For Quick Alerts
  ALLOW NOTIFICATIONS  
  For Daily Alerts

  ಮದುವೆ ಬಳಿಕ ಭಾವನಾತ್ಮಕ ಪೋಸ್ಟ್ ಹಾಕಿದ ಅನಿಲ್ ಕಪೂರ್ ಪುತ್ರಿ

  |

  ಬಾಲಿವುಡ್ ಹಿರಿಯ ನಟಿ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ಮದುವೆ ಇತ್ತೀಚಿಗಷ್ಟೆ ಮುಂಬೈನಲ್ಲಿ ನಡೆದಿದೆ. ಆಗಸ್ಟ್ 14ರಂದು ಅನಿಲ್ ಕಪೂರ್ ಪುತ್ರಿ ರಿಯಾ ಮತ್ತು ಬಹುಕಾಲ ಗೆಳೆಯ ಕರಣ್ ಬೂಲಾನಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಮುಂಬೈನ ಜುಹಾ ನಿವಾಸದಲ್ಲಿ ಈ ವಿವಾಹ ನೆರವೇರಿದ್ದು, ಕೇವಲ ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಮಾತ್ರ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೀಗ ಮದುವೆ ಬಳಿಕ ತಮ್ಮ ಇನ್ಸ್ಟಾಗ್ರಾಂನಲ್ಲಿ ಅಧಿಕೃತಗೊಳಿಸಿರುವ ರಿಯಾ ಕಪೂರ್, ಫೋಟೋ ಹಂಚಿಕೊಳ್ಳುವುದರ ಜೊತೆ ಭಾವನಾತ್ಮಕವಾಗಿ ಪೋಸ್ಟ್ ಹಾಕಿದ್ದಾರೆ.

  ಶನಿವಾರವೇ ನಡೆಯಲಿದೆ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ಮದುವೆ?ಶನಿವಾರವೇ ನಡೆಯಲಿದೆ ಅನಿಲ್ ಕಪೂರ್ ಪುತ್ರಿ ರಿಯಾ ಕಪೂರ್ ಮದುವೆ?

  ಆಗಸ್ಟ್ 16 ರಂದು ರಿಯಾ ಮದುವೆ ಫೋಟೋ ಹಂಚಿಕೊಂಡು, ''12 ವರ್ಷಗಳ ನಂತರ, ನಾನು ನರ್ವಸ್ ಆಗಬಾರದಿತ್ತು. ಏಕೆಂದರೆ ನೀವು ನನ್ನ ಆತ್ಮೀಯ ಸ್ನೇಹಿತ ಮತ್ತು ಅತ್ಯುತ್ತಮ ವ್ಯಕ್ತಿ. ಆದರೆ ನಾನು ಅಳುತ್ತಿದ್ದೆ, ನಡುಗುತ್ತಿದ್ದೆ, ಹೊಟ್ಟೆ ಪೂರ್ತಿ ತಿರುಗಿತು. ಏಕೆಂದರೆ ಈ ಅನುಭವ ಇಷ್ಟು ವಿನಮ್ರವಾಗಿರುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಪ್ರತಿದಿನ ನನ್ನ ತಂದೆ-ತಾಯಿ ನಿದ್ರಿಸುವ ಮುನ್ನ ರಾತ್ರಿ 11 ಗಂಟೆಗೆ ಜುಹಾ ಮನೆಗೆ ಹಿಂತಿರುಗುವ ಹುಡುಗಿಯಾಗಿ ನಾನು ಯಾವಾಗಲೂ ಇರುತ್ತೇನೆ. ನಾನು ಎಷ್ಟು ಅದೃಷ್ಟಶಾಲಿ ಎಂದು ನನಗೆ ಇದುವರೆಗೂ ತಿಳಿದಿರಲಿಲ್ಲ. ಬಹುಶಃ ನಾವು ನಮ್ಮ ಕುಟುಂಬವನ್ನು ತುಂಬಾ ನಿಕಟವಾಗಿಸುತ್ತೇವೆ ಎಂದು ನಾನು ಭಾಸವಾಗುತ್ತಿದೆ'' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

  ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಮದುವೆ ಅತ್ಯಂತ ಸರಳವಾಗಿ ನಡೆದಿದ್ದು, ಮದುವೆ ಪೂರ್ವ ಕಾರ್ಯಕ್ರಮಗಳಾದ ಮೆಹಂದಿ, ಹಳದಿ, ಸಂಗೀತ್ ಯಾವುದು ಆಯೋಜಿಸಿಲ್ಲ ಎಂದು ತಿಳಿದು ಬಂದಿದೆ. ವಿವಾಹದ ಬಳಿಕ ಅನಿಲ್ ಕಪೂರ್ ಸಿಹಿ ಹಂಚಿ ಸಂಭ್ರಮಿಸಿದರು. ವಿವಾಹ ಕಾರ್ಯಕ್ರಮ ಮುಗಿದ ಮೇಲೆ ನವಜೋಡಿಗಳು ಜುಹಾ ನಿವಾಸದಿಂದ ಹೊರಟರು. ಮುಂದೆ ಓದಿ...

  ನಿರ್ಮಾಪಕಿ ರಿಯಾ ಕಪೂರ್

  ನಿರ್ಮಾಪಕಿ ರಿಯಾ ಕಪೂರ್

  ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಸುಮಾರು 13 ವರ್ಷದಿಂದ ಪರಿಚಯ ಹೊಂದಿದ್ದಾರೆ. ಸುಮಾರು ವರ್ಷದ ಸ್ನೇಹ ಈಗ ದಾಂಪತ್ಯಕ್ಕೆ ದಾರಿ ಮಾಡಿದೆ. 2010ರಲ್ಲಿ ಸೋನಮ್ ಕಪೂರ್ ನಟಿಸಿದ್ದ 'ಆಯಿಶಾ' ಚಿತ್ರ ನಿರ್ಮಾಣ ಮಾಡುವುದರ ಮೂಲಕ ರಿಯಾ ಕಪೂರ್ ಚೊಚ್ಚಲ ಬಾರಿಗೆ ನಿರ್ಮಾಪಕರಾಗಿ ಗುರುತಿಸಿಕೊಂಡರು. ಈ ಸಿನಿಮಾದಲ್ಲಿ ಕರಣ್ ಬೂಲಾನಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

  ಕಾಸ್ಟ್ಯೂಮ್ ಡಿಸೈನರ್ ರಿಯಾ

  ಕಾಸ್ಟ್ಯೂಮ್ ಡಿಸೈನರ್ ರಿಯಾ

  ವಿಶೇಷ ಅಂದ್ರೆ ಸೋನಮ್ ಕಪೂರ್ ಸ್ಟೈಲಿಶ್ ಲುಕ್‌ಗಳ ಹಿಂದೆ ಕೆಲಸ ಮಾಡಿದ್ದು ಇದೇ ರಿಯಾ ಕಪೂರ್. ವೃತ್ತಿಯಲ್ಲಿ ರಿಯಾ ಕಪೂರ್ ಫ್ಯಾಶನ್ ಡಿಸೈನರ್ ಸಹ ಹೌದು. ಆಯಿಶಾ, ಖೂಬ್ಸುರತ್ ಮತ್ತು ವೀರೆ ಡಿ ವೆಡ್ಡಿಂಗ್ ಚಿತ್ರಗಳಲ್ಲಿಯೂ ರಿಯಾ ಕಪೂರ್ ಸಹ ನಿರ್ಮಾಪಕರಾಗಿದ್ದರು. ಕರಣ್ ಬೂಲಾನಿ ಮೊದಲಿನಿಂದಲೂ ಅನಿಲ್ ಕಪೂರ್ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದಾರೆ. ಅನಿಲ್ ಕಪೂರ್ ನಟಿಸಿ ನೆಟ್‌ಪ್ಲಿಕ್ಸ್‌ನಲ್ಲಿ ಬಿಡುಗಡೆಯಾದ 'ಸೆಲೆಕ್ಷನ್ ಡೇ' ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದರು.

