ಲೈಕ್ ಲಪಡಾ ; ಕೃತಿ ಸನೋನ್‌ಗೆ ಪ್ರಶಸ್ತಿ, ಯಾಮಿ ಗೌತಮ್‌ಗೆ ಹೊಟ್ಟೆ ಉರಿ ? 'ಚೀಪ್' ಕೆಲಸಕ್ಕೆ ಆದಿತ್ಯ ಧರ್ ಪತ್ನಿ ಕಿಡಿ

ಎರಡು ಜಡೆ ಒಂದು ಕಡೆ ಸೇರಿದರೆ ಆಗಲ್ಲ ಎನ್ನುವ ಮಾತು ಇದೆ. ಚಿತ್ರರಂಗಕ್ಕೆ ಈ ಮಾತು ಹೆಚ್ಚು ಸೂಕ್ತವಾಗುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಶ್ರೀದೇವಿ ಅವರಿಂದ ಹಿಡಿದು ಮಾಧುರಿ ದೀಕ್ಷಿತ್‌ವರೆಗೆ.. ದೀಪಿಕಾ ಪಡುಕೋಣೆ ಅವರಿಂದ ಹಿಡಿದು ಆಲಿಯಾ ಭಟ್‌ವರೆಗೆ ಹಲವು ಉದಾಹರಣೆಗಳು ಬಣ್ಣದ ಲೋಕದಲ್ಲಿವೆ. ಇನ್ನು ಮೊದಲಾದರೆ ಈ ಜಗಳ ತೆರೆ ಮರೆಯಲ್ಲಿರುತ್ತಿತ್ತು. ಅಸೂಯೆ.. ಹಗೆತನ.. ದ್ವೇಷದ ಕಿಡಿ ಹೊರ ಜಗತ್ತಿಗೆ ಗೊತ್ತಾಗುತ್ತಿರಲಿಲ್ಲ.

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಮ್ಮ ಅಂತರಂಗದಲ್ಲಿ ನಡೆಯುತ್ತಿದ್ದ ಯುದ್ಧವನ್ನು ಕೆಲವರು ಬಹಿರಂಗಗೊಳಿಸುತ್ತಾರೆ. ಸೋಶಿಯಲ್ ಮೀಡಿಯಾ ಈಗ ಈ ಜಗಳಕ್ಕೆ ವೇದಿಕೆಯಾಗಿದೆ. ಪರಸ್ಪರ ಮುಖಾಮುಖಿಯಾಗದಿದ್ದರೂ ಕೂಡ ವಿವಾದದ ಕಿಡಿ ಹೊತ್ತಿಕೊಳ್ಳಲು ಒಂದು ಲೈಕ್ ಅಥವಾ ಕಮೆಂಟ್ ಸಾಕು.ಇದಕ್ಕೆ ಯಾಮಿ ಗೌತಮ್ ಸುತ್ತ ಎದ್ದು ನಿಂತ ವಿವಾದದ ಹುತ್ತ ಮತ್ತೊಂದು ಉದಾಹರಣೆ.

Never Resorted To Cheap PR Yami Gautam Breaks Silence On Shading Kriti Sanon s Win

ಹೌದು, ಅಸಲಿಗೆ ಇತ್ತೀಚೆಗೆ ಜೀ ಸಿನೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅತ್ಯುತ್ತಮ ನಟಿಯ ರೇಸ್‌ನಲ್ಲಿ ''ತೇರೆ ಇಷ್ಕ್ ಮೇ'' ಚಿತ್ರದಲ್ಲಿನ ಅಭಿನಯಕ್ಕೆ ಕೃತಿ ಸನೋನ್ ಇದ್ದರು. ಮತ್ತೊಂದು ಕಡೆ ''ಹಕ್'' ಚಿತ್ರದಲ್ಲಿನ ಅಭಿನಯಕ್ಕೆ ಯಾಮಿ ಗೌತಮ್ ಕೂಡ ಇದ್ದರು. ಎಲ್ಲರೂ ಈ ಪ್ರಶಸ್ತಿ ಯಾಮಿ ಗೌತಮ್ ಅವರ ಪಾಲಾಗುತ್ತೆ ಎಂದೇ ಅಂದುಕೊಂಡಿದ್ದರು. ಆದರೆ, ಪ್ರಶಸ್ತಿ ಒಲಿದಿದ್ದು ಮಾತ್ರ ಕೃತಿ ಸನೋನ್ ಅವರಿಗೆ.

