twitter
    For Quick Alerts
    ALLOW NOTIFICATIONS  
    For Daily Alerts

    ಮಕ್ಕಳನ್ನು ಸಿನಿಮಾ-ರಿಯಾಲಿಟಿ ಶೋಗಳಲ್ಲಿ ಬಳಸಿಕೊಳ್ಳಲು ಕಠಿಣ ನಿಯಮ

    |

    ಸಿನಿಮಾಗಳಲ್ಲಿ ನಾಯಕ, ನಾಯಕಿ, ಪೋಷಕ ನಟರು ಹೇಗೆ ಮುಖ್ಯವೋ ಬಾಲ ನಟರೂ ಅಷ್ಟೇ ಮುಖ್ಯ. ಬಾಲ ನಟರಿಲ್ಲದ ಸಿನಿಮಾಗಳು ಬಹಳ ಕಡಿಮೆ. ಕೆಲವು ದೃಶ್ಯಗಳಿಗಾದರೂ ಅವರು ಬೇಕೇ ಬೇಕು.

    ಆದರೆ ನಟ-ನಟಿಯರಿಗೆ, ಪೋಷಕ ನಟರಿಗೆ ಇರುವಂತೆ ಬಾಲ ನಟರಿಗೆ ಅವರ ಹಕ್ಕು ರಕ್ಷಣೆಗೆ ಇತರೆಗಳಿಗೆ ಒತ್ತಾಯಿಸಲು, ಹೋರಾಡಲು ತಮ್ಮದೇ ಆದ ಸಂಘ-ಸಂಸ್ಥೆಗಳಿಲ್ಲ. ಬಾಲ ನಟರನ್ನು ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಹೀಗೆಯೇ ಬಳಸಿಕೊಳ್ಳಬೇಕು ಎಂಬ ನಿಯಮಗಳೂ ಇಲ್ಲ.

    ಜೋಡಿ ನಂ.1 ರಿಯಾಲಿಟಿ ಶೋ: ಕಂಟೆಸ್ಟೆಂಟ್ ಪಟ್ಟಿ ಇಲ್ಲಿದೆ!ಜೋಡಿ ನಂ.1 ರಿಯಾಲಿಟಿ ಶೋ: ಕಂಟೆಸ್ಟೆಂಟ್ ಪಟ್ಟಿ ಇಲ್ಲಿದೆ!

    ಅದೇ ಕಾರಣಕ್ಕೆ ಕೆಲವು ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಮಕ್ಕಳಿಂದ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಿಸುವುದು, ಡ್ಯಾನ್ಸ್ ಹೆಸರಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡಿಸುವುದು, ಸ್ಕಿಟ್ ಹೆಸರಲ್ಲಿ ಕೆಲವೊಮ್ಮೆ ಅಸಭ್ಯ ಜೋಕುಗಳನ್ನು ಹೇಳಿಸುವುದು ಚಾಲ್ತಿಯಲ್ಲಿದೆ. ಆದರೆ ಇದೀಗ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಇಲಾಖೆಯು ಇಂಥಹುವಕ್ಕೆ ಅಂತ್ಯ ಹಾಡಲು ನಿಶ್ಚಯಿಸಿದ್ದು, ಅದಕ್ಕಾಗಿ ಕರಡು ನಿಯಮ ರೂಪಿಸಲಾಗಿದೆ.

    ಸಿನಿಮಾ, ಟಿವಿ ಶೋ, ರಿಯಾಲಿಟಿ ಶೋ, ಒಟಿಟಿ ಗಳಿಗಾಗಿ ಮಾಡಲಾಗುವ ಕಂಟೆಂಟ್‌ನಲ್ಲಿ ಮಕ್ಕಳ ಮೇಲೆ ದೈಹಿಕ, ಮಾನಸಿಕ ಒತ್ತಡ ಬೀಳದಂತೆ ಹಾಗೂ ಮಕ್ಕಳಿಗೆ ಅನುಕೂಲವಾಗುಂಥಹಾ ವಾತಾವರಣ ಸೃಷ್ಟಿಸುವಂತೆ. ಮಕ್ಕಳ ಹಕ್ಕುಗಳಿಗೆ ಅಡ್ಡಿಯಾಗದಂತೆ ನಡೆದುಕೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಇಲಾಖೆಯು ಸೂಚನೆ ನೀಡಿದೆ. ಜೊತೆಗೆ ಕೆಲವು ಕರಡು ನಿಯಮಗಳನ್ನು ಸಹ ರೂಪಿಸಿದೆ.

    ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು

    ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು

    ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಇಲಾಖೆಯು ಪ್ರಸ್ತಾವಿತ ನಿಯಂತ್ರಣ ಮಾನದಂಡಗಳ ಪ್ರಕಾರ, ನಿರ್ಮಾಪಕರು ಮಕ್ಕಳನ್ನು ಚಿತ್ರೀಕರಣದಲ್ಲಿ ಬಳಸಿಕೊಳ್ಳುವ ಮೊದಲು ಜಿಲ್ಲಾಧಿಕಾರಿಗಳ ಅನುಮೋದನೆಯನ್ನು ಪಡೆಯಬೇಕು ಮತ್ತು ಆ ಮಗುವು ನಿಂದನೆ ಅಥವಾ ಶೋಷಣೆಗೆ ಒಳಗಾಗದಂತೆ ತಡೆಯಲು ಅವರು ತೆಗೆದುಕೊಂಡ ಮುನ್ನೆಚ್ಚರಿಕೆಗಳ ಕುರಿತು ಲಿಖಿತ ಹೇಳಿಕೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು.

    ಅತಿಯಾದ ಲೈಟ್ಸ್, ರಾಸಾಯನಿಕ, ಕಠಿಣ ಮೇಕಪ್ ಬಳಸುವಂತಿಲ್ಲ

    ಅತಿಯಾದ ಲೈಟ್ಸ್, ರಾಸಾಯನಿಕ, ಕಠಿಣ ಮೇಕಪ್ ಬಳಸುವಂತಿಲ್ಲ

    ಮಕ್ಕಳನ್ನು ಯಾವುದೇ ಸನ್ನಿವೇಶಗಳಲ್ಲಿ ಬಳಸಿಕೊಳ್ಳುವ ಮುನ್ನ ಅವರ ವಯಸ್ಸು, ಪ್ರಬುದ್ಧತೆ, ಮಾನಸಿಕ ಬೆಳವಣಿಗೆ, ಸೂಕ್ಷ್ಮತೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಮಕ್ಕಳಿಗೆ ಸೂಕ್ತವಲ್ಲದ ದೃಶ್ಯಗಳಲ್ಲಿ ಅವರನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಬಾರದು. ಅಲ್ಲದೆ, ಮಕ್ಕಳನ್ನು ಚಿತ್ರೀಕರಣಕ್ಕೆ ಬಳಸಿಕೊಂಡಾಗ ಅವರ ಕಣ್ಣಿಗೆ, ದೇಹಕ್ಕೆ ಹಾನಿಯಾಗುವಂತೆ ಅತಿಯಾದ ಲೈಟ್ಸ್ ಉಪಯೋಗ ಮಾಡಬಾರದು, ರಾಸಾಯನಿಕಗಳ ಬಳಕೆ ಇರಬಾರದು, ಕಠಿಣವಾದ ಮೇಕಪ್‌ ಅನ್ನು ಮಕ್ಕಳಿಗೆ ಹಾಕಬಾರದು ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಇಲಾಖೆ ಹೇಳಿದೆ.

    ಸತತವಾಗಿ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ

    ಸತತವಾಗಿ ಮಕ್ಕಳನ್ನು ದುಡಿಸಿಕೊಳ್ಳುವಂತಿಲ್ಲ

    ಯಾವುದೇ ಮಗುವನ್ನು ಸತತವಾಗಿ 27 ದಿನಗಳ ಕಾಲ ಕೆಲಸಕ್ಕೆ ಬಳಸಿಕೊಳ್ಳುವಂತಿಲ್ಲ. ಹಾಗೂ ಮಕ್ಕಳಿಗೆ ದಿನದ ಒಂದು ಶಿಫ್ಟ್‌ನಲ್ಲಿ ಮಾತ್ರವೇ ಕೆಲಸ ಮಾಡಿಸತಕ್ಕದ್ದು, ಹಾಗೂ ಪ್ರತಿ ಮೂರು ಗಂಟೆಗೊಮ್ಮೆ ಬ್ರೇಕ್ ಖಡ್ಡಾಯವಾಗಿ ನೀಡ ಬೇಕು. ಹಾಗೂ ಯಾವುದೇ ಬಾಲ ನಟರಿಂದ ಸತತವಾಗಿ ಕೆಲಸಕ್ಕೆ ಬರುವಂತೆ ಅಥವಾ ಚಿತ್ರೀಕರಣಕ್ಕೆ ಬರುವುದಾಗಿ ಒಪ್ಪಂದ ಮಾಡಿಸಿಕೊಳ್ಳುವುದು ನಿಯಮ ಬಾಹಿರ.