  ಸೈಫ್ ಅಲಿ ಖಾನ್ ಹುಟ್ಟುಹಬ್ಬ; ಪತ್ನಿ-ಮಗಳಿಂದ ಹೃದಯಸ್ಪರ್ಶಿ ವಿಶ್ಸೈಫ್ ಅಲಿ ಖಾನ್ ಹುಟ್ಟುಹಬ್ಬ; ಪತ್ನಿ-ಮಗಳಿಂದ ಹೃದಯಸ್ಪರ್ಶಿ ವಿಶ್

  ರಿಯಾ ಪ್ರೀತಿ ಬಗ್ಗೆ ಆಗಲೇ ಸುಳಿವು ಕೊಟ್ಟಿದ್ದ ಸೋನಮ್

  ರಿಯಾ ಪ್ರೀತಿ ಬಗ್ಗೆ ಆಗಲೇ ಸುಳಿವು ಕೊಟ್ಟಿದ್ದ ಸೋನಮ್

  2019ರಲ್ಲೇ ತನ್ನ ಸಹೋದರಿ ರಿಯಾ ಮತ್ತು ಕರಣ್ ಸಂಬಂಧವನ್ನು ಸೋನಮ್ ಕಪೂರ್ ಖಚಿತಪಡಿಸಿದ್ದರು. ಚಾಟ್ ಶೋವೊಂದರಲ್ಲಿ ಭಾಗಿಯಾಗಿದ್ದ ಸೋನಮ್, ''ರಿಯಾ ಮತ್ತು ಕರಣ್ ಇನ್ನೂ ಮದುವೆಯಾಗಿಲ್ಲ. ಸುಮಾರು 10 ವರ್ಷದಿಂದ ಪ್ರೀತಿಯಲ್ಲಿದ್ದಾರೆ. ಮದುವೆ ನಿಗದಿಯಾದಾಗ ಈ ಸುದ್ದಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅದು ನಮ್ಮ ಕುಟುಂಬಕ್ಕೆ ಸಂತಸದ ದಿನ. ಈ ವರ್ಷವಂತೂ ಮದುವೆ ಇಲ್ಲ. ಬಹುಶಃ ಆದಷ್ಟೂ ಬೇಗ ಅಧಿಕೃತ ಮಾಡಿಕೊಳ್ಳಲು ತಯಾರಾಗುತ್ತಿದ್ದಾರೆ'' ಎಂದು ಹೇಳಿದ್ದರು.

  2018ರಲ್ಲಿ ಸೋನಮ್ ಕಪೂರ್ ಮದುವೆ

  2018ರಲ್ಲಿ ಸೋನಮ್ ಕಪೂರ್ ಮದುವೆ

  2018ರ ಮೇ ತಿಂಗಳಲ್ಲಿ ಉದ್ಯಮಿ ಆನಂದ್ ಆಹುಜಾ ಜೊತೆ ಸೋನಮ್ ಕಪೂರ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಪತಿಯ ಜೊತೆ ಲಂಡನ್‌ನಲ್ಲಿ ನೆಲೆಸಿದ್ದ ಸೋನಂ 2020ರಿಂದಲೂ ಅಲ್ಲೆ ಉಳಿದುಕೊಂಡಿದ್ದರು. ಸಹೋದರಿಯ ಮದುವೆ ಕಾರಣ ಕಳೆದ ತಿಂಗಳಷ್ಟೇ ಮುಂಬೈಗೆ ಬಂದಿದ್ದಾರೆ.

  English summary
  Anil kapoor daughter Rhea Kapoor shares heartfelt note for Hubby Karan with first picture of their Wedding.
  Monday, August 16, 2021, 18:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X