ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಶಿಲ್ಪಾ ಶೆಟ್ಟಿ ದರ್ಪ, ವಿಡಿಯೋ ವೈರಲ್- ವ್ಯಾಪಕ ಆಕ್ರೋಶ
ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ. ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ. ಆದರೂ ಕೂಡ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸುತ್ತಾರೆ.
ಕೇವಲ ಜನಸಾಮಾನ್ಯರು ಮಾತ್ರವಲ್ಲ ಸರ್ಕಾರಿ ಹುದ್ದೆಯಲ್ಲಿ ಇರುವವರು ಕೂಡ ಕೆಲ ಒಮ್ಮೆ ತಮ್ಮ ಇಷ್ಟದ ತಾರೆಯರು ಕಣ್ಣೆದುರು ಬಂದಾಗ ಕರಗಿ ಹೋಗುತ್ತಾರೆ. ತಮ್ಮ ಕರ್ತವ್ಯ.. ಜವಾಬ್ಧಾರಿ.. ಇಷ್ಟೇ ಯಾಕೆ ತಮ್ಮ ಹುದ್ದೆಯನ್ನು ಕೂಡ ಮರೆತು ಫೋಟೊ ತೆಗೆಸಿಕೊಳ್ಳಲು ಮುಂದಾಗುತ್ತಾರೆ.

ಆದರೆ.. ಈ ಅಭಿಮಾನ ಕೆಲ ಒಮ್ಮೆ ಹಲವರಿಗೆ ಅರ್ಥವಾಗುವುದಿಲ್ಲ. ಬದಲಿಗೆ ತಮ್ಮನ್ನು ಬೆಳೆಸಿದ್ದು.. ತಾವು ಬೆಳೆದಿದ್ದು.. ಈ ಅಭಿಮಾನದಿಂದಲೇ ಎನ್ನುವುದನ್ನು ಕೂಡ ಮರೆಯುವ ಕೆಲ ತಾರೆಯರು ಸಾಮಾನ್ಯ ಅಭಿಮಾನಿಗಳಿಗೂ ಬೆಲೆ ಕೊಡುವುದಿಲ್ಲ. ತಮ್ಮ ಅಭಿಮಾನಿ ಸರ್ಕಾರಿ ಹುದ್ದೆಯಲ್ಲಿದ್ದರೂ ಕೂಡ ಕ್ಯಾರೇ ಎನ್ನುವುದಿಲ್ಲ. ಇದಕ್ಕೆ ಶಿಲ್ಪಾ ಶೆಟ್ಟಿ ಸದ್ಯದ ಉದಾಹರಣೆ.
ಹೌದು ಎಲ್ಲರಿಗೆ ಗೊತ್ತಿರುವಂತೆ ದೇಶದಲ್ಲಿ ಸದ್ಯ ಗಣೇಶನ ಹಬ್ಬದ ಸಂಭ್ರಮ ಮನೆ ಮಾಡಿದೆ. ಇನ್ನೂ ನಮ್ಮ ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಮುಂಬೈ ಮತ್ತು ಪುಣೆ ನಗರಗಳಲ್ಲಿ ನಡೆಯುವ ವಿನಾಯಕ ಚತುರ್ಥಿ ವಿಶ್ವವಿಖ್ಯಾತಿಯನ್ನು ಪಡೆದುಕೊಂಡಿದೆ.
ಅದರಲ್ಲಿಯೂ ಲಾಲ್ ಬಾಗ್ ಚಾ ರಾಜಾ ದರ್ಶನಕ್ಕೆ ಭಾರತದ ನಾನಾ ಭಾಗಗಳಿಂದ ಜನರು ಭೇಟಿ ನೀಡುತ್ತಿರುತ್ತಾರೆ. ಸರದಿ ಸಾಲಿನಲ್ಲಿ ನಿಂತು ಗಣಪತಿ ಬಪ್ಪನ ದರ್ಶನಕ್ಕೆ ಕಾಯುತ್ತಾರೆ.
ಇಂಥಾ ಲಾಲ್ ಬಾಗ್ ಚಾ ರಾಜಾ ದರ್ಶನವನ್ನು ಪ್ರತಿ ವರ್ಷ ಹಲವಾರು ಹಿಂದಿ ತಾರೆಯರು ತಪ್ಪದೇ ಮಾಡುತ್ತಾರೆ. ಆ ಪೈಕಿ ಒಬ್ಬರಾಗಿರುವ ಶಿಲ್ಪಾ ಶೆಟ್ಟಿ ಈ ವರ್ಷ ಕೂಡ ಲಾಲ್ ಬಾಗ್ ಚಾ ರಾಜಾ ದರ್ಶನ ಪಡೆಯಲು ಹೋಗಿದ್ದರು.

