For Quick Alerts
  ALLOW NOTIFICATIONS  
  For Daily Alerts

  ಬ್ಯಾನ್ ಆದಿಪುರುಷ್.. ಬಾಯ್‌ಕಾಟ್ ಆದಿಪುರುಷ್ ಟ್ರೆಂಡ್: ಪ್ರಭಾಸ್‌ಗೆ ಮತ್ತೊಂದು ಸೋಲಿನ ಭೀತಿ!

  |

  ಬಾಯ್‌ಕಾಟ್ ಈ ಪದ ಕಿವಿ ಮೇಲೆ ಬಿದ್ದರೆ ಬಾಲಿವುಡ್ ಗಡ ಗಡ ನಡುಗುತ್ತದೆ. ಇದೀಗ ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರಕ್ಕೂ ಬಾಯ್‌ಕಾಟ್ ಬಿಸಿ ತಟ್ಟಿದೆ. ಕಳೆದೆಡರು ದಿನಗಳಿಂದ ಸಿನಿಮಾ ಟೀಸರ್ ಹುಟ್ಟಾಕಿರೋ ಚರ್ಚೆ ಗೊತ್ತೇಯಿದೆ. ಒಂದ್ಕಡೆ ಟೀಸರ್ ತುಂಬಾ ಕೆಟ್ಟದಾಗಿದೆ ಎಂದು ಟ್ರೋಲ್ ಆಗುತ್ತಿದ್ದರೆ ಮತ್ತೊಂದು ಕಡೆ ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ದೃಶ್ಯಗಳಿವೆ ಎನ್ನುವ ಆರೋಪವೂ ಕೇಳಿಬರ್ತಿದೆ.

  ರಾಮಾಯಣ ಕಾವ್ಯಕ್ಕೆ ಗೌರವದ ಸ್ಥಾನ ಇದೆ. ಹಿಂದುಗಳ ಪಾಲಿಗೆ ಇದು ಪವಿತ್ರ ಗ್ರಂಥ. ಇಂತಹ ಕಥೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲು ಮುಂದಾದಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಮನರಂಜನೆಯ ಹೆಸರಿನಲ್ಲಿ ಮನಸ್ಸಿಗೆ ಬಂದಂತೆ ತೋರಿಸುವುದು ಸರಿಯಲ್ಲ. ಆದರೆ ಟೀಸರ್ ನೋಡಿದರೆ ಯಾವುದೋ ಕಾರ್ಟೂನ್ ಸಿನಿಮಾ ನೋಡಿದಂತಿದೆ. 500 ಕೋಟಿ ಬಜೆಟ್ ಸಿನಿಮಾ ಎಂದು ಹೇಳಿ ಟಿವಿ ಸೀರಿಯಲ್‌ಗಿಂತಲೂ ಕೆಟ್ಟದಾಗಿ ಮಾಡಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ರಾಮ ಹಾಗೂ ರಾವಣ ಪಾತ್ರಗಳನ್ನು ತೋರಿಸಿರುವ ರೀತಿಯೂ ಆಕ್ರೋಶ ಉಂಟು ಮಾಡಿದೆ. ಈಗಾಗಲೇ ಬಿಜೆಪಿ ಮುಖಂಡರು ಸಿನಿಮಾ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

  'ಆದಿಪುರುಷ್' ಸಿನಿಮಾ ಟೀಸರ್ ಬಗ್ಗೆ ಮಾಳವಿಕಾ ಅವಿನಾಶ್ ಕಿಡಿ'ಆದಿಪುರುಷ್' ಸಿನಿಮಾ ಟೀಸರ್ ಬಗ್ಗೆ ಮಾಳವಿಕಾ ಅವಿನಾಶ್ ಕಿಡಿ

  ಮುಖ್ಯವಾಗಿ ರಾವಣನ ಪಾತ್ರ ಮಾಡಿರುವ ಸೈಫ್ ಅಲಿ ಖಾನ್ ಗೆಟಪ್‌ ಬಗ್ಗೆ ಅಸಮಾಧಾನ ವ್ಯಕ್ತವಾಗ್ತಿದೆ. ಶಿವನ ಭಕ್ತನಾಗಿರುವ ರಾವಣನ ಹಣೆ ಮೇಲೆ ಅಡ್ಡ ನಾಮ ಇಲ್ಲ, ರಾವಣನ ವಾಹನವನ್ನು ವಿಚಿತ್ರವಾಗಿ ಚಿತ್ರಿಸಲಾಗಿದೆ. ಸೈಫ್ ರಾವಣನ ರೀತಿ ಕಾಣದೇ ಅಲ್ಲಾವುದ್ದೀನ್ ಖಿಲ್ಜಿ ರೀತಿ ಕಾಣುತ್ತಿದ್ದಾರೆ, ಪ್ರಭಾಸ್ ರಾಮನ ಲುಕ್‌ ಕೂಡ ಅಷ್ಟಾಗಿ ಕೆಲವರಿಗೆ ಇಷ್ಟವಾಗಿಲ್ಲ. ಈ ಬಗ್ಗೆ ನಟಿ ಮಾಳವಿಕಾ ಅವಿನಾಶ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಡಾ. ರಾಜ್‌ಕುಮಾರ್, ಎನ್‌ಟಿಆರ್‌ರಂತಹ ದಿಗ್ಗಜರು ಮಾಡಿರುವ ರಾವಣನ ಪಾತ್ರಗಳನ್ನು ನೋಡಿ, ಮನಸ್ಸಿಗೆ ಬಂದಂತೆ ಸಿನಿಮಾ ಮಾಡಬೇಡಿ ಎಂದಿದ್ದರು.

