For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ನಲ್ಲಿ ದಿಢೀರ್ ಟ್ರೆಂಡ್ ಆದ 'ಬಾಯ್ಕಟ್ ಶಾರುಖ್': ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?

  |

  ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಆಗಾಗ ಟ್ರೆಂಡಿಂಗ್ ನಲ್ಲಿರುತ್ತಾರೆ. ಸದ್ಯ ಮೂರ್ನಾಲ್ಕು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಶಾರುಖ್ ಅವರನ್ನು ಬಾಯ್ಕಟ್ ಮಾಡುವಂತೆ ಒತ್ತಾಯಿಸಿ ಟ್ವಿಟ್ಟರ್ ನಲ್ಲಿ ನೆಟ್ಟಿಗರು ಟ್ರೆಂಡ್ ಮಾಡುತ್ತಿದ್ದಾರೆ. ಬಾಯ್ಕಟ್ ಶಾರುಖ್ ದಿಢೀರ್ ಟ್ರೆಂಡ್ ಆಗಿದ್ದು ನೋಡಿ ಶಾರುಖ್ ಅಭಿಮಾನಿಗಳು ಶಾಕ್ ಆಗಿದ್ದಾರೆ.

  ಅಂದಹಾಗೆ ಶಾರುಖ್ ಅವರನ್ನು ಬಾಯ್ಕಟ್ ಮಾಡಿ ಎಂದು ನೆಟ್ಟಿಗರು ದಿಢೀರ್ ರೊಚ್ಚಿಗೆದ್ದಿದ್ದಾರೆ ಎಂದರೆ ಶಾರುಖ್ ಏನಾದರೂ ಹೇಳಿಕೆ ನೀಡಿದ್ದಾರಾ? ಅಥವಾ ವಿವಾದಾತ್ಮಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರಾ ಎನ್ನುವ ಅನುಮಾನ ಮೂಡುವುದು ಸಹಜ. ಆದರೆ ಶಾರುಖ್ ಸದ್ಯದ ಮಟ್ಟಿಗೆ ವಿವಾದ ಸೃಷ್ಟಿಮಾಡುವಂತೆ ಯಾವುದೇ ಹೇಳಿಕೆ ಮತ್ತು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಸದ್ಯ ಬಾಯ್ಕಟ್ ಶಾರುಖ್ ಎಂದು ಟ್ರೆಂಡ ಆಗುತ್ತಿರುವುದು ಶಾರುಖ್ ಹಳೆಯ ಹೇಳಿಕೆ ಮತ್ತು ನಡವಳಿಕೆಗಳಿಂದ.

  ಹೌದು, ಶಾರುಖ್ ಈ ಹಿಂದೆ ಪಾಕಿಸ್ತಾನದ ಕ್ರಿಕೆಟರ್ ಪರ ಮಾತನಾಡಿದ್ದು ಈಗ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಶಾರುಖ್ ಖಾನ್ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಬ್ಬರು ಒಟ್ಟಿಗೆ ಇರುವ ಹಳೆಯ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಈ ಫೋಟೋ ಶೇರ್ ಮಾಡಿ ಬಾಯ್ಕಟ್ ಶಾರುಖ್ ಎಂದು ಒತ್ತಾಯ ಮಾಡುತ್ತಿದ್ದಾರೆ.

  ಇದರ ಜೊತೆಗೆ ಇನ್ನು ಸಾಕಷ್ಟು ವಿಚಾರಗಳನ್ನು ಮುಂದಿಟ್ಟುಕೊಂಡು ಬಾಯ್ಕಟ್ ಶಾರುಖ್ ಎಂದು ಟ್ವೀಟ್ ಮಾಡಿ ಎಲ್ಲರೂ ರಿ ಟ್ವೀಟ್ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಕರಣ್ ಜೋಹರ್ ಮತ್ತು ಜಾಹ್ನವಿ ಕಪೂರ್ ಗೆ ಬೆಂಬಲ ಸೂಚಿಸಿದ್ದಾರೆ, ಸುಶಾಂತ್ ಸಿಂಗ್ ರಜಪೂತ್ ಗೆ ಬೆಂಬಲ ನೀಡಿಲ್ಲ ಎಂದು ಶಾರುಖ್ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.