ಇದೇ ಸಮಯದಲ್ಲಿ ಅಲ್ಲಿಯೇ ಕರ್ತವ್ಯದಲ್ಲಿದ್ದ ಮಹಿಳಾ ಪೇದೆಯೊಬ್ಬರು ಅಭಿಮಾನದಿಂದ ಓಡಿ ಬಂದಿದ್ದಾರೆ. ಮೇಡಂ ಸೆಲ್ಫಿ..ಸೆಲ್ಫಿ.. ಎಂದು ಫೋಟೊ ಕ್ಲಿಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ.. ಶಿಲ್ಪಾ ಶೆಟ್ಟಿ ಭಾರತದ ಬಹುದೊಡ್ಡ ಸ್ಟಾರ್. ಹೀಗಾಗಿ ಮಹಿಳಾ ಪೇದೆಯ ಈ ರಿಕ್ವೆಸ್ಟ್‌ದಿಂದ ಕಿರಿಕಿರಿಗೊಳಗಾದ ಶಿಲ್ಪಾ ಶೆಟ್ಟಿ
ಸೆಲ್ಫಿ ತೆಗೆಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಹೀಗೆಲ್ಲಾ ಮಾಡಬೇಡಿ ಎಂದು ಆ ಮಹಿಳಾ ಪೇದೆಯ ವಿರುದ್ಧ ಕೆಂಡವನ್ನೂ ಕಾರಿದ್ದಾರೆ.
ಇನ್ನೂ ಕೇವಲ ಶಿಲ್ಪಾ ಶೆಟ್ಟಿ ಮಾತ್ರವಲ್ಲ ಅವರ ಅಕ್ಕ ಪಕ್ಕ ಇದ್ದ ಬಾಡಿಗಾರ್ಡ್‌ಗಳು ಕೂಡ ಮಹಿಳಾ ಕಾನ್‌ಸ್ಟೇಬಲ್ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವಾರು ಜನ ಶಿಲ್ಪಾ ಶೆಟ್ಟಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲವೂ ದುರಹಂಕಾರದ ಪರಮಾವಧಿ ಎಂದು ಹೇಳುತ್ತಿದ್ದಾರೆ. ಹೆಣ್ಣಾಗಿ ಅವರು ಒಬ್ಬ ಹೆಣ್ಣನ್ನು ಸಲುಗೆಯಿಂದ ಭುಜ ಮುಟ್ಟಿ ಸೆಲ್ಫಿ ಕೇಳಿರಬಹುದು ಅದಕ್ಕೆ ಈ ರೀತಿ ವರ್ತಿಸುವ ಅಗತ್ಯ ಇರಲಿಲ್ಲ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸೆಲ್ಫಿ ತೆಗೆಸಿಕೊಳ್ಳುವ ಮನಸು ಇಲ್ಲದಿದ್ದರೆ ಅದನ್ನು ನೇರವಾಗಿ ಹೇಳಬಹುದಿತ್ತು ಅದು ಮಾಡದೇ ಕರ್ತವ್ಯದಲ್ಲಿರುವ ಒಬ್ಬ ಮಹಿಳಾ ಪೇದೆಯನ್ನು ತಳ್ಳುವ ಅಧಿಕಾರವನ್ನು ಶಿಲ್ಪಾ ಶೆಟ್ಟಿಗೆ ಕೊಟ್ಟಿದ್ಯಾರು ಎಂದೆಲ್ಲಾ ತಮ್ಮ ಅಸಮಾಧಾನ.. ಅಸಹನೆಯನ್ನು ಹಲವಾರು ಜನ ಹೊರ ಹಾಕುತ್ತಿದ್ದಾರೆ. ವೈರಲ್ ಆದ ಈ ವಿಡಿಯೋ ಕುರಿತು ಶಿಲ್ಪಾ ಶೆಟ್ಟಿ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.


Click it and Unblock the Notifications











