ಗುಪ್ತಾಂಗ ಹೋಲುವ ಕೇಕ್ ಕತ್ತರಿಸಿ ಹಿಗ್ಗಾ-ಮುಗ್ಗಾ ಬೈಸಿಕೊಂಡ ನಟಿ
ಸಿನಿಮಾ ಮಂದಿಗೆ 2020 ಯಲ್ಲಿ ಗ್ರಹಚಾರ ಸರಿಯಿಲ್ಲ. ಶನಿ ಹೆಗಲೇರಿದಾಗ ಮೊದಲು ಬುದ್ಧಿ ಕೆಡುತ್ತದೆಯಂತೆ. ಸಿನಿಮಾ ಉದ್ಯಮದ ಕೆಲವರಿಗೆ ಹೀಗೆಯೇ ಆಗಿರುವಂತಿದೆ.
ಈಗಾಗಲೇ ಸಿನಿಮಾ ಉದ್ಯಮದ ಹಲವಾರು ಮಂದಿ ವಿವಾದಗಳಲ್ಲಿ ಸಿಲುಕಿ ಒದ್ದಾಡುತ್ತಿರುವಾಗ ನಟಿ ನಿಯಾ ಸಿಂಗ್ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಟಿವಿ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಿಯಾ ಸಿಂಗ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಅವರು ಕತ್ತರಿಸಿದ ಕೇಕ್ ಈಗ ಚರ್ಚೆಗೆ ಕಾರಣವಾಗಿದೆ.

ಪುರುಷರ ಗುಪ್ತಾಂಗ ಹೋಲುವ ಕೇಕ್!
ನಿಯಾ ತಮ್ಮ 30ನೇ ವರ್ಷದ ಹುಟ್ಟುಹಬ್ಬದ ಆಚರಿಸಿಕೊಂಡರು. ತಮ್ಮ ಆತ್ಮೀಯ ಗೆಳೆಯರೊಂದಿಗೆ ಪಾರ್ಟಿ ಸಹ ಮಾಡಿದ್ದರು. ಪಾರ್ಟಿಯನ್ನು ಅವರು ಕತ್ತರಿಸಿದ ಕೇಕ್ ಪುರುಷರ ಗುಪ್ತಾಂಗವನ್ನು ಹೋಲುತ್ತಿತ್ತು.

ಕೇಕ್‌ನ ಚಿತ್ರ ಹಂಚಿಕೊಂಡಿರುವ ನಟಿ
ತಾವು ಕೇಕ್ ಕಟ್ ಮಾಡಿದ ಚಿತ್ರ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಿಯಾ. ಗುಪ್ತಾಂಗ ಹೋಲುವ ಕೇಕ್ ಮಾಡಿದ ಚಿತ್ರವನ್ನು ಹಂಚಿಕೊಂಡಿದ್ದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸಹ್ಯವಾದ ಆಚರಣೆ ಎಂದು ಕರೆದಿದ್ದಾರೆ.

ತೀರಾ ಅಸಹ್ಯವಾಗಿದೆ ಕೇಕ್: ಪ್ರತಿಕ್ರಿಯೆ
ತೀರಾ ಅಸಹ್ಯಕರವಾದ ಆಚರಣೆ ಇದು, ನಿಮ್ಮ ಕೇಕ್ ಅತ್ಯಂತ ಅಸಹ್ಯವಾಗಿದೆ. ನಿಮ್ಮ ಮನಸ್ಥಿತಿಯನ್ನು ನಿಮ್ಮ ಈ ಹುಟ್ಟುಹಬ್ಬದ ಆಚರಣೆ ಹೇಳುತ್ತಿದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
Recommended Video

ನಟಿಯ ಉದ್ಧಟತನದ ಪ್ರತಿಕ್ರಿಯೆ
ಟ್ರೋಲ್‌ಗಳಿಗೆ ಪ್ರತಿಕ್ರಿಯೆಯಾಗಿ ಇಂದು ಮತ್ತೊಂದು ವಿಡಿಯೋ ಹಾಕಿರುವ ನಟಿ ನಿಯಾ, 'ಅಸಹ್ಯವಾಗಿರಲಿ, ಕೆಟ್ಟದಾಗಿರಲಿ, ಹೇಗಾದರೂ ಇರಲಿ, ಹುಟ್ಟುಹಬ್ಬ ಪ್ರತಿದಿನ ಬರುವುದಿಲ್ಲ. ಶಾಂತವಾಗಿ ಮುಂದಕ್ಕೆ ಹೋಗುತ್ತಿರಬೇಕಷ್ಟೆ' ಎಂದಿದ್ದಾರೆ. ಇದು ಉದ್ಧಟತನದ ಪ್ರತಿಕ್ರಿಯೆ ಎಂದಿದ್ದಾರೆ ಹಲವರು.


Click it and Unblock the Notifications











