'ಮೆಗಾ' ಫ್ಯಾಮಿಲಿ ಮನೆಗೆ ಸೊಸೆಯಾಗಲಿರುವ 'ಶಾರುಖ್ ಖಾನ್' ಮುದ್ದಿನ ಮಗಳು 'ಸುಹಾನಾ'..?
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕೂಡ ಕಾಮನ್ನೇ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ.. ಬಾಲಿವುಡ್‌ನಲ್ಲಿ ಇವತ್ತು ಆಳುತ್ತಿರುವ ಬಹುತೇಕರು, ಒಂದ್ಕಾಲಿನ ಸ್ಟಾರ್ ಕಲಾವಿದರ ಮಕ್ಕಳೇ.
ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಮತ್ತು ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಅವರ ಮಗ ಅಗಸ್ತ್ಯ ನಂದ ಕೂಡ ಈ ಸಾಲಿನಲ್ಲಿ ಸೇರಲು ಹವಣಿಸುತ್ತಿದ್ದಾರೆ. ಬಣ್ಣದ ಜಾಡು ಬೆನ್ನತ್ತಿ ಇಬ್ಬರು ಜೊತೆಯಲ್ಲಿ ''ದಿ ಆರ್ಚಿಸ್'' ಎಂಬ ಚಿತ್ರದ ಮೂಲಕ ಕಲರ್‌ಫುಲ್ ಪ್ರಯಾಣ ಶುರು ಮಾಡಿದ್ದಾರೆ.

ಇಂಥಾ ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಅನುಮಾನ, ಬಹಳ ದಿನಗಳಿಂದ ಅನೇಕರಲ್ಲಿದೆ. ನಿಜಾ.. ಇಬ್ಬರು ಈ ವಿಚಾರವನ್ನು ಒಪ್ಪಿಕೊಂಡಿಲ್ಲ. ಆದರೆ .. ಬೆಂಕಿ ಇಲ್ಲದೆ ಹೊಗೆಯಾಡಲ್ಲ.
ಹೀಗಾಗಿಯೇ ಸುಹಾನಾ ಮತ್ತು ಅಗಸ್ತ್ಯ ಚಲನವಲನಗಳನ್ನು ಬಾಲಿವುಡ್‌ನ ಒಂದು ಬಣ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹೀಗಿರುವಾಗ ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಜೊತೆ ಜೊತೆಯಲ್ಲಿ ಲಾಂಗ್ ಡ್ರೈವ್ ತೆರಳಿದ್ದಾರೆ. ಇವರಿಬ್ಬರ ಈ ಪ್ರಯಾಣಕ್ಕೆ ಅಗಸ್ತ್ಯಾ ನಂದಾ ಅವರ ಸೋದರ ಮಾವ ಜೊತೆಯಾಗುವುದಲ್ಲದೇ ತಾವೇ ಖುದ್ದು ಕಾರನ್ನು ಡ್ರೈವ್ ಮಾಡಿಕೊಂಡು ಹೋಗಿದ್ದು ಈ ಕ್ಷಣದ ವಿಶೇಷ.

