ಮದುವೆಯಾದ ಮೂರೇ ತಿಂಗಳಿಗೆ ಈ ನಟಿ 4 ತಿಂಗಳ ಗರ್ಭಿಣಿ; ಕಾಲೆಳೆದ ನೆಟ್ಟಿಗರು!
ಮದುವೆಗೂ ಮುನ್ನ ಮಕ್ಕಳನ್ನು ಹೊಂದುವುದು ಕೆಲ ಕ್ರೀಡಾ ಹಾಗೂ ಸಿನಿಮಾ ಸೆಲೆಬ್ರಿಟಿಗಳಿಗೆ ಹೊಸತೇನಲ್ಲ. ಹಲವು ಕ್ರಿಕೆಟಿಗರು ಹಾಗೂ ಸಿನಿ ತಾರೆಯರು ಮದುವೆಗೂ ಮುನ್ನ ತಂದೆ - ತಾಯಿಯಾದ ಉದಾಹರಣೆಗಳಿವೆ.
ಈ ವಿಷಯದಿಂದ ಅತಿಯಾಗಿ ಸುದ್ದಿಗೀಡಾಗಿದ್ದ ಈ ಜೋಡಿಗಳು ಟ್ರೋಲ್ ಕೂಡ ಆಗಿದ್ದವು. ಅಂತಹ ಜೋಡಿಗಳ ಸಾಲಿಗೆ ಇದೀಗ ಹೊಸ ಸೇರ್ಪಡೆ ನಟಿ ಸ್ವರಾ ಭಾಸ್ಕರ್. ಹೌದು, ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗರ್ಭಿಣಿ ಎಂದು ಖುಷಿ ಹಂಚಿಕೊಂಡು ಸುದ್ದಿಗೀಡಾಗುವುದರ ಜತೆಗೆ ಟ್ರೋಲ್‌ಗಳಿಗೂ ಸಹ ಒಳಗಾಗಿದ್ದಾರೆ.

ತಮ್ಮ ಪತಿ ಜತೆಗೆ ತನ್ನ ಇತ್ತೀಚೆಗಿನ ಫೋಟೊಗಳನ್ನು ಹಂಚಿಕೊಂಡಿರುವ ಸ್ವರಾ ಭಾಸ್ಕರ್ ತಾನು ಈಗ ಗರ್ಭಿಣಿ ಎಂದು ಘೋಷಿಸಿದ್ದಾರೆ. ಹೀಗೆ ಘೋಷಿಸುವ ಸಮಯದಲ್ಲಿ ಸ್ವರಾ ಭಾಸ್ಕರ್ 'ಅಕ್ಟೋಬರ್ ಬೇಬಿ' ಎಂಬುದನ್ನು ಬಳಸಿದ್ದಾರೆ.
ಅಕ್ಟೋಬರ್ ಬೇಬಿ ಎಂದು ಬರೆಯುವ ಮೂಲಕ ತಮ್ಮ ಮಗು ಅಕ್ಟೋಬರ್ ತಿಂಗಳಿನಲ್ಲಿ ಜನಿಸಲಿದೆ ಎಂಬುದನ್ನು ಸ್ವರಾ ಭಾಸ್ಕರ್ ತಿಳಿಸಿದ್ದಾರೆ. ಹೀಗೆ ಸ್ವರಾ ಭಾಸ್ಕರ್ ಮಗು ಅಕ್ಟೋಬರ್ ತಿಂಗಳಿನಲ್ಲಿ ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂಬುದನ್ನು ನೆಟ್ಟಿಗರು ಮದುವೆಯಾದ ದಿನಾಂಕವನ್ನು ಆಧಾರವಾಗಿಟ್ಟುಕೊಂಡು ಕಾಮೆಂಟ್ ಮಾಡಿದ್ದಾರೆ.
ಹೌದು ಸ್ವರಾ ಭಾಸ್ಕರ್ ಇದೇ ವರ್ಷದ ಫೆಬ್ರವರಿ 16ರಂದು ರಾಜಕಾರಣಿ ಫಹಾದ್ ಅಹ್ಮದ್ ಎಂಬುವವರನ್ನು ವಿವಾಹವಾಗಿದ್ದರು. ಹೀಗೆ ಸ್ವರಾ ಭಾಸ್ಕರ್ ವೈಯಕ್ತಿಕವಾಗಿ ಟ್ರೋಲ್ ಆಗುತ್ತಿದ್ದಾರೆ.
ಇನ್ನು ಈ ಯಾವುದೇ ಟ್ರೋಲ್‌ಗೂ ಸಹ ಸ್ವರಾ ಭಾಸ್ಕರ್ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದಾರೆ. ಉಳಿದ ಸೆಲೆಬ್ರಿಟಿಗಳು ಸ್ವರಾ ಭಾಸ್ಕರ್ ಪೋಸ್ಟ್‌ಗೆ ಪ್ರತಿಕ್ರಿಯಿಸಿ ಶುಭಾಶಯ ಕೋರುತ್ತಿದ್ದರೆ, ಸ್ವರಾ ಭಾಸ್ಕರ್ ಅಭಿಮಾನಗಳು ಸಹ ಸಂತಸ ವ್ಯಕ್ತಪಡಿಸಿ ತಮ್ಮ ನೆಚ್ಚಿನ ನಟಿಗೆ ದೇವರು ಒಳ್ಳೆಯದನ್ನು ಮಾಡಲೆಂದು ಹಾರೈಸಿದ್ದಾರೆ.
ಇನ್ನು ಸ್ವರಾ ಭಾಸ್ಕರ್‌ಗೆ ಟ್ರೋಲ್ ಆಗುವುದು ಹೊಸತೇನಲ್ಲ. ಈ ಹಿಂದೆಯೂ ಹಲವಾರು ಸಂದರ್ಶನಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನೇರವಾದ ಹೇಳಿಕೆಗಳನ್ನು ನೀಡುವುದರ ಮೂಲಕ ಸ್ವರಾ ಭಾಸ್ಕರ್ ಟ್ರೋಲ್ ಆಗಿದ್ದಾರೆ.


Click it and Unblock the Notifications











