ಒಂದೇ ಒಂದು ಹಾಡು ಇರದಿದ್ದ 'ಖೈದಿ' ಚಿತ್ರದ ಹಿಂದಿ ರಿಮೇಕ್‌ನಲ್ಲಿ ಐಟಂ ಸಾಂಗ್; ನಕ್ಕ ನೆಟ್ಟಿಗರು!

ಬಾಲಿವುಡ್.. ಈ ಹಿಂದೆ ತನ್ನ ಕಲರ್‌ಫುಲ್ ಚಿತ್ರಗಳು ಹಾಗೂ ಹಾಡುಗಳಿಂದ ಇತರೆ ಚಿತ್ರರಂಗದ ಸಿನಿ ರಸಿಕರನ್ನು ಸೆಳೆಯುತ್ತಿದ್ದ ಈ ಚಿತ್ರರಂಗ ಇದೀಗ ತನ್ನ ಪ್ರಾಂತ್ಯದ ಸಿನಿ ರಸಿಕರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ. ಹೌದು, ಬಾಲಿವುಡ್ ಚಿತ್ರರಂಗ ಈಗ ಎಂತಹ ಹೀನ ಸ್ಥಿತಿಯಲ್ಲಿದ್ದು ಸಾಲು ಸಾಲು ಟ್ರೋಲ್‌ಗಳನ್ನು ಅನುಭವಿಸಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವುದೇ.

ತನ್ನ ಹಳೆ ಮಸಾಲಾ ಚಿತ್ರಗಳಿಂದ ಹೊರಬರದ ಬಾಲಿವುಡ್ ಕೆಟ್ಟದಾಗಿ ಟ್ರೋಲ್ ಆಗುವುದು ಮಾತ್ರವಲ್ಲದೇ ದಕ್ಷಿಣ ಭಾರತ ಚಿತ್ರರಂಗಗಳ ಹಿಟ್ ಚಿತ್ರಗಳನ್ನು ರಿಮೇಕ್ ಮಾಡುವ ಮೂಲಕ ಮತ್ತಷ್ಟು ಟ್ರೋಲ್‌ಗಳನ್ನು ಎದುರಿಸಿತು. ಹೌದು, ದಕ್ಷಿಣ ಭಾರತದಲ್ಲಿ ಅಚ್ಚುಕಟ್ಟಾಗಿ ತಯಾರಾಗಿದ್ದ ಚಿತ್ರಗಳನ್ನು ಬಾಲಿವುಡ್ ತನ್ನ ಫ್ಲೇವರ್‌ಗೆ ಬದಲಿಸಲು ಹೋಗಿ ಟ್ರೋಲ್ ಆಗಿತ್ತು ಹಾಗೂ ಹೀನಾಯ ಸೋಲು ಕಂಡಿತ್ತು.

ರಿಮೇಕ್ ಮಾಡಿದ ಮೇಲೆ ಆ ಚಿತ್ರದ ಮೇಕಿಂಗ್ ಅನ್ನು ತಮ್ಮ ಇಂಡಸ್ಟ್ರಿಯ ನೇಟಿವಿಟಿಗೆ ತಕ್ಕಂತೆ ಬದಲಿಸಿಕೊಳ್ಳುವುದು ಕಾಮನ್ ಹಾಗೂ ಅಗತ್ಯ ಕೂಡ. ಆದರೆ ಬಾಲಿವುಡ್ ಚಿತ್ರರಂಗ ಅದನ್ನೂ ಮೀರಿಬಿಟ್ಟಿದೆ. ತೆಲುಗಿನ ಕ್ಷಣಂ ರೀತಿಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ರಿಮೇಕ್ ಮಾಡಿದ್ದ ಬಾಲಿವುಡ್ ಆ ಚಿತ್ರದಲ್ಲಿ ಹೆಲಿಕಾಪ್ಟರ್ ಸಾಹಸ ದೃಶ್ಯಗಳನ್ನು ಸೇರಿಸಿ ನಗೆಪಾಟಲಿಗೀಡಾಗಿತ್ತು. ಇದೀಗ ಅಂತಹದ್ದೇ ಟ್ರೋಲ್‌ಗಳನ್ನು ಖೈದಿ ಚಿತ್ರದ ರಿಮೇಕ್ ಮಾಡಿ ಎದುರಿಸುತ್ತಿದೆ ಬಾಲಿವುಡ್.

