twitter
    For Quick Alerts
    ALLOW NOTIFICATIONS  
    For Daily Alerts

    ಇಸ್ರೇಲ್ ರಾಷ್ಟ್ರಗೀತೆಯ ಟ್ಯೂನ್ ಕದ್ದು ಹಾಡು ಮಾಡಿದ್ರಾ ಅನು ಮಲಿಕ್?

    |

    ಟೋಕಿಯೋ ಒಲಂಪಿಕ್‌ನಲ್ಲಿ ಇಸ್ರೇಲ್ ಜಿಮ್ನಾಸ್ಟ್ ಆರ್ಟೆಮ್ (Artem dolgopyat) ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಬಾಲಿವುಡ್ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಅನು ಮಲಿಕ್ ಟ್ರೋಲ್‌ಗೆ ಗುರಿಯಾಗಿದ್ದಾರೆ. ಭಾನುವಾರ ಇಸ್ರೇಲ್ ಜಿಮ್ನಾಸ್ಟ್ ಆರ್ಟೆಮ್ ಚಿನ್ನದ ಪದಕ ಗೆದ್ದ ಬಳಿಕ ರಾಷ್ಟ್ರಗೀತೆ ಪ್ರಸಾರ ಮಾಡಲಾಯಿತು. ಇಸ್ರೇಲ್ ರಾಷ್ಟ್ರಗೀತೆ ಕೇಳಿದ ಭಾರತೀಯರು ಅನು ಮಲಿಕ್ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

    ಬಾಲಿವುಡ್‌ನ ವಿವಾದಾತ್ಮಕ ಸಂಗೀತ ನಿರ್ದೇಶಕ ಅಂತಾನೇ ಗುರುತಿಸಿಕೊಂಡಿರುವ ಅನು ಮಲಿಕ್, ಒಳ್ಳೊಳ್ಳೆ ಹಾಡುಗಳನ್ನು ಕೊಟ್ಟಿದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ. ಆದರೆ, ಅವರ ಹಿಟ್ ಗೀತೆಗಳಿಗೆ ಬೇರೆ ಕಡೆಯಿಂದ ಟ್ಯೂನ್ ಕದ್ದಿರುವ ಆರೋಪಗಳು ಹೆಚ್ಚಿವೆ.

    ಪತಿಯ ಬಂಧನದ ಬಗ್ಗೆ ಮೌನ ಮುರಿದ ಶಿಲ್ಪಾ: ಹೇಳಿಕೆ ಬೇಡ ಲಿಂಕ್ ಕೊಡಿ ಎನ್ನುತ್ತಿದ್ದಾರೆ ನೆಟ್ಟಿಗರುಪತಿಯ ಬಂಧನದ ಬಗ್ಗೆ ಮೌನ ಮುರಿದ ಶಿಲ್ಪಾ: ಹೇಳಿಕೆ ಬೇಡ ಲಿಂಕ್ ಕೊಡಿ ಎನ್ನುತ್ತಿದ್ದಾರೆ ನೆಟ್ಟಿಗರು

    ಇಸ್ರೇಲ್ ರಾಷ್ಟ್ರಗೀತೆ ಕೇಳಿದ ಬಹುತೇಕರಿಗೆ ದಿಲ್ಜಲೆ ಸಿನಿಮಾದ 'ಮೇರಾ ಮುಲ್ಕ್ ಮೇರಾ ದೇಶ.....' ನೆನಪಿಸಿಕೊಳ್ಳುತ್ತಿದ್ದಾರೆ. 1996ರಲ್ಲಿ ಬಿಡುಗಡೆಯಾಗಿದ್ದ ದಿಲ್ಜಲೆ ಸಿನಿಮಾದಲ್ಲಿ ಅಜಯ್ ದೇವಗನ್, ಸೋನಾಲಿ ಬೇಂದ್ರೆ, ಅಮರೀಶ್ ಪುರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಹ್ಯಾರಿ ಭವೇಜಾ ಈ ಚಿತ್ರ ನಿರ್ದೇಶಿಸಿದ್ದರು.

