twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಟ್ರೋಲ್ ಆಗುತ್ತಿರುವ ರಿಯಾ

    By ಫಿಲ್ಮ್ ಡೆಸ್ಕ್
    |

    ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಬಳಿಕ ಸೈಲೆಂಟ್ ಆಗಿದ್ದ ಪ್ರೇಯಸಿ ರಿಯಾ ಚಕ್ರವರ್ತಿ ಈಗ ಮೌನ ಮುರಿದಿದ್ದಾರೆ. ತಿಂಗಳು ಬಳಿಕ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಬೇಡಿಕೊಂಡಿದ್ದಾರೆ.

    Recommended Video

    ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

    ಸುಶಾಂತ್ ಸಿಂಗ್ ಸಾವಿನ ಬಳಿಕ ನೆಟ್ಟಿಗರು ರಿಯಾ ಚಕ್ರವರ್ತಿ ವಿರುದ್ದ ತಿರುಗಿ ಬಿದ್ದಿದ್ದಾರೆ. ರಿಯಾ ಕಾಮೆಂಟ್ ಗಳ ಸುರಿಮಳೆಯೆ ಹರಿದುಬರುತ್ತಿದೆ. ಇತ್ತೀಚಿಗೆ ಸುಶಾಂತ್ ಬಗ್ಗೆ ಭಾವನಾತ್ಮಕ ಪೋಸ್ಟ್ ಹಾಕಿದ್ದಾಗಲು ಆಕೆಯ ಮೇಲೆ ಕಾಮೆಂಟ್ ಗಳ ದಾಳಿಯೆ ನಡೆದಿತ್ತು. ಅಲ್ಲದೆ ಸುಶಾಂತ್ ಸಾವಿನ ಬಳಿಕ ರಿಯಾ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಗಳು ಬರುತ್ತಿರುವ ಬಗ್ಗೆ ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿದ್ದಾರೆ.

    ಸುಶಾಂತ್ ಪ್ರೇಯಸಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ: ಕಾಪಾಡಿ ಎಂದು ಸೈಬರ್ ಪೊಲೀಸರನ್ನು ಕೇಳಿಕೊಂಡ ರಿಯಾಸುಶಾಂತ್ ಪ್ರೇಯಸಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ: ಕಾಪಾಡಿ ಎಂದು ಸೈಬರ್ ಪೊಲೀಸರನ್ನು ಕೇಳಿಕೊಂಡ ರಿಯಾ

    ಇದರ ಬೆನ್ನಲ್ಲೆ ರಿಯಾ, ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತಾ ಶಾ ಬಳಿ ಕೇಳಿಕೊಂಡಿದ್ದಾರೆ. ಈಗಾಗಲೆ ಅಭಿಮಾನಿಗಳು, ಅನುಯಾಯಿಗಳು ಮತ್ತು ಹಲವು ರಾಜಕಾರಣಿಗಳು ಸುಶಾಂತ್ ಸಿಂಗ್ ಕೇಸ್ ಅನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ. ಈಗ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಕೂಡ ಕೇಳಿಕೊಂಡಿದ್ದಾರೆ. ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದಂತೆ ರಿಯಾ ಮತ್ತೆ ಟ್ರೋಲ್ ಗೆ ಗುರಿಯಾಗಿದ್ದಾರೆ. ಮುಂದೆ ಓದಿ...

    ಮತ್ತೆ ಟ್ರೋಲ್ ಗೆ ಆಹಾರವಾದ ರಿಯಾ

    ಮತ್ತೆ ಟ್ರೋಲ್ ಗೆ ಆಹಾರವಾದ ರಿಯಾ

    ರಿಯಾ, ಸುಶಾಂತ್ ಸಿಂಗ್ ಪ್ರೇಯಸಿ ಎಂದು ಒಪ್ಪಿಕೊಂಡು, ಸಿಬಿಐ ತನಿಖೆಗೆ ಒತ್ತಾಯಿಸಿ ಟ್ವೀಟ್ ಮಾಡುತ್ತಿದ್ದಂತೆ ನೆಟ್ಟಿಗರು ಆಕೆಯ ಮೇಲೆ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಿಯಾ ಮತ್ತೆ ಟ್ರೋಲ್ ಗೆ ಗುರಿಯಾಗಿದ್ದಾರೆ. ಕೆಲವರು ರಿಯಾ ಧೈರ್ಯವಾಗಿ ಸಿಬಿಐಗೆ ಒಪ್ಪಿಸಿ ಎಂದು ಹೇಳಿರುವ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದ್ರೆ, ಅನೇಕರು ರಿಯಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈಗ ಪ್ರೇಯಸಿ ಎಂದು ಹೇಗೆ ಹೇಳುತ್ತಿದ್ದೀರಿ?