ಈ ಹಿನ್ನೆಲೆ ಅಸಮಾಧಾನಗೊಂಡ ಹಲವರು, ಸೋಶಿಯಲ್ ಮೀಡಿಯಾದಲ್ಲಿ ಕೃತಿ ಸನೋನ್ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಪ್ರಶಸ್ತಿ ಗೆಲ್ಲುವ ಅರ್ಹತೆ ಮತ್ತು ಯೋಗ್ಯತೆ ಯಾಮಿ ಗೌತಮ್ ಅವರಿಗೆ ಇತ್ತು, ಆದರೆ ಬಾಲಿವುಡ್‌ನ ಲಾಭಿಯಿಂದ ಕೃತಿ ಸನೋನ್ ಅವರಿಗೆ ಪ್ರಶಸ್ತಿ ನೀಡಲಾಯ್ತು ಎಂದು ಹಲವರು ಕಿಡಿ ಕಾರಲು ಶುರು ಮಾಡಿದ್ದರು.

Never Resorted To Cheap PR Yami Gautam Breaks Silence On Shading Kriti Sanon s Win

ಹೀಗೆ ಹಂಚಿಕೊಂಡಿದ್ದ ಒಂದು ಪೋಸ್ಟ್‌ನ್ನು ಯಾಮಿ ಗೌತಮ್ ಲೈಕ್ ಮಾಡಿದ್ದರು. ಅವರು ಗೊತ್ತಿದ್ದು ಮಾಡಿದ್ದಾ..? ಗೊತ್ತಿಲ್ಲದೇ ಮಾಡಿದ್ದಾ..? ಎಂದು ಪರಿಶೀಲಿಸದೇ ಹಲವರು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದರು. ಆ ಬೆಂಕಿಯಲ್ಲಿ ತಮ್ಮ ಮೈ ಕಾಯಿಸಿಕೊಳ್ಳಲು ಶುರು ಮಾಡಿದರು. ಸದ್ಯ ಇದೇ ವಿಚಾರಕ್ಕೆ ''ಧುರಂಧರ್'' ಡೈರೆಕ್ಟರ್ ಆದಿತ್ಯ ಧರ್ ಅವರ ಪತ್ನಿ ಎಂಬ ಟ್ಯಾಗ್‌ನಾಚೆ ನಟಿಯಾಗಿ ತನ್ನ ಸಾಮರ್ಥ್ಯದಿಂದ ಮೇಲೆ ಬಂದ ಯಾಮಿ ಗೌತಮ್ ಖಂಡ ತುಂಡ ಉತ್ತರವನ್ನು ನೀಡಿದ್ದಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಯಾಮಿ ಗೌತಮ್, ಮತ್ತೊಬ್ಬ ನಟಿಯನ್ನು ಅವಮಾನಿಸುವಂತಹ ಒಂದು 'ರೀಲ್' ಅನ್ನು ನಾನು 'ಲೈಕ್' ಮಾಡಿದ್ದೇನೆ ಎಂಬ ವಿಷಯ ನನ್ನ ಗಮನಕ್ಕೆ ಬಂದಿದೆ. ಪ್ರತಿದಿನ ನಮಗೆ ನೂರಾರು ಪೋಸ್ಟ್‌ಗಳಲ್ಲಿ ಟ್ಯಾಗ್ ಮಾಡಲಾಗುತ್ತದೆ, ಮತ್ತು ಯಾವುದೇ ಸಾಮಾನ್ಯ ಟ್ಯಾಗ್‌ನಂತೆ ಇದು ಕೂಡ ಒಂದು ಅವಾರ್ಡ್ ಫಂಕ್ಷನ್ ರೆಫರೆನ್ಸ್‌ನೊಂದಿಗೆ ಕಾಣಿಸಿಕೊಂಡಿತ್ತು. ಇದು ಸತ್ಯವಲ್ಲ ಮತ್ತು ನಾನು ಇದನ್ನು ಪ್ರಜ್ಞಾಪೂರ್ವಕವಾಗಿ ಮಾಡಿಲ್ಲ. ಒಂದು ವೇಳೆ ಲೈಕ್ ಆಗಿದ್ದರೆ, ಅದು ಖಂಡಿತವಾಗಿಯೂ ಅಚಾತುರ್ಯದಿಂದ (accidental) ಕ್ಲಿಕ್ ಆಗಿರಬಹುದು ಎಂದು ಹೇಳಿದ್ದಾರೆ.

