twitter
    For Quick Alerts
    ALLOW NOTIFICATIONS  
    For Daily Alerts

    ಹೋಟೆಲ್ ವಿವಾದ: ಸೋನು ಸೂದ್‌ಗೆ ಹೊಸ ನೋಟಿಸ್

    |

    ಕೊರೊನಾ ಕಾಲದಲ್ಲಿ ನಟ ಸೋನು ಸೂದ್‌ ಮಾಡಿದ ಸಮಾಜ ಸೇವೆಯನ್ನು ಇಡೀಯ ದೇಶವೇ ಕೊಂಡಾಡಿತ್ತು. 'ವಲಸಿಗರ ಪಾಲಿನ ದೇವರು' ಎಂದೇ ಬಿರುದು ಪಡೆದುಕೊಂಡಿದ್ದರು ಸೋನು ಸೂದ್.

    ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕವೂ ತಾವು ಪ್ರಾರಂಭಿಸಿದ್ದ ಸೇವೆಯನ್ನು ನಿಲ್ಲಿಸಿಲ್ಲ ಸೋನು ಸೂದ್, ಈಗಲೂ ನೆರವು ಕೇಳಿ ತಮ್ಮನ್ನು ಸಂಪರ್ಕ ಮಾಡಿದವರಿಗೆ ಸಹಾಯ ಮಾಡುತ್ತಲೇ ಇದ್ದಾರೆ.

    ಇತರರಿಗೆ ಸಹಾಯ ಮಾಡುವ ಸೋನು ಸೂದ್‌ಗೆ ಈಗ ಸಂಕಷ್ಟ ಎದುರಾಗಿದೆ. ಸೋನು ಸೂದ್‌ ಅವರಿಗೆ ಸೇರಿದ ಮುಂಬೈನ ಆಸ್ತಿಯೊಂದರ ವಿಚಾರವಾಗಿ ಅವರಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆಯೂ ಇದೇ ವಿಚಾರವಾಗಿ ಸೋನು ಸೂದ್‌ಗೆ ನೊಟೀಸ್ ನೀಡಲಾಗಿತ್ತು.

    ಸೋನು ಸೂದ್‌ ಅವರು ಮುಂಬೈನಲ್ಲಿ ಹೋಟೆಲ್ ಒಂದನ್ನು ನಿರ್ಮಾಣ ಮಾಡಿದ್ದು, ಈ ಹೋಟೆಲ್ ನಿಯಮಗಳಿಗೆ ಅನುಗುಣವಾಗಿಲ್ಲವೆಂದು ಎಂದು ಮುಂಬೈ ಮಹಾನಗರ ಪಾಲಿಕೆ ನೊಟೀಸ್ ಜಾರಿ ಮಾಡಿತ್ತು. ಹೋಟೆಲ್‌ನ ಒಂದು ಭಾಗವನ್ನು ಒಡೆದು ಅದನ್ನು ಬದಲಾಯಿಸುವಂತೆ ತಿಳಿಸಲಾಗಿತ್ತು. ಅದರ ವಿರುದ್ಧ ಸೋನು ಸೂದ್ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮತ್ತೆ ಬಿಎಂಸಿಯು ನೊಟೀಸ್ ಜಾರಿ ಮಾಡಿದೆ.

    ಅನುಮತಿ ಪಡೆದಿದ್ದು ವಾಸದ ಮನೆಗಾಗಿ ನಿರ್ಮಿಸಿದ್ದ ಹೋಟೆಲ್!

    ಅನುಮತಿ ಪಡೆದಿದ್ದು ವಾಸದ ಮನೆಗಾಗಿ ನಿರ್ಮಿಸಿದ್ದ ಹೋಟೆಲ್!

    ಜುಹುನಲ್ಲಿರುವ ಹೋಟೆಲ್‌ ಅನ್ನು ವಾಸಿಸುವ ಮನೆಯನ್ನಾಗಿ ಪರಿವರ್ತಿಸಿಕೊಳ್ಳಬೇಕೆಂದು ಬಿಎಂಸಿ ನೀಡಿರುವ ಹೊಸ ನೊಟೀಸ್‌ನಲ್ಲಿ ಸೂಚಿಸಿದೆ. ಸೋನು ಸೂದ್ ಸ್ವತಃ ತಮ್ಮ ಹೋಟೆಲ್ ಕಟ್ಟಡವನ್ನು ವಾಸಸ್ಥಳವಾಗಿ ಬದಲಾವಣೆ ಮಾಡಿಕೊಳ್ಳುತ್ತೇನೆ ಎಂದು ಕಳೆದ ವರ್ಷ ಕೋರ್ಟ್‌ನಲ್ಲಿ ಹೇಳಿದ್ದರು. ಆದರೆ ಈ ವರೆಗೆ ಅದನ್ನು ಬದಲಾವಣೆ ಮಾಡಿಲ್ಲವಾದ್ದರಿಂದ ಈಗ ಹೊಸ ನೊಟೀಸ್ ನೀಡಲಾಗಿದೆ.

