ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಮಲೈಕಾ ಅರೋರಾ ಖಾಸಗಿ ಕ್ಷಣ ; ಕೆಂಡಾಮಂಡಲವಾದ ಜನ..!

ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಇಂದು ನಿನ್ನೆಯಲ್ಲ. ಅನೇಕ ವರ್ಷದ ಹಿಂದೆಯೇ .. ಬಣ್ಣದ ಪ್ರಪಂಚಲ್ಲಿರುವ ಬಣ್ಣ .. ಬಣ್ಣದ .. ಜನ ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಆದರೆ ಅದರ ತೀವೃತೆ ಈಗ ಅವರ ಅನುಭವಕ್ಕೆ ಬರುತ್ತಿದೆ. ಇದಕ್ಕೆ ಮಲೈಕಾ ಅರೋರಾ ಸದ್ಯದ ಉದಾಹರಣೆ.

ಹೌದು, ವಯಸ್ಸು ಐವತ್ತಾದರೂ ಇವತ್ತು ಕೂಡ ಹದಿ ಹರೆಯದ ಯುವತಿಯರನ್ನ ನಾಚಿಸುವಂತೆ ತನ್ನ ದೇಹ ಸಿರಿಯನ್ನ ಕಾಪಾಡಿಕೊಂಡಿರುವ ಮಲೈಕಾ, ಮೊನ್ನೆ.. ತಮ್ಮ ಸ್ನೇಹಿತರ ಜೊತೆ
ರೆಸ್ಟೋರೆಂಟ್‌ವೊಂದಕ್ಕೆ ತೆರಳಿದ್ದರು. ಆದರೆ.. ಮಲೈಕಾಗೆ ಕ್ಯಾಮರಾ ಸೇನೆ, ತನ್ನನ್ನು ಹಿಂಬಾಲಿಸುತ್ತಿದೆ ಎಂಬ ಅರಿವು ಇರಲಿಲ್ಲ. ರೆಸ್ಟೋರೆಂಟ್‌ ನ ಕಿಟಕಿಯಾಚೆ ಕ್ಯಾಮರಾ ಕಣ್ಣುಗಳೆಲ್ಲ ತನ್ನನ್ನೇ ನೋಡುತ್ತಿವೆ ಎಂಬ ಸುಳಿವು ಇರಲಿಲ್ಲ.

Netizens SLAM Paps For Secretly Filming Malaika Arora s Video Through The Windows

ಹೀಗಾಗಿಯೇ.. ಕುರ್ಚಿಯಿಂದ ಎದ್ದು, ಅಸ್ತವ್ಯಸ್ತವಾದಂತೆ ಇದ್ದ ತನ್ನ ಬಿಳಿ ಜಂಪ್‌ಸೂಟ್ ನ ಮಲೈಕಾ ಸರಿ ಮಾಡಿಕೊಳ್ಳುತ್ತಿದ್ದರು. ಆದರೆ.. ಕ್ಯಾಮರಾಗೆ ಯಾರ ಅಪ್ಪಣೆ ಬೇಕು..? ಪ್ರೈವೆಸಿಗೆ ಗೌರವ ಕೊಡದೆ ಅಲ್ಲಿದ್ದವರೆಲ್ಲ ತಮ್ಮ ಕ್ಯಾಮರಾ ಜೂಮ್ ಮಾಡಿದರು. ಮಲೈಕಾ ಅವರ ಅವತಾರ ಸೆರೆಹಿಡಿದರು. ಆ ನಂತರ, ಮಲೈಕಾಗೆ ತಾನು ಕ್ಯಾಮರಾ ಕಣ್ಗಾವಲಿನಲ್ಲಿರುವುದು ಮನವರಿಕೆಯಾದಂತೆ ಇದೆ. ಹೀಗಾಗಿಯೇ.. ಕಿಟಕಿಯಾಚೆ ಇರುವ ತನ್ನ ಕ್ಯಾಮರಾ ಸ್ನೇಹಿತರಿಗೆ ಕೈ ಬೀಸಿ, ಮಲೈಕಾ ಅಲ್ಲಿಂದ ಹೊರಟಿದ್ದಾರೆ.

ಇನ್ನೂ ನಿಮಗೆ ಗೊತ್ತು.. ಇದು.. ಲೈಕ್.. ಶೇರ್.. ಸಬ್‌ಸ್ಕ್ರೈಬ್.. ಕಾಲ. ಮಲೈಕಾ ಇನ್ನೂ ರೆಸ್ಟೋರೆಂಟ್‌ ನಿಂದ ಆಚೆ ಬಂದಿದ್ದರಾ ಇಲ್ಲವಾ ಗೊತ್ತ್ ಇಲ್ಲ. ಅಷ್ಟರಲ್ಲಿಯೇ ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಬಂದು ಬಿದ್ದಿದೆ. ನೋಡ.. ನೋಡುತ್ತಾ ಸದ್ಯಕ್ಕೆ ವಿಡಿಯೋ ವೈರಲ್ ಕೂಡ ಆಗಿದೆ.

Netizens SLAM Paps For Secretly Filming Malaika Arora s Video Through The Windows

ಸಾಮಾಜಿಕ ಜಾಲತಾಣವನ್ನ ಮಲೈಕಾ ಹೆಸರಿನ ವೈರಲ್ ಜ್ವರ ಆವರಿಸಿಕೊಂಡ ಬೆನ್ನಲ್ಲಿ, ಅನೇಕರು ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದಾರೆ. ಅವರ ಖಾಸಗಿ ಬದುಕಿನಲ್ಲಿ ನಿಮಗೆ ಯಾಕೆ ಇಷ್ಟು ಆಸಕ್ತಿ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ. ಬದುಕಿ ಬದುಕಲು ಬಿಡಿ ಎಂದು ಬುದ್ದಿಮಾತನ್ನೂ ಪಾಪರಾಜಿಗಳಿಗೆ ಹೇಳುತ್ತಿದ್ದಾರೆ. ಇನ್ನೂ ನಾಚಿಕೆ..ಮಾನ..ಮರ್ಯಾದೆ ಪಾಠವನ್ನೂ ಮಾಡುತ್ತಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಮಲೈಕಾ ಅರೋರಾ ಅವರ ಈ ರೆಸ್ಟೋರೆಂಟ್ ವಿಡಿಯೋ, ಸಿಕ್ಕಾಪಟ್ಟೆ ಚರ್ಚೆಗೀಡಾಗುತ್ತಿದೆ. ಅನೇಕರ ಆಕ್ರೋಶಕ್ಕೂ ಈ ವಿಡಿಯೋ ಕಾರಣವಾಗಿದೆ. ಮಲೈಕಾ ಅರೋರಾ ಈ ವೈರಲ್ ವಿಡಿಯೋ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾಪರಾಜಿಗಳನ್ನ ಕರೆದು ಸರತಿ ಸಾಲಿನಲ್ಲಿ ನಿಲ್ಲಿಸಿ ಮಾತಿನ ತಪರಾಕಿಯನ್ನೂ ಹಾಕಿಲ್ಲ. ಮುಂದೆ ಹಾಕ್ತಾರಾ ಗೊತ್ತಿಲ್ಲ.

More from Filmibeat

English summary
Paparazzi captured Malaika Arora's private moments through the window during her recent visit to restaurant. After seeing the viral video, Netizens SLAM Paps
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X