For Quick Alerts
  ALLOW NOTIFICATIONS  
  For Daily Alerts

  'ನಿನ್ನ ವಿಳಾಸ ಹೇಳು, ಬ್ರಾ ಕಳುಹಿಸುತ್ತೇನೆ' ಎಂದ ಯುವತಿಗೆ ನಟಿ ಕೊಟ್ಟ ಉತ್ತರವೇನು?

  |

  ಸಾಮಾಜಿಕ ಜಾಲತಾಣದಲ್ಲಿ ಬಾಡಿ ಶೇಮಿಂಗ್ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿದೆ. ಇತ್ತೀಚಿಗಷ್ಟೆ ನೆಟ್ಟಿಗನೊಬ್ಬ ಬ್ರಾ (ಒಳ ಉಡುಪು) ಸೈಜ್ ಕೇಳಿದ್ದ ಘಟನೆ ಕುರಿತು ಬಾಲಿವುಡ್ ಕಿರುತೆರೆ ನಟಿ ಸಯಂತನಿಗೆ ಘೋಷ್ ಹೇಳಿಕೊಂಡಿದ್ದರು.

  ಇದೀಗ, ಕಿರುತೆರೆ ನಟಿ ಅನುಷಾ ದಾಂಡೇಕರ್ ಅವರಿಗೆ ''ನಿನ್ನ ವಿಳಾಸ ಕಳುಹಿಸಿ, ನನ್ನದೊಂದು ಜೊತೆ ಬ್ರಾ (ಒಳ ಉಡುಪು) ಕಳುಹಿಸುತ್ತೇನೆ'' ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ.

  ಬ್ರಾ ಸೈಜ್ ಕೇಳಿದ ನೆಟ್ಟಿಗನಿಗೆ ನಟಿ ಸಯಂತನಿ ಕೊಟ್ಟ ಉತ್ತರ ಹೀಗಿದೆ

  ಕಿರುತೆರೆ ನಟಿ ಹಾಗೂ ವಿಜೆ ಆಗಿರುವ ಅನುಷಾ ದಾಂಡೇಕರ್ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ನಟಿ ಬ್ರಾ (ಒಳ ಉಡುಪು) ಧರಿಸಿರಲಿಲ್ಲ. ಬ್ರಾ ಲೆಸ್ ಡ್ರೆಸ್ ತೊಟ್ಟಿದ್ದ ನಟಿಯ ಫೋಟೋಗೆ ಯುವತಿಯೊಬ್ಬಳು ಕಾಮೆಂಟ್ ಮಾಡಿದ್ದಾರೆ.

  ''ನಿನ್ನ ವಿಳಾಸ ಕಳುಹಿಸಿ, ನನ್ನದೊಂದು ಜೊತೆ ಬ್ರಾ (ಒಳ ಉಡುಪು) ಕಳುಹಿಸುತ್ತೇನೆ'' ಎಂದು ಯುವತಿ ಟ್ರೋಲ್ ಮಾಡಿರುವುದು ಗಮನಿಸಬೇಕು. ಅದಕ್ಕೆ ಉತ್ತರಿಸಿ ನಟಿ ಅನುಷಾ ''ಅದನ್ನು ನೀನೇ ಇಟ್ಕೊ, ಬ್ರಾ ಇಲ್ಲದೇ ನಾನು ಚೆನ್ನಾಗಿದ್ದೇನೆ. ಧನ್ಯವಾದ'' ಎಂದು ತಿರುಗೇಟು ಕೊಟ್ಟಿದ್ದಾರೆ.

  ನಟಿ ಹಾಗೂ ವಿಜೆ ಅನುಷಾ ಸ್ವಲ್ಪ ಸಮಯದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ತನ್ನ ಬಾಯ್‌ಫ್ರೆಂಡ್‌ ಜೊತೆಗಿನ ಸಂಬಂಧ ಮುರಿದುಕೊಂಡಿರುವುದಾಗಿ ಘೋಷಿಸಿದ್ದರು. ನಟ ಕರಣ್ ಕುಂದ್ರಾ ಅವರ ಜೊತೆ ಪ್ರೀತಿಯಲ್ಲಿದ್ದ ನಟಿ ತಮ್ಮ ರಿಲೇಶನ್‌ಷಿಪ್ ಅಂತ್ಯವಾಗಿಸಿದ್ದರು.

  ಕರಣ್ ಕುಂದ್ರಾ ಜೊತೆಗಿನ ಪ್ರೀತಿ ಮುರಿದುಕೊಂಡು ಮರುದಿನವೇ ನಟ ಜೇಸನ್ ಅವರು ನಟಿ ಅನುಷಾ ದಾಂಡೇಕರ್ ಜೊತೆಗಿನ ಸಂಬಂಧ ದೃಢಪಡಿಸಿದ್ದರು.

  Rishab Shetty ಕಿರಿಕ್ ಪಾರ್ಟಿ ಟೀಂ ವಿರುದ್ಧ ಜಾಮೀನು ರಹಿತ ವಾರೆಂಟ್ | Filmibeat Kannada

  ಅನುಷಾ ಈ ಹಿಂದೆ ಮಾಜಿ ಗೆಳೆಯ ಮತ್ತು ನಟ ಕರಣ್ ಕುಂದ್ರಾ ಅವರೊಂದಿಗೆ ಎಂಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಲವ್ ಸ್ಕೂಲ್' ಸೀಸನ್ 2, 3 ಮತ್ತು 4 ನಿರೂಪಣೆ ಮಾಡ್ತಿದ್ದರು. ನಟನೆ ಜೊತೆಗೆ ಮಾಡೆಲ್ ಆಗಿದ್ದ ಅನುಷಾ 'ಮುಂಬೈ ಮ್ಯಾಟಿನಿ' ಮತ್ತು 'ವಿರುದ್ಧ್' ನಂತಹ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

  English summary
  Netizens Wish to Send Bra To TV Actress Anusha Dandekar. What is The actress Reply to that Netizen?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X