For Quick Alerts
  ALLOW NOTIFICATIONS  
  For Daily Alerts

  ರಾಜಸ್ಥಾನ ಅಭಿಮಾನಿ ಜೊತೆ ಜಾಹ್ನವಿ ವರ್ತನೆ ಖಂಡಿಸಿದ ನೆಟ್ಟಿಗರು

  |

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹಿಂದಿ ಇಂಡಸ್ಟ್ರಿಯಲ್ಲಿ ಅದಾಗಲೇ ನೆಲೆ ಕಂಡುಕೊಂಡಿದ್ದಾರೆ. ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಸಿನಿಮಾ ಮಾಡ್ತಿದ್ದು, ಸ್ಟಾರ್ ನಟಿ ಆಗಿ ಗುರುತಿಸಿಕೊಂಡಿದ್ದಾರೆ.

  ಜಾಹ್ನವಿ ಕಪೂರ್ ಅಭಿಮಾನಿ ಬಳಗವೂ ದೊಡ್ಡದಾಗುತ್ತಾ ಸಾಗಿದೆ. ಜಾಹ್ನವಿ ಕಾಣಿಸಿಕೊಳ್ಳುವ ಜಿಮ್, ರೆಸ್ಟೋರೆಂಟ್ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಅಭಿಮಾನಿಗಳು ಜಮಾಯಿಸುವುದು ಸಾಮಾನ್ಯವಾಗಿದೆ. ಸಾಧ್ಯವಾದಷ್ಟು ಅಭಿಮಾನಿಗಳನ್ನು ಜಾಹ್ನವಿ ಮಾತನಾಡಿಸಿ ಹೋಗಿರುವ ಉದಾಹರಣೆ ಇದೆ.

  ರಾಜಮೌಳಿ-ಮಹೇಶ್ ಬಾಬು ಸಿನಿಮಾ ಬಗ್ಗೆ ವಿಜಯೇಂದ್ರ ಪ್ರಸಾದ್ ಹೇಳಿದ್ದೇನು?ರಾಜಮೌಳಿ-ಮಹೇಶ್ ಬಾಬು ಸಿನಿಮಾ ಬಗ್ಗೆ ವಿಜಯೇಂದ್ರ ಪ್ರಸಾದ್ ಹೇಳಿದ್ದೇನು?

  ಆದರೆ, ಇತ್ತೀಚಿಗಷ್ಟೆ ರಾಜಸ್ಥಾನದಿಂದ ತಮ್ಮನ್ನು ನೋಡಲು ಬಂದ ಅಭಿಮಾನಿ ಜೊತೆ ಜಾಹ್ನವಿ ವರ್ತಿಸಿದ ರೀತಿಗೆ ನೆಟ್ಟಿಗರು ಬೇಸರ ಹೊರಹಾಕಿದ್ದಾರೆ. ಶ್ರೀದೇವಿ ಪುತ್ರಿ 'ಆಟಿಟ್ಯೂಡ್-Attitude ' ಎಂದು ಟ್ರೋಲ್ ಮಾಡ್ತಿದ್ದಾರೆ.

  ಉಡುಗೊರೆ ತಂದಿದ್ದ ಅಭಿಮಾನಿ

  ಜುಲೈ 9 ರಂದು ನಟಿ ಜಾಹ್ನವಿ ಕಪೂರ್ ಜಿಮ್‌ನಲ್ಲಿ ವರ್ಕೌಟ್ ಮುಗಿಸಿ ಹೊರಗಡೆ ಬಂದರು. ಈ ವೇಳೆ ಕಾರು ಹತ್ತಲು ಹೋಗುತ್ತಿದ್ದ ಸಮಯದಲ್ಲಿ ಸಾಕಷ್ಟು ಅಭಿಮಾನಿಗಳು ಗೇಟ್ ಹೊರಗಡೆಯಿಂದ ಹಾಯ್ ಮಾಡಿದರು. ಅಲ್ಲೊಬ್ಬ ಅಭಿಮಾನಿ 'ಮೇಡಂ ನಾನು ರಾಜಸ್ಥಾನದಿಂದ ಮುಂಬೈಗೆ ಬಂದಿದ್ದೇನೆ, ನಿಮಗೆ ಉಡುಗೊರೆ ತಂದಿದ್ದೇನೆ, ಪ್ಲಿಸ್ ಒಂದು ಫೋಟೋ' ಎಂದು ಕೇಳಿಕೊಂಡ.

  ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?

  ಆ ಅಭಿಮಾನಿಯ ಮನವಿಗೆ ನಿಂತ ಜಾಹ್ನವಿ ಕಪೂರ್, ಸೆಕ್ಯೂರಿಟಿಗೆ ಗೇಟ್ ತೆಗೆಯಲು ಹೇಳಿ ರಾಜಸ್ಥಾನಿ ಅಭಿಮಾನಿಯನ್ನು ಒಳಗಡೆ ಕರೆದರು. ಈ ವೇಳೆ ಅಭಿಮಾನಿ ತಂದಿದ್ದ ಉಡುಗೊರೆ ಸ್ವೀಕರಿಸಿದ ಜಾಹ್ನವಿ, ಫೋಟೋ ತೆಗೆಸಿಕೊಳ್ಳಲಿಲ್ಲ. ಮತ್ತು ಉಡುಗೊರೆ ಸ್ವೀಕರಿಸಿ ಸೀದಾ ಕಾರಿನಲ್ಲಿ ಹೋಗಿಬಿಟ್ಟರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾಹ್ನವಿ ಆಟಿಟ್ಯೂಡ್ ಹೆಚ್ಚು ಎಂದು ಟೀಕೆ ವ್ಯಕ್ತವಾಗಿದೆ.

  Netizens Trolls Actress Jhanvi kapoor for Showing attitude to a fan

  ಉಡುಗೊರೆ ಬಿಚ್ಚಿದ ನಂತರ ಆ ಪೇಪರ್ ಅಲ್ಲಿ ಬಿಟ್ಟು ಹೋದರು ಎಂದು ಕೆಲವರು ಕಾಲೆಳೆದಿದ್ದಾರೆ. ಅಭಿಮಾನಿ ಜೊತೆ ಸರಿಯಾಗಿ ವರ್ತಿಸಿಲ್ಲ, ಫೋಟೋ ಕ್ಲಿಕ್ಕಿಸಿಕೊಂಡಿಲ್ಲ ಎಂದು ಜಾಹ್ನವಿ ವಿರುದ್ಧ ಕಾಮೆಂಟ್ ಮಾಡಿದ್ದಾರೆ.

  ಜಾಹ್ನವಿ ಸಿನಿಮಾಗಳು

  ಭಾರತದ ಕೊರೊನಾ ಲಸಿಕೆ ಬಿಟ್ಟು ಅಮೆರಿಕ ಲಸಿಕೆಗಾಗಿ ಕಾಯ್ತಿದ್ದಾರೆ ರಮ್ಯಾ | Filmibeat Kannada

  ರಾಜ್ ಕುಮಾರ್ ರಾವ್ ಜೊತೆ ರೂಹಿ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ದೋಸ್ತಾನ 2 ಹಾಗೂ ತಖ್ತ್ ಪ್ರಾಜೆಕ್ಟ್‌ಗಳಲ್ಲಿ ಜಾಹ್ನವಿ ನಟಿಸುತ್ತಿದ್ದಾರೆ.

  English summary
  Netizens Trolls Actress Jhanvi kapoor for Showing attitude to a fan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X