  ಇನ್ನು ಕೆಲವರು ಟ್ವೀಟ್ ಮಾಡಿ, ಶಾರುಖ್ "ಶಾರುಖ್ ಖಾನ್ ಹಿಂದೂಸ್ತಾನದ ಅನ್ನ ತಿನ್ನುತ್ತಾರೆ. ಆದರೆ ಪಾಕಿಸ್ತಾನದ ಹಾಡು ಹಾಡುತ್ತಾರೆಂದು" ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾರುಖ್ 5 ವರ್ಷದ ಹಿಂದೆ ನೀಡಿದ್ದ ಹೇಳಿಕೆಗಳು ಈಗ ವೈರಲ್ ಆಗಿದ್ದು, ಶಾರುಖ್ ಹೊಸ ಚಿತ್ರ 'ಪಠಾಣ್' ಸೇರಿದಂತೆ ಶಾರುಖ್ ​ಗೆ ಸಂಬಂಧಪಟ್ಟ ವಿಚಾರಗಳಿಗೆ "ಬಾಯ್ಕಾಟ್ ಶಾರುಖ್" ಎಂದು ಟ್ರೆಂಡ್ ಮಾಡಲಾಗಿದೆ.

  Netizens trend Boycott ShahRukh Khan on twitter

  ಅಭಿಮಾನಿಗಳಿಂದ ವಿ ಲವ್ ಸಾರುಖ್ ಟ್ರೆಂಡ್

  ಇನ್ನು ಬಾಯ್ಕಟ್ ಶಾರುಖ್ ಟ್ರೆಂಡ್ ಆಗುತ್ತಿದ್ದಂತೆ ಅಭಿಮಾನಿಗಳು ವಿ ಲವ್ ಶಾರುಖ್ ಎಂದು ಟ್ರೆಂಡ್ ಮಾಡಿದ್ದಾರೆ. ದೇಶದಾದ್ಯಂತ ಇರುವ ಶಾರುಖ್ ಅಭಿಮಾನಿಗಳು "WeLoveShahRukhKhan" ಎಂದು ಹ್ಯಾಷ್ ಟ್ಯಾಗ್ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ.

  ಅಭಿಮಾನಿಗಳು ಶಾರುಖ್ ಬಗ್ಗೆ ಅವರು ಕೇವಲ ಉತ್ತಮ ನಟ ಮಾತ್ರವಲ್ಲ, ಅದ್ಭುತ ಮನುಷ್ಯ ಎನ್ನುತ್ತಿದ್ದಾರೆ. ಶಾರುಖ್ ತನ್ನ ಚಾರಿಟಿ ಕೆಲಸಕ್ಕಾಗಿ ಅತಿ ಹೆಚ್ಚು ಡಾಕ್ಟರೇಟ್ ಪಡೆದ ಏಕೈಕ ನಟ ಎಂದು ಶಾರುಖ್ ಅವರನ್ನು ಗುಣಗಾನ ಮಾಡುತ್ತಿದ್ದಾರೆ. ಶಾರುಖ್ ಮಾನವೀಯ ಕೆಲಸಕ್ಕಾಗಿ ಕ್ರಿಸ್ಟಲ್ ಪ್ರಶ್ತಿಯನ್ನು ಪಡೆದಿದ್ದಾರೆ. ಇದು ಶಾರುಖ್ ಅವರು ಎಷ್ಟು ಶ್ರೇಷ್ಠ ಎನ್ನುವುದು ತೋರಿಸುತ್ತಿದೆ ಎಂದು ಅಭಿಮಾನಿಗಳು ಟ್ವೀಟ್ ಮಾಡಿ ಶಾರುಖ್ ಅವರನ್ನು ಬೆಂಬಲಿಸುತ್ತಿದ್ದಾರೆ.

  ಹಾಗೆಯೇ ಶಾರುಖ್ ಮತ್ತು ಇಮ್ರಾನ್ ಜೊತೆಗಿರುವ ಫೊಟೊ ವೈರಲ್ ಮಾಡಿದ್ದಕ್ಕೆ, ಶಾರುಖ್ ಅಭಿಮಾನಿಗಳು ಪ್ರತಿಯಾಗಿ, ಕಪಿಲ್ ದೇವ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಅನೇಕ ಗಣ್ಯರು ಇಮ್ರಾನ್ ಜೊತೆಗಿರುವ ಚಿತ್ರಗಳನ್ನು ವೈರಲ್ ಮಾಡುತ್ತಿದ್ದಾರೆ.

  English summary
  netizens outraged against shah rukh khan, Boycott ShahRukh Khan on twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X