  Netizens trend Boycott Adipurush and Ban Adipurush on Twitter check out reactions here

  'ಆದಿಪುರುಷ್' ಸಿನಿಮಾ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನೆಟ್ಟಿಗರು ಬಾಯ್‌ಕಾಟ್ ಟ್ರೆಂಡ್ ಶುರು ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ನೆಗೆಟಿವ್ ಟ್ಯಾಗ್ ದೇಶಾದ್ಯಂತ ಟ್ರೆಂಡ್ ಆಗುತ್ತಿದೆ. ಅಷ್ಟೇ ಅಲ್ಲ 'ಬ್ಯಾನ್ ಆದಿಪುರುಷ್' ಎಂದು ಕೆಲವರು ಟ್ರೆಂಡ್ ಮಾಡ್ತಿದ್ದಾರೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಆಂತಕ ತಂದಿದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಿಗೆ ಬಾಯ್‌ಕಾಟ್ ಟ್ರೆಂಡ್‌ನಿಂದ ಹಿನ್ನಡೆಯಾಗಿತ್ತು. ಮತ್ತೊಂದ್ಕಡೆ ಪ್ರಭಾಸ್ ಸಿನಿಮಾಗಳು ಸಾಲು ಸಾಲಾಗಿ ಸೋಲುತ್ತಿದೆ. ಈ ಚಿತ್ರಕ್ಕೂ ಅದೇ ಭಯ ಶುರುವಾಗಿದೆ.

  "ಓಂ ಬಾ ನನ್ನ ರೂಮ್‌ಗೆ".. 'ಆದಿಪುರುಷ್' ಟೀಸರ್‌ ನೋಡಿ ಪ್ರಭಾಸ್ ಗರಂ: ವಿಡಿಯೋ ವೈರಲ್

  ಅದ್ಯಾಕೋ 'ಆದಿಪುರುಷ್' ಚಿತ್ರದ ಆರಂಭವೇ ಸರಿಯಾಗಿಲ್ಲ. ಅಪಶಕುನಗಳೇ ಎದುರಾಗುತ್ತಿದೆ. ಮತ್ತೊಂದು ಕಡೆ ಈ ಸಿನಿಮಾ ತ್ರಿಡಿಗಾಗಿ ಮಾಡಿರೋದು, ಮೊಬೈಲ್‌ನಲ್ಲಿ ಟೀಸರ್ ನೋಡಿದರೆ ಮಜಾ ಇರೋದಿಲ್ಲ. ಥಿಯೇಟರ್‌ಗಳಲ್ಲಿ ತ್ರಿಡಿ ಕನ್ನಡಕದಲ್ಲಿ ನೋಡಿದರೇ ನಿಜಕ್ಕೂ ಚೆನ್ನಾಗಿರುತ್ತದೆ ಎಂದು ಚಿತ್ರತಂಡ ಪ್ರಚಾರ ಮಾಡಲು ಶುರು ಮಾಡಿದೆ. ಇದಕ್ಕೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತ್ರಿಡಿ ಕನ್ನಡಕ ಹಾಕಿಕೊಂಡು ನೋಡಿದ ಮಾತ್ರಕ್ಕೆ ಇಷ್ಟು ಕೆಟ್ಟದಾಗಿರುವ ಸಿನಿಮಾ ತೆರೆಮೇಲೆ ಅದ್ಭುತವಾಗಿ ಕಾಣುವುದಿಲ್ಲ ಎನ್ನುತ್ತಿದ್ದಾರೆ. ಇದನ್ನೆಲ್ಲಾ ಮೀರಿ ಸಂಕ್ರಾಂತಿ ಹಬ್ಬಕ್ಕೆ 'ಆದಿಪುರುಷ್' ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೋ ಕಾದು ನೋಡಬೇಕು.

  'ಆದಿಪುರುಷ್' ಗ್ರಾಫಿಕ್ಸ್ ಬಗ್ಗೆ ರೊಚ್ಚಿಗೆದ್ದ ಫ್ಯಾನ್ಸ್: ಬಹಿರಂಗ ಪತ್ರ ಬರೆದ ಗ್ರಾಫಿಕ್ಸ್ ಕಂಪನಿ!'ಆದಿಪುರುಷ್' ಗ್ರಾಫಿಕ್ಸ್ ಬಗ್ಗೆ ರೊಚ್ಚಿಗೆದ್ದ ಫ್ಯಾನ್ಸ್: ಬಹಿರಂಗ ಪತ್ರ ಬರೆದ ಗ್ರಾಫಿಕ್ಸ್ ಕಂಪನಿ!

  English summary
  Netizens trend Boycott Adipurush and Ban Adipurush on Twitter check out reactions here. Know More.
  Tuesday, October 4, 2022, 20:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X