ಹೌದು, ಶಾರುಖ್ ಖಾನ್ ಮಗಳು ಸುಹಾನಾ ಮತ್ತು ತಮ್ಮ ಸಹೋದರಿ ಶ್ವೇತಾ ಅವರ ಮಗ ಅಗಸ್ತ್ಯಾ ಅವರನ್ನು ಅಭಿಷೇಕ್ ಬಚ್ಚನ್ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಈ ಪ್ರವಾಸದಲ್ಲಿ ಅಗಸ್ತ್ಯಾ ಸಹೋದರಿ ನವ್ಯಾ ಕೂಡ ಭಾಗಿಯಾಗಿದ್ದಾರೆ. ಸದ್ಯಕ್ಕೆ ಇವರೆಲ್ಲ ಕಾರನ್ನೇರಿ ಮುಂಬೈನಿಂದ ತೆರಳುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಮೂಲಕ ಸುಹಾನಾ ಮತ್ತು ಅಗಸ್ತ್ಯಾ ವಿಚಾರದಲ್ಲಿ ಅನೇಕರಲ್ಲಿ ಇರುವ ಅನುಮಾನ ಇನ್ನೂ ಹೆಚ್ಚಾಗಿದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಅಭಿಷೇಕ್ ಬಚ್ಚನ್ ಸಹೋದರಿ ಶ್ವೇತಾ ಬಚ್ಚನ್ ನಂದಾ ಮನೆಗೆ ಕಿಂಗ್ ಖಾನ್ ಅವರ ಮುದ್ದಿನ ಮಗಳು ಸುಹಾನಾ ಖಾನ್ ಸೊಸೆಯಾಗುವುದು ಖಚಿತ ಎನ್ನುವ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸುತ್ತಿದ್ಧಾರೆ. ಸುಹಾನಾ ಮತ್ತು ಅಗಸ್ತ್ಯಾ ಪ್ರೇಮದ ಅಮಲನ್ನೇರಿಸಿಕೊಂಡಿದ್ದಾರೆ ಅನ್ನುವದಕ್ಕೂ ಇದೇ ಸಾಕ್ಷಿ ಎನ್ನುತ್ತಿದ್ದಾರೆ. ಸುಹಾನಾ ಮತ್ತು ಅಗಸ್ತ್ಯಾ ಲವ್ ಸ್ಟೋರಿ ಗೊತ್ತಿದ್ದೇ ಅಭಿಷೇಕ್ ಬಚ್ಚನ್ ತಮ್ಮ ಜೊತೆ ಇಬ್ಬರನ್ನೂ ಕರೆದುಕೊಂಡು ಹೋಗಿದ್ದಾರೆ ಎಂಬ ಮಾತುಗಳನ್ನೂ ಕೂಡ ಕೆಲವರು ಹೇಳುತ್ತಿದ್ದಾರೆ.

ಅಂದ್ಹಾಗೇ ಸುಹಾನಾ ಖಾನ್ ಸದ್ಯ ''ಕಿಂಗ್'' ಎಂಬ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಶಾರುಖ್ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ತಂದೆ ಮತ್ತು ಮಗಳು ಮೊದಲ ಬಾರಿ ತೆರೆಯನ್ನೂ ಹಂಚಿಕೊಳ್ಳಲಿದ್ದಾರೆ. ಇನ್ನೂ ವಿಶೇಷ ಅಂದರೆ ಅಭಿಷೇಕ್ ಬಚ್ಚನ್ ಈ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಇನ್ನೂ ಕೆಲವರು ಯಾರಿಗೆ ಗೊತ್ತು, ಕ್ಯಾಶುಯಲ್ ಡೇ ಔಟ್‌ಗೆ ಕೂಡ ಎಲ್ಲರೂ ಹೋಗಿದ್ದರು ಹೋಗಿರಬಹುದು ಎನ್ನುತ್ತಿದ್ದಾರೆ.
ಸದ್ಯಕ್ಕೆ ಅಭಿಷೇಕ್ ಬಚ್ಚನ್.. ಅಗಸ್ತ್ಯಾ ನಂದಾ.. ನವ್ಯಾ ನವೇಲಿ ಮತ್ತು ಸುಹಾನಾ ಖಾನ್ ಪ್ರವಾಸಕ್ಕೆ ಹೊರಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಿಜಕ್ಕೂ ಅಗಸ್ತ್ಯಾ ನಂದಾ ಮತ್ತು ಸುಹಾನಾ ಖಾನ್ ಪ್ರೇಮಪಾಶದಲ್ಲಿ ಸಿಲುಕಿದ್ದಾರಾ..? ಸುಹಾನಾ ಅಲಿ ಖಾನ್ ಅಭಿಷೇಕ್ ಬಚ್ಚನ್ ಅಕ್ಕ ಶ್ವೇತಾ ಮನೆಗೆ ಸೊಸೆಯಾಗಿ ಹೋಗ್ತಾರಾ..? ಈ ಮೂಲಕ ಬಾಲಿವುಡ್‌ನ ಮೆಗಾ ಫ್ಯಾಮಿಲಿಯ ಭಾಗವಾಗುತ್ತಾರಾ..? ಉತ್ತರ ಕಾಲವೇ ನೀಡಲಿದೆ.


Click it and Unblock the Notifications