    ಅಶ್ಲೀಲ ದೃಶ್ಯಗಳಲ್ಲಿ ಬಳಸಿಕೊಳ್ಳಬಾರದು

    ಅಶ್ಲೀಲ ದೃಶ್ಯಗಳಲ್ಲಿ ಬಳಸಿಕೊಳ್ಳಬಾರದು

    ಚಿತ್ರೀಕರಣದಲ್ಲಿ ಮಕ್ಕಳನ್ನು ಬಳಸಿಕೊಂಡಾಗ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವಂಥಹಾ ದೃಶ್ಯಗಳ ಚಿತ್ರೀಕರಣಕ್ಕೆ ಅವರನ್ನು ಬಳಸಿಕೊಳ್ಳುವಂತಿಲ್ಲ. ಕರಡು ಮಾನದಂಡಗಳ ಪ್ರಕಾರ, ಮಕ್ಕಳನ್ನು ಮದ್ಯಪಾನ ಮಾಡುವಂತೆ, ಧೂಮಪಾನ ಮಾಡುವಂತೆ, ಸಮಾಜ ವಿರೋಧಿ ವರ್ತನೆಯಲ್ಲಿ ತೊಡಗುವಂತೆ ಅಥವಾ ಯಾವುದೇ ಇತರ ಅಪರಾಧಿಕ ರೀತಿಯಲ್ಲಿ ವರ್ತಿಸುತ್ತಿರುವಂತೆ ಚಿತ್ರಿಸಬಾರದು ಹಾಗೂ ಯಾವುದೇ ಮಕ್ಕಳನ್ನು ಅಶ್ಲೀಲ ದೃಶ್ಯಗಳಲ್ಲಿ, ನಗ್ನತೆಯುಳ್ಳ ದೃಶ್ಯಗಳಲ್ಲಿ ಬಳಸಿಕೊಳ್ಳಬಾರದು ಹಾಗೂ ಮಕ್ಕಳನ್ನು ಸಹ ಭೋಗದ ವಸ್ತುಗಳ ರೀತಿಯಲ್ಲಿ ಗ್ಲಾಮರಸ್ ಆಗಿ ಚಿತ್ರಿಸಬಾರದು ಎಂದು ಸೂಚಿಸಲಾಗಿದೆ.

    ಸಂಭಾವನೆಯ 20% ಮಗುವಿನ ಹೆಸರಲ್ಲಿ ಎಫ್‌ಡಿ ಮಾಡಬೇಕು

    ಸಂಭಾವನೆಯ 20% ಮಗುವಿನ ಹೆಸರಲ್ಲಿ ಎಫ್‌ಡಿ ಮಾಡಬೇಕು

    ಚಿತ್ರೀಕರಣದಲ್ಲಿ ಭಾಗವಹಿಸಿರುವ ಮಕ್ಕಳ ಶಿಕ್ಷಣಕ್ಕೆ ಧಕ್ಕೆ ಆಗದಂತೆ ನಿರ್ಮಾಪಕರು ಕಾಳಜಿವಹಿಸಬೇಕು. ಒಂದೊಮ್ಮೆ ಚಿತ್ರೀಕರಣದಿಂದ ಮಕ್ಕಳು ಶಾಲೆ ವಂಚಿತವಾದರೆ, ನಿರ್ಮಾಪಕರೇ ಖಾಸಗಿ ಟ್ಯೂಟರ್ ಅನ್ನು ನೇಮಿಸಿ ಅವರಿಗೆ ಶಿಕ್ಷಣ ಒದಗಿಸಿಕೊಡಬೇಕು. ಬಾಲ ನಟ-ನಟಿ ಸಂಪಾದಿಸುವ ಒಬ್ಬ ಸಂಭಾವನೆಯ 20% ಹಣವನ್ನು ಮಗುವಿನ ಹೆಸರಲ್ಲಿ ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಎಫ್‌ಡಿ ಆಗಿ ಜಮೆ ಮಾಡಬೇಕು. ಆ ಹಣವನ್ನು ಮಗುವು ವಯಸ್ಕನಾದಾಗ ಬಳಸಿಕೊಳ್ಳುವಂತೆ ಎಫ್‌ಡಿ ಮಾಡಬೇಕು.

    English summary
    New guidelines issued by National commission for the child rights to use children in Tv, OTT, movie shooting etc.
    Saturday, June 25, 2022, 18:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X