twitter
    For Quick Alerts
    ALLOW NOTIFICATIONS  
    For Daily Alerts

    ಜಾತಿ ವಿಷಯ ಪ್ರಸ್ತಾಪಿಸಿ ಭಾರಿ ಟೀಕೆಗೆ ಒಳಗಾದ ನಟಿ ಕಂಗನಾ ರಣಾವತ್

    |

    ನಟಿ ಕಂಗನಾ ರಣಾವತ್ ಕಳೆದೆರಡು ತಿಂಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಳಿಕ ನೆಪೋಟಿಸಂ ವಿರುದ್ಧ ಸಿಡಿದೆದ್ದಿರುವ ಕಂಗನಾ, ಬಾಲಿವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಸುಶಾಂತ್ ಸಾವಿನ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದ ಕಂಗನಾ ಇದೀಗ ಜಾತಿ ಮಿಸಲಾತಿ ವಿರೋಧಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    Recommended Video

    Brahma ಚಿತ್ರದಲ್ಲಿನ ರೋಮಾಂಚಕ ಫೈಟ್ ಸೀನ್ ತಯಾರಾಗಿದ್ದು ಹೀಗೆ | Action Scene Making | Filmibeat Kannada

    ನಟ್ಟಿಗರು 'ಬಾಯ್ ಕಟ್ ಕಂಗನಾ' ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ. ಅಮೆರಿಕದ ಪತ್ರಕರ್ತೆ ಮತ್ತು ಲೇಖಕಿ ಇಸಾಬಲ್ ವಿಲ್ಕರ್ಸನ್ ಬರೆದ 'Caste: Origins Of Our Discontent' ಪುಸ್ತಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಪುಸ್ತಕಕ್ಕೆ ಪ್ರತಿಕ್ರಿಯೆ ನೀಡಿ ನೆಟ್ಟಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಮುಂದೆ ಓದಿ..

    ಆಧುನಿಕ ಭಾರತೀಯರು ಜಾತಿ ವ್ಯವಸ್ಥೆ ತಿರಸ್ಕರಿಸಿದ್ದಾರೆ

    ಆಧುನಿಕ ಭಾರತೀಯರು ಜಾತಿ ವ್ಯವಸ್ಥೆ ತಿರಸ್ಕರಿಸಿದ್ದಾರೆ

    ಪುಸ್ತಕದ ಬಗ್ಗೆ ನಟಿ ಕಂಗನಾ ರಣಾವತ್ ನೀಡಿದ ಪ್ರತಿಕ್ರಿಯೆ ಹೀಗಿದೆ. "ಆಧುನಿಕ ಭಾರತೀಯರು ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿದ್ದಾರೆ. ಸಣ್ಣ ಪಟ್ಟಣಗಳಲ್ಲಿಯೂ ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಾರೆ. ಮೀಸಲಾತಿ ವಿಷಯದಲ್ಲಿ ನಮ್ಮ ಸಂವಿಧಾನ ಮಾತ್ರ ಇನ್ನೂ ಹಿಡಿದಿಟ್ಟುಕೊಂಡಿದೆ. ಇದನ್ನು ನಿರ್ಮೂಲನೆ ಮಾಡೋಣ" ಎಂದು ಟ್ವೀಟ್ ಮಾಡಿದ್ದಾರೆ.

    ಅರ್ಹತೆ ಇಲ್ಲದವರು ಅವಕಾಶ ಪಡೆಯುತ್ತಾರೆ.

    ಅರ್ಹತೆ ಇಲ್ಲದವರು ಅವಕಾಶ ಪಡೆಯುತ್ತಾರೆ.

    ಕಂಗನಾ ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. "ವೈದ್ಯರು, ಇಂಜಿನಿಯರ್ಸ್, ಪೈಲಟ್ಸ್ ಮೀಸಲಾತಿಯಿಂದ ಹೆಚ್ಚು ಬಳಲುತ್ತಿದ್ದಾರೆ. ಅರ್ಹತೆ ಇಲ್ಲದವರು ಅವಕಾಶ ಪಡೆಯುತ್ತಾರೆ. ಇದರಿಂದ ಪ್ರತಿಭಾವಂತರು ಅಮೆರಿಕಕ್ಕೆ ಓಡಿ ಹೋಗುತ್ತಾರೆ." ಎಂದು ಬರೆದುಕೊಂಡಿದ್ದಾರೆ.