    ಈಗ ಪ್ರೇಯಸಿ ಎಂದು ಹೇಗೆ ಹೇಳುತ್ತಿದ್ದೀರಿ?

    "ಸುಶಾಂತ್ ಸಿಂಗ್ ಗಾಗಿ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಜೊತೆಗೆ ಗರ್ಲ್ ಫ್ರೆಂಡ್ ಎಂದು ಹೇಳುತ್ತಿದ್ದಾರೆ. ಆದರೆ ಈ ಹಿಂದೆ ಎಂದಿಗೂ ರಿಯಾ ಸುಶಾಂತ್ ಪ್ರೇಯಸಿ ಎಂದು ಒಪ್ಪಿಕೊಂಡಿಲ್ಲ. ಸಾವಿಗೆ ಮುಂಚೆಯೆ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಅಲ್ಲದೆ ಎಲ್ಲಾ ಪೋಸ್ಟ್ ಗಳನ್ನ ಡಿಲೀಟ್ ಮಾಡಿದ್ದಾರೆ. ಬದುಕಿದಾಗ ಪ್ರೀತಿಸುವುದಿಲ್ಲ ಮತ್ತು ಕಾಳಜಿ ವಹಿಸುವುದಿಲ್ಲ. ಈಗ ಇದ್ದಕ್ಕಿದ್ದಂತೆ ಪ್ರೇಯಸಿ ಎಂದು ಹೇಳುತ್ತಿದ್ದಾರೆ" ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ.

    ಎಲ್ಲಾ ಸಾಕ್ಷಿಗಳನ್ನು ನಾಶಗೊಳಿಸಿದ್ರಾ?

    ಎಲ್ಲಾ ಸಾಕ್ಷಿಗಳನ್ನು ನಾಶಗೊಳಿಸಿದ್ರಾ?

    "ರಿಯಾ ಚಕ್ರವರ್ತಿ ತಿಂಗಳು ಬಳಿಕ ಎಚ್ಚರಗೊಂಡು ಸಿಬಿಐ ತನಿಖೆಗೆ ಕೇಳುತ್ತಿದ್ದಾರೆ. ಒಂದು ತಿಂಗಳಿಂದ ಸಾಮಾಜಿಕ ಜಾಲತಾಣಲ್ಲಿ ಈ ಬಗ್ಗೆ ಅಭಿಯಾನಮಾಡಿದಾಗ ಮಾತನಾಡಲಿಲ್ಲ. ಯಾಕೆ ಸೈಲೆಂಟ್ ಆಗಿದ್ದರು. ಈಗ ಎಲ್ಲಾ ಸಾಕ್ಷಿಗಳು ನಾಶವಾಗಿದೆಯೇ? ಹಾಗಾಗಿ ಕೇಳುತ್ತಿದ್ದೀರಾ?" ಎಂದು ಪ್ರಶ್ನಿಸುತ್ತಿದ್ದಾರೆ.

    1 ತಿಂಗಳಿಂದ ಯಾಕೆ ಸೈಲೆಂಟ್ ಆಗಿದ್ರಿ?

    1 ತಿಂಗಳಿಂದ ಯಾಕೆ ಸೈಲೆಂಟ್ ಆಗಿದ್ರಿ?

    ಇನ್ನೊಬ್ಬರು ಕಾಮೆಂಟ್ ನಲ್ಲಿ "ಸುಶಾಂತ್ ಸಿಂಗ್ ನಿಧನಹೊಂದಿ ಒಂದು ತಿಂಗಳಾಗಿದೆ. ಈಗ ಸಿಬಿಐ ವಿಚಾರಣೆ ಕೇಳುತ್ತಿದ್ದೀರಿ. ಸುಳಿವು, ಪುರಾವೆಗಳು ನಾಶಪಡಿಸಲು ಇಷ್ಟು ದಿನ ಕಾಯುತ್ತಿದ್ದೀರಾ? ಹಾಗಾಗಿ ಈಗ ಕೇಳುತ್ತಿದ್ದೀರಾ?" ಎಂದು ಪ್ರಶ್ನಿಸುತ್ತಿದ್ದಾರೆ. ರಿಯಾ ಏನೆ ಪೋಸ್ಟ್ ಮಾಡಿದ್ರು ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸುತ್ತಾರಾ ಎಂದು ಕಾದುನೋಡಬೇಕು.

    English summary
    Rhea Chakraborty gets Troll after request CBI Enquiry into Amit Shah.
    Friday, July 17, 2020, 10:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X