For Quick Alerts
  ALLOW NOTIFICATIONS  
  For Daily Alerts

  ರಣ್ವೀರ್ ಸಿಂಗ್ 'ತಖ್ತ್' ಸಿನಿಮಾ ವಿರುದ್ಧ ಭುಗಿಲೆದ್ದ ಆಕ್ರೋಶ

  |

  ಬಾಲಿವುಡ್ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ಕನಸಿನ ತಖ್ತ್ ಸಿನಿಮಾಗೆ ಸಂಕಷ್ಟ ಎದುರಾಗಿದೆ. ಬಾಲಿವುಡ್ ನ ದೊಡ್ಡ ದೊಡ್ಡ ಕಲಾವಿದರು ಅಭಿನಯಿಸುತ್ತಿರುವ ತಖ್ತ್ ಸಿನಿಮಾ ಬ್ಯಾನ್ ಮಾಡುವಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  BoycottTakht ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಅಂದ್ಹಾಗೆ ನೆಟ್ಟಿಗರು ರೊಚ್ಚಿಗೇಳಲು ಕಾರಣ ತಖ್ತ್ ಸಿನಿಮಾದ ಬರಹಗಾರ ಹುಸೇನ್ ಹೈಡ್ರಿ ಟ್ವೀಟ್. ಹೌದು, ಹುಸೇನ್ ಮಾಡಿರುವ ವಿವಾದಾತ್ಮಕ ಟ್ವೀಟ್ ಈಗ ಇಡೀ ಸಿನಿಮಾ ತಂಡಕ್ಕೆ ಸಂಕಷ್ಟ ತಂದೊಡ್ಡಿದೆ.

  ಫೋಟೋಗ್ರಫರ್ ಜೊತೆ ದಿಶಾ ಪಟಾನಿ ಬಾಡಿಗಾರ್ಡ್ ಫೈಟ್ಫೋಟೋಗ್ರಫರ್ ಜೊತೆ ದಿಶಾ ಪಟಾನಿ ಬಾಡಿಗಾರ್ಡ್ ಫೈಟ್

  ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಹುಸೇನ್ ಹೈಡ್ರಿ "ಈ ಎರಡು ಪದಗಳನ್ನು ಬಳಸಿ. ಈ ಎರಡು ಪದಗಳು ತುಂಬ ಮುಖ್ಯ" ಎಂದು ಹೇಳಿ, "ಹಿಂದೂ ಭಯೋತ್ಪಾದಕರು" ಎನ್ನುವ ಪದವನ್ನು ಬಳಿಸಿದ್ದಾರೆ. ಈ ಪದವನ್ನು 9 ಬಾರಿ ಬರೆದಿದ್ದಾರೆ.

  ಹುಸೇನ್ ಮಾಡಿರುವ ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಖ್ತ್ ಸಿನಿಮಾ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸಿನಿಮಾದಿಂದ ಹುಸೇನ್ ಅವರನ್ನು ಕೈಬಿಡುವಂತೆ ಒತ್ತಾಯಿಸುತ್ತಿದ್ದಾರೆ. ಇಂಥವರ ಜೊತೆ ಸಿನಿಮಾ ಮಾಡಬೇಕಿ ಎಂದು ಕರಣ್ ಗೆ ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡದವರಾಗಲಿ ಅಥವಾ ನಿರ್ದೇಶಕ ಕರಣ್ ಜೋಹರ್ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.

  Netizens Outraged Against Karan Johars Takht

  ಅಂದ್ಹಾಗೆ ಹುಸೇನ್ ಅವರ ಟ್ವಿಟ್ಟರ್ ಅಕೌಂಟ್ ಬ್ಲಾಕ್ ಆಗಿದೆ. ಹುಸೇನ್ ಮಾಡಿರುವ ಈ ಟ್ವೀಟ್ ನ ಸ್ಕ್ರೀನ್ ಶಾಟ್ ಮಾತ್ರ ಎಲ್ಲಾ ಕಡೆ ಹರಿದಾಡುತ್ತಿದೆ. ನೆಟ್ಟಿಗರು ಈ ಸ್ಕ್ರೀನ್ ಶಾಕ್ ಅನ್ನೆ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಇಂಥವರ ಸಿನಿಮಾ ನೋಡಬೇಕಾ? ಎಂದು ಸಿನಿಮಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  ಈ ಸಿನಿಮಾದಲ್ಲಿ ನಟ ರಣ್ವೀರ್ ಸಿಂಗ್ ಮತ್ತು ನಟಿ ಅಲಿಯಾ ಭಟ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಸ್ಟಾರ್ ನಟರ ಅಭಿಮಾನಿಗಳು ಸಹ ಸಿನಿಮಾ ಬ್ಯಾನ್ ಮಾಡುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  ತಖ್ತ್ ಬಾಲಿವುಡ್ ನಲ್ಲಿ ತಾಯಾರಾಗುತ್ತಿರುವ ಹಿಸ್ಟಾರಿಕಲ್ ಸಿನಿಮಾ. ಮೊಘಲರ ಕಾಲದಲ್ಲಿ ಸಿಂಹಾಸಕ್ಕಾಗಿ ನಡೆದ ಒಂದು ಘಟನೆಯನ್ನು ಇಟ್ಟುಕೊಂಡು ಸಿನಿಮಾ ರೂಪ ಕೊಡುತ್ತಿದ್ದಾರೆ ಕರಣ್ ಜೋಹರ್. ರಣ್ವೀರ್ ಸಿಂಗ್, ವಿಕ್ಕಿ ಕೌಸಲ್, ಅಲಿಯಾ ಭಟ್, ಕರೀನಾ ಕಪೂರ್, ಭೂಮಿ ಪಡ್ನೇಕರ್, ಜಾಹ್ನವಿ ಕಪೂರ್ ಮತ್ತು ಅನಿಲ್ ಕಪೂರ್ ಸೇರಿದಂತೆ ದೊಡ್ಡ ಕಲಾವಿದರ ಬಳಗವೆ ಸಿನಮಾದಲ್ಲಿದೆ.

  English summary
  Netizens outraged against Takht film they demand Husen Hydary Removal from the Crew.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X