    ಸುಶಾಂತ್ ಸಿಂಗ್-ಇರ್ಫಾನ್ ಖಾನ್ ಚಿತ್ರ ಬೇಡ ಎಂದು ಕೈಬಿಟ್ಟಿದ್ದರು ಕಂಗನಾ!ಸುಶಾಂತ್ ಸಿಂಗ್-ಇರ್ಫಾನ್ ಖಾನ್ ಚಿತ್ರ ಬೇಡ ಎಂದು ಕೈಬಿಟ್ಟಿದ್ದರು ಕಂಗನಾ!

    ನೆಟ್ಟಿಗರ ಆಕ್ರೋಶ

    ನೆಟ್ಟಿಗರ ಆಕ್ರೋಶ

    ಕಂಗನಾ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಕಂಗನಾ ವಿರುದ್ಧ ಟ್ರೋಲ್ ಮಾಡುತ್ತಿದ್ದಾರೆ. 'ನೆಪೋಟಿಸಂ ವಿರುದ್ಧ ಮಾತನಾಡುತ್ತಿದ್ದವರು ಈಗ ದಿಢೀರನೆ ಜಾತಿ ಮೀಸಲಾತಿಯನ್ನು ಹೇಗೆ ವಿರೋಧಿಸುತ್ತೀರಿ. ನೀವು ಇಬ್ಬಾಗದ ನೀತಿ ಹೊಂದಿದ್ದೀರಿ' ಎಂದು ಪ್ರಶ್ನಿಸುತ್ತಿದ್ದಾರೆ.

    ಎರಡರ ವಿರುದ್ಧವೂ ಹೋರಾಡಿ

    ಎರಡರ ವಿರುದ್ಧವೂ ಹೋರಾಡಿ

    'ನೆಪೋಟಿಸಂ ಹೇಗೆ ಹೊರಗಿನಿಂದ ಬಂದವರನ್ನು ದೂರ ತಳ್ಳುತ್ತದೆಯೋ ಹಾಗೆ ಜಾತಿ ಪದ್ಧತಿ ಕೂಡ ಮಾಡುತ್ತದೆ. ಹಾಗಾಗಿ ಎರಡರ ವಿರುದ್ಧವೂ ನೀವು ಹೋರಾಡಿ. ಮೀಸಲಾತಿ ಯಾವತ್ತು ಅರ್ಹತೆಯನ್ನು ಕೊಲ್ಲುವುದಿಲ್ಲ. ರಾಷ್ಟ್ರ ನಿರ್ಮಾಣದಲ್ಲಿ ತುಳಿತಕ್ಕೊಳಗಾದ ಸಮುದಾಯಕ್ಕೆ ಅವಕಾಶ ನೀಡುತ್ತದೆ. ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

    ಕಂಗನಾ ವಿರುದ್ಧ ಅಸಮಾಧಾನ ಹೊರಹಾಕಿದ ಸುಶಾಂತ್ ಕುಟುಂಬದ ವಕೀಲ ವಿಕಾಸ್ ಸಿಂಗ್ಕಂಗನಾ ವಿರುದ್ಧ ಅಸಮಾಧಾನ ಹೊರಹಾಕಿದ ಸುಶಾಂತ್ ಕುಟುಂಬದ ವಕೀಲ ವಿಕಾಸ್ ಸಿಂಗ್

    ಸುಶಾಂತ್ ಸಾವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ

    ಸುಶಾಂತ್ ಸಾವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ

    ಇದೀಗ ಮೀಸಲಾತಿಯನ್ನು ವಿರೋಧಿಸಿದ್ದಕ್ಕಾಗಿ ಕಂಗನಾ ವಿರುದ್ಧ ನೆಟ್ಟಿಗರು ಮುಗಿ ಬಿದ್ದಿದ್ದಾರೆ. ಜೊತೆಗೆ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅನೇಕರು ಕಂಗನಾ ವಿರುದ್ಧ ಆರೋಪ ಮಾಡುತ್ತಿದ್ದಾರೆ.

    English summary
    Netizens outraged against Kangana Ranaut over talk about caste system. Netizens trend Boycott Kangana on Twitter.
    Tuesday, August 25, 2020, 9:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X