ಐಶ್ವರ್ಯಾ ರೈ ಬಿಟ್ಟು ಅಜಯ್, ಬನ್ಸಾಲಿಗೆ ಮಾತ್ರ ಟ್ಯಾಗ್ ಮಾಡಿದ ಸಲ್ಮಾನ್ ಗೆ ನೆಟ್ಟಿಗರ ಪ್ರಶ್ನೆ

ಬಾಲಿವುಡ್‌ನ ಖ್ಯಾತ ನಟರಾದ ಸಲ್ಮಾನ್ ಖಾನ್, ಅಜಯ್ ದೇವಗನ್ ಮತ್ತು ಐಶ್ವರ್ಯಾ ರೈ ನಟನೆಯ ಸೂಪರ್ ಹಿಟ್ 'ಹಮ್ ದಿಲ್ ದೇ ಚುಕೆ ಸನಮ್' ಸಿನಿಮಾ ಬಿಡುಗಡೆಯಾಗಿ 22 ವರ್ಷಗಳಾಗಿದೆ. 1999 ಜೂನ್ 17ರಂದು ಬಿಡುಗಡೆಯಾದ ಈ ಸಿನಿಮಾ ಅನೇಕ ದಾಖಲೆಗಳನ್ನು ನಿರ್ಮಿಸಿತ್ತು.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ, ಸಲ್ಮಾನ್ ಖಾನ್, ಅಜಯ್ ದೇವಗನ್ ಮತ್ತು ಐಶ್ವರ್ಯಾ ರೈ ಅಭಿನಯ, ಅದ್ಭುತ ಸೆಟ್‌ಗಳು, ಹಿಂದೆಂದೂ ನೋಡಿರದ ಪ್ರೇಮ ಕಥೆಗೆ ಭಾರತೀಯ ಸಿನಿ ಪ್ರಿಯರು ಫಿದಾ ಆಗಿದ್ದರು. ಭಾರತೀಯ ಸಿನಿಮಾರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಈ ಸಿನಿಮಾ ಕೂಡ ಒಂದಾಗಿದೆ.

ಇನ್ನು ವಿಶೇಷ ಎಂದರೆ ಈ ಸಿನಿಮಾ ಐಶ್ವರ್ಯಾ ಮತ್ತು ಸಲ್ಮಾನ್ ಖಾನ್ ಅವರ ಪ್ರೇಮದ ಅಂತ್ಯಕ್ಕೆ ಆರಂಭ ಕೂಡ ಆಗಿತ್ತು. ಈ ಸಿನಿಮಾ ಬಳಿಕ ಇಬ್ಬರ ಜೀವನದಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿತ್ತು. ಸಲ್ಮಾನ್ ಮತ್ತು ಐಶ್ವರ್ಯಾ ರೈ ಲವ್ ಸ್ಟೋರಿ ಎಲ್ಲರಿಗೂ ಗೊತ್ತಿರುವುದೇ. ಈ ಸಿನಿಮಾ ಬಳಿಕ ಇಬ್ಬರು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಸಿನಿಮಾ ಅಥವಾ ನಿಜ ಜೀವನದಲ್ಲೂ ಇಬ್ಬರೂ ಇದುವರೆಗೂ ಮುಖಾಮುಖಿಯಾಗಿಲ್ಲ.

Netizens Trolled Salman Khan for not tagging Aishwarya Rai in Hum Dil De Chuke Sanam post

ಇಂದು 22 ವರ್ಷದ ಸಂಭ್ರಮದಲ್ಲಿರುವ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ ಬಗ್ಗೆ ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಚಿತ್ರೀಕರಣ ಸೆಟ್‌ನಲ್ಲಿರುವ ಫೋಟೋವನ್ನು ಶೇರ್ ಮಾಡಿ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

ಸಲ್ಮಾನ್ ಖಾನ್ ಫೋಟೋ ಶೇರ್ ಮಾಡಿ, ನಟ ಅಜಯ್ ದೇವಗನ್, ಸಂಜಯ್ ಲೀಲಾ ಬನ್ಸಾಲಿ ಮತ್ತು ಬನ್ಸಾಲಿ ಪ್ರೋಡಕ್ಷನ್ ಹೌಸ್‌ಗೆ ಟ್ಯಾಗ್ ಮಾಡಿದ್ದಾರೆ. ಆದರೆ ಚಿತ್ರದ ನಾಯಕಿ ಐಶ್ವರ್ಯಾ ರೈ ಅವರನ್ನು ಟ್ಯಾಗ್ ಮಾಡಿಲ್ಲ. ಇದನ್ನು ಗಮನಿಸಿದ ನೆಟ್ಟಿಗರು ಸಲ್ಮಾನ್‌ಗೆ ತರಹೇವಾರಿ ಪ್ರಶ್ನೆ ಮಾಡುತ್ತಿದ್ದಾರೆ.

Netizens Trolled Salman Khan for not tagging Aishwarya Rai in Hum Dil De Chuke Sanam post

"ಚಿತ್ರದ ನಾಯಕಿಯನ್ನೇ ಬಿಟ್ಟಿದ್ದೀರಾ?", "ಸಿನಿಮಾದ ಸಕ್ಸಸ್‌ಗೆ ಐಶ್ವರ್ಯಾ ಕೂಡ ಕಾರಣರಾಗಿದ್ದಾರೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಲ್ಮಾನ್ ಮತ್ತು ಐಶ್ವರ್ಯಾ ರೈ ಬಗ್ಗೆ ಗೊತ್ತಿದ್ದರೂ ಅಭಿಮಾನಿಗಳು ಐಶ್ವರ್ಯಾ ರೈ ಅವರನ್ನು ಯಾಕೆ ಟ್ಯಾಗ್ ಮಾಡಿಲ್ಲ ಎಂದು ಪ್ರಶ್ನೆ ಮಾಡುವ ಮೂಲಕ ಸಲ್ಮಾನ್ ಕಾಲೆಳೆಯುತ್ತಿದ್ದಾರೆ.

ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ 2000ರಲ್ಲಿ ಬೇರೆ ಬೇರೆ ಆದರು. ಈ ಸಿನಿಮಾದ ಹಾಗೆ ನಿಜ ಜೀವನದಲ್ಲೂ ಸಲ್ಮಾನ್ ಖಾನ್‌ಗೆ ಐಶ್ವರ್ಯಾ ರೈ ಸಿಗುವುದಿಲ್ಲ. ಅಲ್ಲದೆ ಆ ಸಮಯದಲ್ಲಿ ಇಬ್ಬರ ಬ್ರೇಕಪ್ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸಲ್ಮಾನ್ ಖಾನ್ ದೈಹಿಕವಾಗಿ ಹಿಂಸೆ ನೀಡಿರುವುದಾಗಿ ಐಶ್ವರ್ಯಾ ಬಹಿರಂಗ ಪಡಿಸಿದ್ದರು. ದೊಡ್ಡ ವಿವಾದದ ಬಳಿಕ ಇಬ್ಬರೂ ಶಾಶ್ವತವಾಗಿ ದೂರ ದೂರ ಆದರು.

More from Filmibeat

English summary
Netizens Trolled Salman Khan for not tagging Aishwarya Rai in Hum Dil De Chuke Sanam post.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X