For Quick Alerts
    ALLOW NOTIFICATIONS  
    For Daily Alerts

    ಅಬ್ಬಾ! ಪ್ರಿಯಾಂಕಾ ಹುಟ್ಟುಹಬ್ಬಕ್ಕೆ ಪತಿ ಗಿಫ್ಟ್ ಮಾಡಿದ ವೈನ್ ಬೆಲೆ ಇಷ್ಟೊಂದಾ?

    |

    ಭಾರತೀಯ ಸಿನಿಮಾರಂಗದಲ್ಲಿ ಮಿಂಚಿ, ಸೂಪರ್ ಸ್ಟಾರ್ ಆಗಿ ಮೆರೆದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಗ್ಲೋಬಲ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿಗಷ್ಟೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದೇಸಿ ಸ್ಟಾರ್‌ಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಹುಟ್ಟುಹಬ್ಬದ ಸುರಿಮಳೆಯೇ ಹರಿದುಬಂದಿದೆ.

    39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾಗೆ ಸಾಕಷ್ಟು ವಿಶೇಷ ಗಿಫ್ಟ್ ಗಳು ಸಿಕ್ಕಿದೆ. ಅದರಲ್ಲೂ ವಿಶೇಷವಾಗಿ ಪತಿ ನಿಕ್ ಜೋನಸ್ ನೀಡಿರುವ ಉಡುಗೊರೆ ಈಗ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಪ್ರೀತಿಯ ಪತ್ನಿ ಪ್ರಿಯಾಂಕಾಗಾಗಿ ನಿಕ್ ಜೋನಸ್ ದುಬಾರಿ ಬೆಲೆಯ ವೈನ್ ಬಾಟೆಲ್ ಗಿಫ್ಟ್ ಮಾಡಿದ್ದಾರೆ.

    ಪ್ರಿಯಾಂಕಾರಿಂದ ಸಾವಿರಾರು ಮೈಲಿ ದೂರದಲ್ಲಿದ್ದರೂ ನಿಕ್ ಪತ್ನಿಯ ಹುಟ್ಟುಹಬ್ಬವನ್ನು ವಿಶೇಷವಾಗಿಯೇ ಆಚರಿಸಿ, ಸಂಭ್ರಮವನ್ನು ಹೆಚ್ಚಿಸಿದ್ದಾರೆ. ನಿಕ್ ಅಮೆರಿಕದಲ್ಲಿ ನೆಲೆಸಿದ್ದರೆ ಪ್ರಿಯಾಂಕಾ ಸದ್ಯ ಲಂಡನ್ ನಲ್ಲಿದ್ದಾರೆ. ಕಳೆದ ಕೆಲವು ತಿಂಗಳಿಂದ ಪ್ರಿಯಾಂಕಾ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ಗಾಗಿ ಪ್ರಿಯಾಂಕಾ ಲಂಡನ್‌ನಲ್ಲಿ ನೆಲೆಸಿದ್ದಾರೆ. ಹಾಗಾಗಿ ದೂರದಿಂದನೇ ಪತ್ನಿ ಪ್ರಿಯಾಂಕಾಗೆ ವಿಶೇಷ ಗಿಫ್ಟ್ ನೀಡಿ ಹುಟ್ಟುಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

    ಅಷ್ಟೆಯಲ್ಲ ಪ್ರಿಯಾಂಕಾ ಅವರ ಸುಂದರ ಫೋಟೋವನ್ನು ಶೇರ್ ಮಾಡಿ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ಮೈ ಲವ್. ನೀವು ಜಗತ್ತಿನ ಎಲ್ಲಾ ಸಂತೋಷಕ್ಕೂ ಅರ್ಹರು. ಇವತ್ತು ಮತ್ತು ಪ್ರತಿದಿನ ನಾನು ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

    ಇದಕ್ಕೆ ಪ್ರತಿಯಾಗಿ ಪ್ರಿಯಾಂಕಾ ಕೂಡ ಪತಿ ನಿಕ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ನಿಕ್ ಉಡುಗೊರೆ ನೀಡಿದ ವೈನ್ ಬಾಟೆಲ್ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದಾರೆ. ಅಂದಹಾಗೆ ವೈನ್ ಬಾಟೆಲ್ ಎಲ್ಲರ ಗಮನ ಸೆಳೆಯುತ್ತಿದೆ. ಇದು ಅತ್ಯಂತ ದುಬಾರಿ ವೈನ್ ಆಗಿದೆ. 'ಚಾಟ್ಯೂ ಮೌಟನ್ ರೋಥ್ ಚಿಲ್ಡ್ 1982' ವೈನ್ ಇದು ತುಂಬಾ ಅಪರೂಪದ ವೈನ್ ಹೌದು.

    ಈ ವೈನ್ ಅನ್ನು ಫ್ರಾನ್ಸ್ ನ ಬೋರ್ಡೆಕ್ಸ್ ನಗರದ ಪೌಲಾಕ್ ಎಂಬ ಹಳ್ಳಿಯಲ್ಲಿ ತಯಾರಿಸಲಾಗುತ್ತದೆ. ಇದರ ಬೆಲೆ ಸುಮಾರು 10ರಿಂದ 13 ಲಕ್ಷ ರೂಪಾಯಿ. ಬೇರೆ ಬೇರೆ ದೇಶಗಳಲ್ಲಿ ವಿಭಿನ್ನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತೆ. ಅಪರೂಪದ ಮತ್ತು ದುಬಾರಿ ವೈನ್ ಅನ್ನು ಪತ್ನಿ ಪ್ರಿಯಾಂಕಾಗೆ ಗಿಫ್ಟ್ ನೀಡಿ ಅಚ್ಚರಿ ಮೂಡಿಸಿದ್ದಾರೆ.

    ಪ್ರಿಯಾಂಕಾ ಮತ್ತು ನಿಕ್ ಇಬ್ಬರು 2018ರಲ್ಲಿ ಹಸೆಮಣೆ ಏರಿದ್ದರು. ಭಾರತದ ಹಿಂದೂ ಸಂಪ್ರದಾಯದ ಪ್ರಕಾರ ಪ್ರಿಯಾಂಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಪಂಚೆಯುಟ್ಟು ಮಳೆಯನ್ನು ಲೆಕ್ಕಿಸದೆ ಭತ್ತದ ಪೈರು ನಾಟಿ ಮಾಡಿದ ರಕ್ಷಿತ್ | Filmibeat Kannada

    ಇನ್ನು ಪ್ರಿಯಾಂಕಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯ ಇಂಗ್ಲಿಷ್ ನ ಸಿಟಾಡೆಟ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಮ್ಯಟ್ರಿಕ್ಸ್, ಟೆಕ್ಸ್ಟ ಫಾರ್ ಯೂ ಗಳಲ್ಲಿಯೂ ನಟಿಸುತ್ತಿದ್ದಾರೆ. ಇನ್ನು ಬಾಲಿವುಡ್ ಸಿನಿಮಾಗಳ ಹೇಳುವುದಾದರೆ ಪ್ರಿಯಾಂಕಾ ಕೊನೆಯದಾಗಿ ವೈಟ್ ಟೈಗರ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಳಿಕ ಪ್ರಿಯಾಂಕಾ ಯಾವುದೇ ಹಿಂದಿ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಪ್ರಿಯಾಂಕಾ ಬಾಲಿವುಡ್ ಸಿನಿಮಾ ತುಂಬಾ ಕುತೂಹಲ ಮೂಡಿಸಿದೆ.

    English summary
    Nick Jonas Gifted Expensive Wine Bottle to Priyanka Chopra on her 39th Birthday; Here's how much it costs.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X