಡ್ ಮಾಡಿರುವುದು ದುರದೃಷ್ಟ.

ಹೌದು, ನಿಮಗೆ ಗೊತ್ತಿರಲಿ.. ವರ್ಷಾನುವರ್ಷ ಸಿಗದ ಯಶಸ್ಸನ್ನೂ ಕೇವಲ ಒಂದು ಚಿತ್ರದಿಂದ ಪಡೆದ ತೃಪ್ತಿ ಕೈಯಲ್ಲಿ ಸದ್ಯಕ್ಕೆ ಅನೇಕ ಸಿನಿಮಾಗಳಿವೆ. ಆ ಪೈಕಿ ತೃಪ್ತಿ ಅಭಿನಯದ ''ಬ್ಯಾಡ್ ನ್ಯೂಸ್'' ಬಿಡುಗಡೆಯ ಬಾಗಿಲಿನಲ್ಲಿದೆ. ಚಿತ್ರದ ಮತ್ತೊಂದು ಹಾಡು ಕೂಡ ನಿನ್ನೆಯಷ್ಟೇ ಬಿಡುಗಡೆಯೂ ಆಗಿದೆ. ಅನೇಕರ ಕಣ್ಣರಳಿಸುತ್ತಿದೆ. ಇನ್ನೂ ಕೆಲವರ ಹೃದಯದ ಬಡಿತವನ್ನೂ ಹೆಚ್ಚಿಸುತ್ತಿದೆ. ಮತ್ತೂ ಕೆಲವರ ಮೈ ಬಿಸಿಯನ್ನೇರಿಸುತ್ತಿದೆ. ಆದರೆ, ಇದೆಲ್ಲದರ ನಡುವೆ ಹೊಸದೊಂದು ಚರ್ಚೆಯನ್ನೂ ಕೂಡ ಈ ಹಾಡು ಹುಟ್ಟು ಹಾಕಿದೆ.

ಹೌದು, ಶೃಂಗಾರದಿಂದ ತುಂಬಿರುವ ಈ ಹಾಡನ್ನು ಕಣ್ತುಂಬಿಕೊಂಡ ಕೆಲವರು ತೃಪ್ತಿಯನ್ನೂ ಹೀನಾಮಾನವಾಗಿ ತೆಗಳುತ್ತಿದ್ದಾರೆ. ಬಾಲಿವುಡ್‌ ನವರ ಕೀಳು ಅಭಿರುಚಿಗೆ ಕಿಡಿಯನ್ನೂ ಕಾರುತ್ತಿದ್ದಾರೆ. ಅಂತೂ-ಇಂತೂ ತೃಪ್ತಿಯನ್ನೂ ಕೂಡ ತಮ್ಮ ಖೆಡ್ಡಾಗೆ ಕೆಡುವುವಲ್ಲಿ ಬಾಲಿವುಡ್‌ ಯಶಸ್ವಿಯಾಯಿತು ಎನ್ನುತ್ತಿದ್ದಾರೆ. ಉಜ್ವಲ ಭವಿಷ್ಯವನ್ನು ಹೊಂದಿದ್ದ ನಾಯಕಿಯನ್ನು ಬಿ-ಗ್ರೇಡ್ ನಟಿಯನ್ನಾಗಿಸಿದ್ದಕ್ಕೆ ಕೆಲವರು ಚಿತ್ರದ ನಿರ್ಮಾಪಕ ಕರಣ್ ಜೋಹರ್‌ಗೆ ಮತ್ತು ಅನಿಮಲ್ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೆ ಅಭಿನಂದನೆಯನ್ನೂ ತಿಳಿಸುತ್ತಿದ್ದಾರೆ. ಮಲ್ಲಿಕಾ ಶೆರಾವತ್, ರಾಖಿ ಸಾವಂತ್, ತನುಶ್ರೀ ದತ್ತಾ ಸಾಲಿಗೆ ಸೇರಿಕೊಂಡ ತೃಪ್ತಿ ದಿಮ್ರಿ ಸದ್ಯದಲ್ಲಿಯೇ ಅವರಂತೆಯೇ ಬಾಲಿವುಡ್‌ನಿಂದ ಕಣ್ಮರೆಯಾಗುವುದು ಖಚಿತ ಎಂಬ ಭವಿಷ್ಯವನ್ನೂ ಕೆಲವರು ಹೇಳುತ್ತಿದ್ದಾರೆ.

ಇನ್ನೂ ಕೆಲವರು ಇದೆಲ್ಲವೂ ತೃಪ್ತಿಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದು ಕೂಡ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ಧಾರೆ. ತೃಪ್ತಿ ದಿಮ್ರಿಯ ಬೆಳವಣಿಗೆ ಸಹಿಸದ ಸ್ಟಾರ್‌ ಕಿಡ್ಸ್ ಸಾಮಾಜಿಕ ಜಾಲತಾಣದ ಸಹಾಯವನ್ನು ಪಡೆದು, ಕೆಲವರಿಗೆ ಹಣ ನೀಡಿ ತೃಪ್ತಿ ಮೇಲೆ ಸೈಬರ್ ದಾಳಿಯನ್ನೂ ನಡೆಸುತ್ತಿದ್ಧಾರೆ ಎನ್ನುತ್ತಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ತೃಪ್ತಿ ದಿಮ್ರಿಯನ್ನೂ ಬಾಲಿವುಡ್ ಬಿಚ್ಚಮ್ಮರ ಸಂಘಕ್ಕೆ ರಾಯಭಾರಿಯನ್ನಾಗಿ ಮಾಡಿದಂತೆ ಇದೆ. ಈಗಷ್ಟೇ ಬೆಳೆಯುತ್ತಿರುವ ನಾಯಕಿ, ಇನ್ನಾದರೂ ಎಚ್ಚೆತ್ತುಕೊಳ್ಳಲಿ.. ಕೇವಲ ಮೈಮಾಟವನ್ನು ಪ್ರದರ್ಶನ ಮಾಡದೇ ಅಭಿನಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರವನ್ನೂ ಆಯ್ಕೆ ಮಾಡಿಕೊಳ್ಳಲಿ.. ಇಲ್ದೇ ಇದ್ದರೆ, ತನ್ನ ಕಾಲ ಮೇಲೆ ತೃಪ್ತಿ ತಾನೇ ಖುದ್ದು ಚಪ್ಪಡಿ ಕಲ್ಲು ಎಳೆದುಕೊಂಡಂತೆ ಆಗಲಿದೆ.

More from Filmibeat

English summary
After the release of the song 'Jaanam' from Bad Newz, many trolls accused Sandeep Reddy Vanga's Animal of 'ruining' Triptii's image."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X