    ನೀವು ತಿಳಿಸಿದ್ದ ಬದಲಾವಣೆ ಮಾಡಿಲ್ಲ: ಬಿಎಂಸಿ

    ನೀವು ತಿಳಿಸಿದ್ದ ಬದಲಾವಣೆ ಮಾಡಿಲ್ಲ: ಬಿಎಂಸಿ

    ''ನಿಮ್ಮ 6 ಮಹಡಿಯ ಕಟ್ಟಡದ ಮೊದಲ ಮಹಡಿಯನ್ನು ವಾಸ ಸ್ಥಳವಾಗಿ ಬದಲಾಯಿಸುತ್ತೇವೆ ಎಂದೂ, ಲಾಡ್ಜಿಂಗ್ ಸೇವೆ ಬಂದ್ ಮಾಡುತ್ತೇವೆ ಎಂದು ನೀವು ಪತ್ರದಲ್ಲಿ ಹೇಳಿದ್ದಿರಿ. ಹಾಗೂ ಕಟ್ಟಡದಲ್ಲಿ ನಿಯಮದ ಪ್ರಕಾರ ಮಾಡಬೇಕಿದ್ದ ಬದಲಾವಣೆ ಕಾಮಗಾರಿಯನ್ನು ಪ್ರಾರಂಭ ಮಾಡುವುದಾಗಿ ಹೇಳಿದ್ದಿರಿ. ನಾವುಗಳು ಅಕ್ಟೋಬರ್ 20 ರಂದು ನಿಮ್ಮ ಹೋಟೆಲ್‌ಗೆ ಭೇಟಿ ನೀಡಿದ್ದೆವು. ನಮಗೆ ಯಾವುದೇ ಬದಲಾವಣೆಗಳು ಕಾಣಸಿಗಲಿಲ್ಲ'' ಎಂದು ಬಿಎಂಸಿ ಸೋನು ಸೂದ್‌ಗೆ ನೀಡಿರುವ ನೊಟೀಸ್‌ನಲ್ಲಿ ಹೇಳಿದೆ.

    ವಾಸಯೋಗ್ಯ ಮನೆಯಂತೆ ಬದಲಾಯಿಸಿದ್ದೇವೆ: ಸೋನು ಸೂದ್

    ವಾಸಯೋಗ್ಯ ಮನೆಯಂತೆ ಬದಲಾಯಿಸಿದ್ದೇವೆ: ಸೋನು ಸೂದ್

    ಇದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸೋನು ಸೂದ್, ''ಜುಹುನಲ್ಲಿರುವ ನನ್ನ ಶಕ್ತಿ ಸಾಗರ್ ಬಿಲ್ಡಿಂಗ್ ಅನ್ನು ಈಗಾಗಲೇ ವಾಸಯೋಗ್ಯ ಮನೆಯಂತೆ ಕನ್ವರ್ಟ್ ಮಾಡಿದ್ದೇವೆ. ನಿಯಮದ ಪ್ರಕಾರ ಕೆಲವು ಬದಲಾವಣೆಗಳನ್ನು ಸಹ ನಾವು ಈಗಾಗಲೇ ಮಾಡಿದ್ದೇವೆ. ಹಾಗೂ ಆ ಮಾಹಿತಿಯನ್ನು, ದಾಖಲೆಯನ್ನು ಬಿಎಂಸಿ ಜೊತೆಗೆ ನಾವು ಈಗಾಗಲೇ ಹಂಚಿಕೊಂಡಿದ್ದೇವೆ. ನಮಗೆ ಅನುಮತಿ ನೀಡಲಾಗಿರುವ ಯೋಜನೆಯಂತೆ ಆ ಕಟ್ಟಡವು ರೆಸಿಡೆನ್ಶಿಯಲ್ ಬಿಲ್ಡಿಂಗ್ ಆಗಿಯೇ ಇರಲಿದೆ'' ಎಂದಿದ್ದಾರೆ ಸೋನು ಸೂದ್.

    ಸೋನು ಸೂದ್‌ ಮೇಲೆ ಐಟಿ ರೇಡ್ ನಡೆದಿತ್ತು

    ಸೋನು ಸೂದ್‌ ಮೇಲೆ ಐಟಿ ರೇಡ್ ನಡೆದಿತ್ತು

    ಸೋನು ಸೂದ್‌ಗೆ ಇತ್ತೀಚೆಗೆ ಕೆಲವು ಸಂಕಷ್ಟಗಳು ಎದುರಾಗಿವೆ. ಕೆಲವು ತಿಂಗಳ ಹಿಂದಷ್ಟೆ ಸೋನು ಸೂದ್‌ ಮೇಲೆ ಐಟಿ ಇಲಾಖೆಗಳ ರೇಡ್ ನಡೆದಿತ್ತು. ಐಟಿ ಅಧಿಕಾರಿಗಳು ಸೋನು ಸೂದ್‌ರ ಮನೆ, ಕಚೇರಿ ಹಾಗೂ ಇನ್ನು ಕೆಲವು ಕಡೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. ಸೋನು ಸೂದ್‌ ಎಎಪಿ ಪಕ್ಷದ ಕಡೆಗೆ ಒಲವು ತೋರಿಸಿದ್ದಾರೆ ಎಂಬ ಕಾರಣಕ್ಕೆ ಹೀಗೆ ರೇಡ್ ಮಾಡಿ ಬ್ಲಾಕ್‌ಮೇಲ್ ರಾಜಕಾರಣ ಮಾಡಲಾಗುತ್ತಿದೆ ಎಂದು ಹಲವರು ಆರೋಪ ಮಾಡಿದರು. ಇದೀಗ ಸೋನು ಸೂದ್‌ ಪರೋಕ್ಷವಾಗಿ ರಾಜಕೀಯಕ್ಕೆ ಇಳಿಯುತ್ತಿದ್ದು, ಸೋನು ಸೂದ್, ತಮ್ಮ ಸಹೋದರಿಯನ್ನು ಪಂಜಾಬ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದ್ದಾರೆ. ಸಹೋದರಿಯ ಪರವಾಗಿ ಸೋನು ಸೂದ್ ಪ್ರಚಾರ ಮಾಡಲಿದ್ದಾರೆ.

    English summary
    New notice served to Sonu Sood regarding his Juhu's hotel building. But Sonu Sood said he have re constructed his building as per BMC rules.
    Monday, December 6, 2021, 21:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X