ಭೋಲಾ ಖೈದಿ ಚಿತ್ರದ ರಿಮೇಕ್

ಭೋಲಾ ಖೈದಿ ಚಿತ್ರದ ರಿಮೇಕ್

ಕಳೆದ ವರ್ಷ ಬಿಡುಗಡೆಗೊಂಡಿದ್ದ ಅಜಯ್ ದೇವಗನ್ ನಟನೆಯ ದೃಶ್ಯಂ 2 ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ ಮುಳುಗಿದ್ದ ಬಾಲಿವುಡ್‌ನಲ್ಲಿ ಆಶಾಕಿರಣವನ್ನು ಮೂಡಿಸಿತ್ತು. ಅಂದಹಾಗೆ ಆ ಚಿತ್ರವೂ ಸಹ ಮಲಯಾಳಂನ ರಿಮೇಕ್. ಆ ಚಿತ್ರವನ್ನು ಸರಿಯಾಗಿ ರಿಮೇಕ್ ಮಾಡಿ ಗೆದ್ದಿದ್ದ ಅಜಯ್ ದೇವಗನ್ ಇದೀಗ ಬಹಳ ದಿನಗಳ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದು, ತಮಿಳಿನ ಲೋಕೇಶ್ ಕನಕರಾಜ್ ನಿರ್ದೇಶನದ ಸೂಪರ್ ಹಿಟ್ ಚಿತ್ರ ಖೈದಿಯನ್ನು ಹಿಂದಿಗೆ ಭೋಲಾ ಎಂಬ ಶೀರ್ಷಿಕೆ ಅಡಿಯಲ್ಲಿ ರಿಮೇಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ನಟನೆ, ನಿರ್ದೇಶನದ ಜತೆಗೆ ನಿರ್ಮಾಪಕನಾಗಿಯೂ ಅಜಯ್ ದೇವಗನ್ ಕೆಲಸ ಮಾಡಿದ್ದಾರೆ.

ಕೆಟ್ಟ ರಿಮೇಕ್ ಎಂದ ನೆಟ್ಟಿಗರು

ಕೆಟ್ಟ ರಿಮೇಕ್ ಎಂದ ನೆಟ್ಟಿಗರು

ಇನ್ನು ಖೈದಿ ಚಿತ್ರ ತನ್ನ ಅಮೋಘ ಚಿತ್ರಕತೆಗೆ ಖ್ಯಾತಿಯನ್ನು ಪಡೆದ ಚಿತ್ರ. ಒಂದು ರಾತ್ರಿಯಲ್ಲಿ ನಡೆಯುವ ರೋಚಕ ಚಿತ್ರಕಥೆಯಾಗಿದ್ದ ಖೈದಿ ಚಿತ್ರದುದ್ದಕ್ಕೂ ಸಿನಿ ರಸಿಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನು ಭೋಲಾ ಚಿತ್ರದ ಎರಡನೇ ಟೀಸರ್ ಇಂದು ( ಜನವರಿ 24 ) ಬಿಡುಗಡೆಯಾಗಿದ್ದು, ಈ ಟೀಸರ್ ವೀಕ್ಷಿಸಿರುವ ಸಿನಿ ರಸಿಕರು ರೋಮಾಂಚನವಾಗುವಂತಿದ್ದ ಖೈದಿ ಚಿತ್ರವನ್ನು ರಿಮೇಕ್ ಮಾಡಿರುವ ಭೋಲಾ ಚಿತ್ರತಂಡ ಒಂದೊಳ್ಳೆ ಸಿನಿಮಾವನ್ನು ಹಾಳು ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮೂಲ ಚಿತ್ರಕ್ಕೆ ಹೋಲಿಸಿದರೆ ಈ ಚಿತ್ರದಲ್ಲಿ ಅನಗತ್ಯ ಕ್ರೌರ್ಯ, ಬೇಡವಾಗಿದ್ದ ಹೆಚ್ಚುವರಿ ಪಾತ್ರಗಳನ್ನು ತುರುಕಿದಂತೆ ಕಾಣುತ್ತಿದ್ದು, ಇದೊಂದು ಕೆಟ್ಟ ರಿಮೇಕ್ ಆಗುವುದು ಖಚಿತ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಹೆಚ್ಚು ಟ್ರೋಲ್ ಆದ ಐಟಂ ಹಾಡು!

ಹೆಚ್ಚು ಟ್ರೋಲ್ ಆದ ಐಟಂ ಹಾಡು!

ಇನ್ನು ಈ ಟೀಸರ್‌ನಲ್ಲಿ ಐಟಂ ಹಾಡೊಂದರ ತುಣುಕು ಇರುವುದನ್ನು ಕಂಡಿರುವ ಸಿನಿ ರಸಿಕರು ಎದ್ದು ಬಿದ್ದು ನಕ್ಕಿದ್ದಾರೆ. ಹಾಡುಗಳೇ ಇಲ್ಲದಿದ್ದ ಖೈದಿ ಚಿತ್ರವನ್ನು ರಿಮೇಕ್ ಮಾಡಿ ಐಟಂ ಹಾಡನ್ನು ಸೇರಿಸಬೇಕೆಂಬ ಚಿತ್ರತಂಡದ ಯೋಚನೆಗೆ ಕಿಡಿಕಾರಿದ್ದಾರೆ. ಇನ್ನು ಖೈದಿ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಬಹುದಾದ ಕಥೆಯನ್ನು ಹೊಂದಿರುವ ಕಾರಣ ಯಾವುದೇ ಬದಲಾವಣೆಯನ್ನೇ ಮಾಡದೇ ಅದೇ ಚಿತ್ರಕಥೆಯನ್ನೇ ಇಲ್ಲಿಯೂ ಮಾಡಬಹುದಿತ್ತು, ಇಷ್ಟೆಲ್ಲಾ ಬದಲವಾಣೆ ಮಾಡಿ ಹಾಳು ಮಾಡಿರುವುದು ಸರಿಯಲ್ಲ, ಚಿತ್ರ ನಿರೀಕ್ಷಿಸಿದ ಫಲಿತಾಂಶವನ್ನು ಪಡೆಯುವುದಿಲ್ಲ ಎಂದು ಊಹಿಸಿದ್ದಾರೆ.

More from Filmibeat

English summary
Netizens trolled Bholaa movie teaser 2 which is remake of tamil hit Kaithi. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X