ಖಾಸಗಿ ಫೋಟೋಗಳನ್ನು ಹಂಚಿಕೊಂಡ ಸುಶ್ಮಿತಾ ಸೇನ್ ಸಹೋದರ: ನೆಟ್ಟಿಗರಿಂದ ಸಖತ್ ಟ್ರೋಲ್
ಕೊರೊನಾ ಹಾವಳಿಯ ಪರಿಣಾಮ ಸಂಪೂರ್ಣ ಭಾರತ ಲಾಕ್ ಡೌನ್ ಆಗಿದೆ. ಏಪ್ರಿಲ್ 14ರ ವರೆಗೂ ಲಾಕ್ ಡೌನ್ ಮುಂದುವರೆದಿದ್ದು, ಜನ ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ಸಾಕಷ್ಟು ಮಂದಿಗೆ ಕುಟುಂಬದ ಜೊತೆ ಸಮಯ ಕಳೆಯಲು ಉತ್ತಮ ಅವಕಾಶ ಸಿಕ್ಕಿದೆ. ಅದರಲ್ಲೂ ಶೂಟಿಂಗ್ ಅಂತ ಸದಾ ಬ್ಯುಸಿ ಇರುತ್ತಿದ್ದ ಸಿನಿ ಸೆಲೆಬ್ರಿಟಿಗಳು ಕ್ವಾರಂಟೈನ್ ನಲ್ಲಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡುತ್ತಿರುವ ಒಂದಿಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ನಡುವೆ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಸಹೋದರ ರಾಜೀವ್ ಪತ್ನಿ ಜೊತೆ ಇರುವ ಒಂದಿಷ್ಟು ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಕ್ವಾರಂಟೈನ್ ನಲ್ಲಿರುವ ರಾಜೀವ್ ದಂಪತಿಯ ಖಾಸಗಿ ಫೋಟೋ ನೋಡಿದ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಮುಂದೆ ಓದಿ...

"ಕ್ವಾರಂಟೈನ್ ನಲ್ಲಿ ಸಂತೋಷವಾಗಿದ್ದೇವೆ.."
ಸುಶ್ಮಿತಾ ಸೇನ್ ಸಹೋದರ ರಾಜೀವ್ ಪತ್ನಿ ಚಾರು ಅಸೋಪ ಜೊತೆ ರೋಮ್ಯಾಂಕ್ ಮೂಡ್ ನಲ್ಲಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ತೀರಾ ಖಾಸಗಿಯಾಗಿರುವ ಫೋಟೋಗಳನ್ನು ನೋಡಿದ ನೆಟ್ಟಿಗರು ಟ್ರೋಲ್ ಮಾಡಿ ರಾಜೀವ್ ದಂಪತಿಯ ಕಾಳೆಲೆಯುತ್ತಿದ್ದಾರೆ. ಫೋಟೋ ಜೊತೆಗೆ ರಾಜೀವ್ "ನಾವು ಕ್ವಾರಂಟೈನ್ ನಲ್ಲಿ ತುಂಬ ಸಂತೋಷವಾಗಿದ್ದೀವಿ" ಎಂದು ಕ್ಯಾಪ್ಷನ್ ನೀಡಿದ್ದಾರೆ.

ಕಾಮೆಂಟ್ ಹೈಡ್ ಮಾಡಿದ ದಂಪತಿ
ರಾಜೀವ್ ಮತ್ತು ಚಾರು ಇಬ್ಬರ ಖಾಸಗಿ ಫೋಟೋಗಳಿಗೆ ಹರಿದು ಬರುತ್ತಿದ್ದ ಕಾಮೆಂಟ್ ಗಳನ್ನು ನೋಡಿ ತಲೆ ಕೆಡಿಸಿಕೊಂಡ ರಾಜೀವ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಗಳನ್ನು ಹೈಡ್ ಮಾಡಿದ್ದಾರೆ. ಹಾಟ್ ಫೋಟೋಗಳ ನಂತರ ರಾಜೀವ್ ದಾಡಿ ತೆಗೆದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

2019ರಲ್ಲಿ ಮದುವೆ ಆಗಿರುವ ರಾಜೀವ್
ರಾಜೀವ್ ಮತ್ತು ಬಾಬಿ ಚಾರು ಇಬಬ್ರು 2019 ಜೂನ್ ನಲ್ಲಿ ಹಸೆಮಣೆ ಏರಿದ್ದರು. ಇಬ್ಬರ ಮದುವೆ ಬೆಂಗಾಲಿ ಮತ್ತು ರಾಜಸ್ಥಾನಿ ಶೈಲಿಯಲ್ಲಿ ಕಾನೂನುಬದ್ದವಾಗಿ ನಡೆದಿದೆ. ಸಹೋದರನ ಮದುವೆಯ ಫೋಟೋವನ್ನು ನಟಿ ಸುಶ್ಮಿತಾ ಸೇನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುಶ್ಮಿತಾ ತನ್ನ ಬಾಯ್ ಫ್ರೆಂಡ್ ರೋಹ್ಮಾನ್ ಶಾ ಜೊತೆ ಸಹೋದರನ ಮದುವೆಯಲ್ಲಿ ಮಿಂಚಿದ್ದರು.

ರಾಜೀವ್ ಮತ್ತು ಚಾರು ಅಸೋಪಾ ಬಗ್ಗೆ
ಸುಶ್ಮಿತಾ ಸೋನ್ ಸಹೋದರ ರಾಜೀವ್ ಸೇನ್ ಮಾಡೆಲಿಂಗ್ ನಲ್ಲಿ ಖ್ಯಾತಿಗಳಿಸಿದ್ದಾರೆ. ಇನ್ನು ಪತ್ನಿ ಚಾರು ಅಸೋಪಾ ಖ್ಯಾತ ಕಿರುತೆರೆ ನಟಿ. ಇಬ್ಬರು ಅನೇಕ ಸಮಯದಿಂದ ಡೇಟಿಂಗ್ ನಲ್ಲಿ ಇದ್ದರು. ಇಬ್ಬರ ಪ್ರೀತಿಗೆ ಮನೆಯವರ ಗ್ರೀನ್ ಸಿಕ್ಕಿದ ಬಳಿಕ ಕಳೆದ ವರ್ಷ ವೈವವಾಹಿಕ ಜೀವನಕ್ಕೆ ಕಾಲಿಟಿದ್ದಾರೆ. ಚಾರು ಅಸೋಪಾ ಆಗ್ಲೆ ಜನಮ್ ಮೋಹೆ ಬಿಟಿಯಾ ಹೈ ಕಿಜೊ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದರು.


Click it and Unblock the Notifications