    Netizens Troll Anu Malik for Copied Israel National Anthem To compose Diljale Song

    'ಮೇರಾ ಮುಲ್ಕ್ ಮೇರಾ ದೇಶ.....' ಹಾಡನ್ನು ಕುಮಾರ್ ಸನು ಮತ್ತು ಆದಿತ್ಯ ನಾರಾಯಣ್ ಹಾಡಿದ್ದರು. ಇಸ್ರೇಲ್ ರಾಷ್ಟ್ರಗೀತೆಯಿಂದ ಕದ್ದು ಈ ಹಾಡು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಟ್ವಿಟ್ಟರ್, ಫೇಸ್‌ಬುಕ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಅನು ಮಲಿಕ್ ಕಾಲೆಳೆಯುತ್ತಿದ್ದಾರೆ.

    'ರಾಷ್ಟ್ರಗೀತೆಯನ್ನು ಬಿಡಲ್ವಾ' ಎಂದು ಅನು ಮಲಿಕ್ ಕುರಿತಾಗಿ ಟ್ರೋಲ್ ಮಾಡ್ತಿದ್ದಾರೆ. ನೆಟ್ಟಿಗನೊಬ್ಬ ಟ್ವೀಟ್ ಮಾಡಿ, ''ನಾವು ಎಲ್ಲಾ ದೇಶಗಳ ರಾಷ್ಟ್ರಗೀತೆಯನ್ನೊಮ್ಮೆ ಪರಿಶೀಲಿಸಬೇಕಿದೆ. ಏಕಂದ್ರೆ, ಅನು ಮಲಿಕ್ ರಾಷ್ಟ್ರಗೀತೆಗಳಿಂದ ಸ್ಫೂರ್ತಿ ಪಡೆದಿರಬಹುದು'' ಎಂದು ವ್ಯಂಗ್ಯ ಮಾಡಿದ್ದಾರೆ.

    ನಟಿ ಜಿಯಾ ಖಾನ್ ನಿಗೂಢ ಸಾವು: 8 ವರ್ಷದಿಂದ ಕೇಸ್ ಇನ್ನು ಜೀವಂತನಟಿ ಜಿಯಾ ಖಾನ್ ನಿಗೂಢ ಸಾವು: 8 ವರ್ಷದಿಂದ ಕೇಸ್ ಇನ್ನು ಜೀವಂತ

    ಮತ್ತೊಬ್ಬರು ಕಾಮೆಂಟ್ ಮಾಡಿ, ''ಇಸ್ರೇಲ್ ಒಲಂಪಿಕ್ ಕ್ರೀಡಾಕೂಟದಲ್ಲಿ ಎರಡನೇ ಸಲ ಚಿನ್ನದ ಪದಕ ಗೆದ್ದಿತು. ಈ ಮೂಲಕ ಭಾರತೀಯರು ಅನು ಮಲಿಕ್ ಅವರನ್ನು ಸ್ಮರಿಸುವಂತಾಯಿತು'' ಎಂದಿದ್ದಾರೆ.

    Netizens Troll Anu Malik for Copied Israel National Anthem To compose Diljale Song

    ''ಇಸ್ರೇಲ್ ರಾಷ್ಟ್ರಗೀತೆ ಕದ್ದು ಮೇರಾ ಮುಲ್ಕ್ ಮೇರಾ ದೇಶ ಹಾಡು ಸಂಯೋಜನೆ ಮಾಡಿರುವುದಕ್ಕೆ ಕೃತಿಚೌರ್ಯ ವಿಭಾಗದಲ್ಲಿ ಒಲಂಪಿಕ್ ಚಿನ್ನದ ಪದಕ ಕೊಡಬೇಕಾಗುತ್ತದೆ'' ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ.

    ''ಇದು ಅನು ಮಲಿಕ್ ಅವರ ಬೆಳವಣಿಗೆ ಪ್ರದರ್ಶಿಸುತ್ತಿದೆ. ಇಷ್ಟು ದಿನ ಪಾಕಿಸ್ತಾನದ ಹಾಡುಗಳನ್ನು ನಕಲು ಮಾಡ್ತಿದ್ದರು. ಇದೀಗ, ತಮ್ಮ ರೆಕ್ಕೆಗಳನ್ನು ಬಿಚ್ಚಿ ಇಸ್ರೇಲ್ ವಶಪಡಿಸಿಕೊಂಡಿದ್ದಾರೆ'' ಎಂದು ವ್ಯಕ್ತಿಯೋರ್ವ ಹೇಳಿದ್ದಾರೆ.

