For Quick Alerts
  ALLOW NOTIFICATIONS  
  For Daily Alerts

  ಆಗಸ್ಟ್ 15ರಂದು ಟರ್ಕಿ ಮೊದಲ ಮಹಿಳೆ ಭೇಟಿಯಾದ ಆಮೀರ್ ಖಾನ್ ವಿರುದ್ಧ ನೆಟ್ಟಿಗರ ಆಕ್ರೋಶ

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತನೆ ಕರೆಸಿಕೊಳ್ಳುವ ನಟ ಆಮೀರ್ ಖಾನ್ ವಿರುದ್ಧ ನಟ್ಟಿಗರು ಮುಗಿಬಿದಿದ್ದಾರೆ. ಇತ್ತೀಚಿಗೆ ಅಂದರೆ ಸ್ವಾತಂತ್ರ್ಯ ದಿನಾಚರಣೆಯ ದಿನ ಆಮೀರ್ ಖಾನ್ ಟರ್ಕಿ ಮೊದಲ ಮಹಿಳೆ ಎಮೈನ್ ಎರ್ಡೋಗನ್ ಭೇಟಿಯಾಗಿದ್ದಾರೆ. ಈ ವಿಚಾರವೀಗ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

  'ಮಳೆ' ಚಿತ್ರದಲ್ಲಿನ Sadhu Kokila , Prem , Amulya behind the scenes

  ಆಮೀರ್ ಖಾನ್ ಸದ್ಯ ಟರ್ಕಿಯಲ್ಲಿ ಬೀಡು ಬಿಟ್ಟಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದ ಚಿತ್ರೀಕರಣಕ್ಕಾಗಿ ಆಮೀರ್ ಖಾನ್ ಟರ್ಕಿಗೆ ತೆರಳಿದ್ದಾರೆ. ಟರ್ಕಿಯ ಶೂಟಿಂಗ್ ಜೊತೆಗೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನೂ ಸವಿಯುತ್ತಿದ್ದಾರೆ. ಈ ನಡುವೆ ಟರ್ಕಿ ಮೊದಲ ಮಹಿಳೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಂದೆ ಓದಿ..

  ಬಹುಕೋಟಿ ಮೊತ್ತದ ದೊಡ್ಡ ಒಪ್ಪಂದಕ್ಕೆ ಸಹಿ ಮಾಡಲಿದ್ದಾರೆ ನಟ ಅಮೀರ್ ಖಾನ್

  ಆಮೀರ್, ಟರ್ಕಿ ಮೊದಲ ಮಹಿಳೆ ಭೇಟಿಯಾಗಿದ್ದೇಕೆ?

  ಆಮೀರ್, ಟರ್ಕಿ ಮೊದಲ ಮಹಿಳೆ ಭೇಟಿಯಾಗಿದ್ದೇಕೆ?

  ಮೂಲಗಳ ಪ್ರಕಾರ ಆಮೀರ್ ಖಾನ್ ಮತ್ತು ಪತ್ನಿ ಕಿರಣ್ ರಾವ್ ಅವರ ಪಾನಿ ಫೌಂಡೇಶನ್ ಬಗ್ಗೆ ಮಾತುಕತೆ ನಡೆಸಲು ಟರ್ಕಿ ಮೊದಲ ಮಹಿಳೆ ಎಮೈನ್ ಎರ್ಡೋಗನ್ ಅವರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಭೇಟಿ ನೆಟ್ಟಿಗರಿಗೆ ಸರಿಕಾಣಿಸುತ್ತಿಲ್ಲ.

  ಆಮೀರ್ ಖಾನ್ ಬಗ್ಗೆ ಎಮೈನ್ ಎರ್ಡೋಗನ್ ಹೇಳಿದ್ದೇನು?

  ಆಮೀರ್ ಖಾನ್ ಬಗ್ಗೆ ಎಮೈನ್ ಎರ್ಡೋಗನ್ ಹೇಳಿದ್ದೇನು?

  ಆಮೀರ್ ಖಾನ್ ಭೇಟಿಯಾದ ವಿಚಾರವನ್ನು ಟರ್ಕಿ ಮೊದಲ ಮಹಿಳೆ ಎಮೈನ್ ಎರ್ಡೋಗನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. "ವಿಶ್ವ ಪ್ರಸಿದ್ಧ ಭಾರತೀಯ ನಟ, ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಆಮೀರ್ ಖಾನ್ ಅವರನ್ನು ಭೇಟಿಯಾಗಿದ್ದು ನನಗೆ ತುಂಬಾ ಸಂತೋಷವಾಯಿತು. ಆಮೀರ್ ಖಾನ್ ತಮ್ಮ ಚಿತ್ರ ಲಾಲಾ ಸಿಂಗ್ ಚಡ್ಡಾ ಚಿತ್ರದ ಚಿತ್ರೀಕರಣವನ್ನು ಟರ್ಕಿಯ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಸಂತೋಷವಾಯಿತು" ಎಂದು ಬರೆದು ಕೊಂಡಿದ್ದಾರೆ.

  ನೆಟ್ಟಿಗರ ಆಕ್ರೋಶ

  ನೆಟ್ಟಿಗರ ಆಕ್ರೋಶ

  ಭೇಟಿಯ ನಂತರ ನೆಟ್ಟಿಗರು ಆಮೀರ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. 'ಟರ್ಕಿ ಅಧ್ಯಕ್ಷ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ್ದರು', 'ಭಾರತದಲ್ಲಿ ಹಿಂದೂಗಳು, ಮುಸ್ಲಿಂರನ್ನು ಕೊಲ್ಲುತ್ತಾರೆ' ಎಂದು ಹೇಳಿದ್ದಾರೆ. ಆದರೆ ಈಗ ಆಮೀರ್ ಖಾನ್ ಅವರನ್ನು ಭೇಟಿಯಾಗಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 'ಟರ್ಕಿಯ ನಿಲುವು ಸಂಪೂರ್ಣವಾಗಿ ಭಾರತದ ವಿರೋಧವಾಗಿದೆ. ಇಂತಹ ಸಮಯದಲ್ಲಿ ಭಾರತದ ಖ್ಯಾತ ನಟರೊಬ್ಬರು ಭೇಟಿಯಾಗಿದ್ದು ಸರಿಯಲ್ಲ' ಎಂದು ಕಿಡಿಕಾರುತ್ತಿದ್ದಾರೆ.

  ಅಮಿರ್ ಖಾನ್ ಜೊತೆ ನಟಿಸಿದ್ದ ನಟ ಇಂದು ಬೀದಿಯಲ್ಲಿ ತರಕಾರಿ ಮಾರುತ್ತಿದ್ದಾನೆ

  ಕೊರೊನಾ ಬಳಿಕ ಚಿತ್ರೀಕರಣದಲ್ಲಿ ಆಮೀರ್

  ಕೊರೊನಾ ಬಳಿಕ ಚಿತ್ರೀಕರಣದಲ್ಲಿ ಆಮೀರ್

  ಆಮೀರ್ ಖಾನ್ ಕೊರೊನಾ ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಆಮೀರ್ ಖಾನ್ ಲುಕ್ ಈಗಾಗಲೆ ರಿಲೀಸ್ ಆಗಿದೆ. ಆಮೀರ್ ಖಾನ್ ಗೆ ನಾಯಕಿಯಾಗಿ ಕರೀನಾ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Netizens outraged against Actor Aamir Khan after meets Turkey's first lady Emine Erdogan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X