ಮುಂದುವರೆದು ನನ್ನ ಜೀವನದಲ್ಲಿ ನಾನು ಎಂದಿಗೂ ಇಂತಹ ಕೆಳಮಟ್ಟದ ಪಿಆರ್ ತಂತ್ರಗಳನ್ನು (cheap PR tactics) ಬಳಸಿಲ್ಲ. ನಾನು ಯಾವಾಗಲೂ ನನ್ನ ಕೆಲಸದ ಮೇಲೆ ಗಮನ ಹರಿಸಿದ್ದೇನೆ ಮತ್ತು ಮುನ್ನಡೆದಿದ್ದೇನೆ ಎಂದು ಹೇಳಿರುವ ಯಾಮಿ ಗೌತಮ್, ಇಂದಿನ 'ಕ್ಲಿಕ್‌ಬೈಟ್' ಜಗತ್ತಿನಲ್ಲಿ, ಘನತೆಯುಳ್ಳ ಸೋಷಿಯಲ್ ಮೀಡಿಯಾ ಪೋರ್ಟಲ್‌ಗಳಿಗೂ ಸಹ ಇಂತಹ ವಿಷಯಗಳನ್ನು ದೊಡ್ಡದು ಮಾಡಿ 'ಗಾಸಿಪ್' ಆಗಿ ಬದಲಾಯಿಸುವ ಆಸೆಯಾಗುವುದು ಸಹಜ. ಆದರೆ, ಇದಕ್ಕಿಂತ ಉತ್ತಮವಾದ ಗೌರವ ಮತ್ತು ಘನತೆಯನ್ನು ನಾನು ಸಂಪಾದಿಸಿದ್ದೇನೆ ಎಂದು ಅವರು ಪರಿಗಣಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.

ನನ್ನ ಬಳಿ ಯಾವುದೇ ಪಿಆರ್ (PR) ತಂಡವಿಲ್ಲ. ಮನರಂಜನಾ ಪ್ರಶಸ್ತಿ ಸಮಾರಂಭಗಳ ಬಗ್ಗೆ ನನ್ನ ನಿಲುವನ್ನು ನಾನು ಬಹಳ ಹಿಂದೆಯೇ ಗೌರವಯುತವಾಗಿ ಸ್ಪಷ್ಟಪಡಿಸಿದ್ದೇನೆ ಎಂದು ಕೂಡ ಹೇಳಿರುವ ಯಾಮಿ ಗೌತಮ್ ನಾನು ಯಾವಾಗಲೂ ನನ್ನ ಕೆಲಸದ ಮೇಲೆ ಮಾತ್ರ ಗಮನ ಹರಿಸುತ್ತೇನೆ ಎಂದು ತಮ್ಮ ಬರಹವನ್ನು ಮುಗಿಸಿದ್ದಾರೆ, ಈ ಮೂಲಕ ವಿವಾದಕ್ಕೆ ಪೂರ್ಣ ವಿರಾಮ ಹಾಕುವ ಪ್ರಯತ್ನವನ್ನು ಮಾಡಿದ್ದಾರೆ ಯಾಮಿ ಗೌತಮ್.

More from Filmibeat

English summary
Did Yami Gautam troll Kriti Sanon’s National Award win? The "Article 370" star breaks her silence and clarifies the truth behind the controversial "like."
Read more about: kriti sanon yami gautham awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X