    ''ಅನು ಮಲಿಕ್ ದೂರದೃಷ್ಟಿಯ ಸಂಗೀತ ನಿರ್ದೇಶಕರು..ಅವರು ಭಾರತ- ಇಸ್ರೇಲ್ ಸ್ನೇಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ .. ರಾಜತಾಂತ್ರಿಕತೆಯ ಭಾಗ 2'' ಎಂದು ಟೀಕಿಸಿದ್ದಾರೆ.

    Netizens Troll Anu Malik for Copied Israel National Anthem To compose Diljale Song

    ಲೈಂಗಿಕ ಕಿರುಕುಳ ಆರೋಪ

    2018ರಲ್ಲಿ ಮೀಟೂ ಅಭಿಯಾನ ಹೆಚ್ಚು ಸದ್ದು ಮಾಡಿದ ಸಂದರ್ಭದಲ್ಲಿ ಅನು ಮಲಿಕ್ ವಿರುದ್ದ ಬಹಳಷ್ಟು ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದರು. ಗಾಯಕಿ ಶ್ವೇತಾ ಪಂಡಿತ್ ಸಹ ಅನು ಮಲ್ಲಿಕ್ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಸೋನಾ ಮಹಾಪಾತ್ರ ಮತ್ತು ನೇಹಾ ಭಸಿನ್ ಸಹ ಆರೋಪ ಮಾಡಿದ್ದರು.

    ಆದರೆ, ಅನು ಮಲಿಕ್ ಆರೋಪಗಳನ್ನು ನಿರಾಕರಿಸಿದರು. ಮೀಟೂ ಅರೋಪಗಳಿಂದ ಸಾರ್ವಜನಿಕ ವಲಯದಲ್ಲಿ ಕೆಟ್ಟ ಇಮೇಜ್ ಬಂದ ಕಾರಣ 'ಇಂಡಿಯನ್ ಐಡಲ್ ಸೀಸನ್ 10'ರ ತೀರ್ಪುಗಾರ ಸ್ಥಾನದಿಂದ ಹಿಂದೆ ಸರಿದರು.

    ಅನು ಮಲಿಕ್ ವಿರುದ್ಧ ಮೀಟೂ ಆರೋಪಗಳು ಸತ್ಯ ಎಂದು ಅಲಿಶಾ ಚಿನಾಯ್ ಬೆಂಬಲ ವ್ಯಕ್ತಪಡಿಸಿದ್ದರು. ಈ ಹಿಂದೆ 1990ರ ಸಮಯದಲ್ಲಿ ಅನು ಮಲಿಕ್ ಮೇಲೆ ಅಲಿಶಾ ಚಿನೋಯ್ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

    ರಾಷ್ಟ್ರೀಯ ಮಹಿಳಾ ಆಯೋಗವು ಅನು ಮಲಿಕ್ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯ ಕಾರಣಕ್ಕೆ ಕೇಸ್ ಮುಚ್ಚಿಹಾಕಿತು.

    1980ರ ದಶಕ ಖ್ಯಾತ ಸಂಗೀತ ನಿರ್ದೇಶಕ. ಸುಮಾರು ಮೂರು ದಶಕಗಳಿಂದಲೂ ಹಿಂದಿ ಇಂಡಸ್ಟ್ರಿಯಲ್ಲಿರುವ ಅನು ಮಲಿಕ್ 2001ರಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದರು. ಫಿಲಂ ಫೇರ್, ಜೀ ಸಿನಿ ಅವಾರ್ಡ್, ಸ್ಟಾರ್ ಸ್ಕ್ರೀನ್ ಅವಾರ್ಡ್ ಸೇರಿದಂತೆ 42 ಸಲ ನಾಮಿನಿರ್ದೇಶಗೊಂಡಿದ್ದಾರೆ.

    English summary
    Netizens Troll Anu Malik for Copied Israel National Anthem To compose Mera Mulk Mera Desh Song.
    Monday, August 2, 2021, 16:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X