ನಿರ್ಮಾಪಕನ ಹಣೆಗೆ ಪಿಸ್ತೂಲ್ ಇಟ್ಟು ₹1,000,000 ವಸೂಲಿ ಮಾಡಿದ ನಟಿ, ಎಫ್‌ಐಆರ್ ದಾಖಲು
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಉದ್ದೇಶದಲ್ಲಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ.
ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುತ್ತಾರೆ. ಇನ್ನೂ ಕೆಲವರು ಕಾನೂನು.. ಪೊಲೀಸ್‌ರಿಗೆ ಕೂಡ ಭಯವನ್ನು ಪಡದೇ ನಿರ್ಭೀತಿಯಿಂದ ಅಪರಾಧ ಎಸಗುತ್ತಾರೆ. ಇದಕ್ಕೆ ''ನಿಖಿತಾ ಘಾಗ್'' ಸದ್ಯದ ಉದಾಹರಣೆ.

ಹೌದು, ನಿಖೀತಾ ಘಾಗ್.. ''ಬೆಕಾಬೂ 3''.. ''ಫುಹ್ ಸೆ ಫ್ಯಾಂಟಸಿ''.. ''ನಶಿಲಾ ಹುಸ್ನ್''.. ''ಗಂದಿ ಬಾತ್''.. ಹೀಗೆ ಬೋಲ್ಡ್ & ಬಿಂದಾಸ್ ವೆಬ್ ಸರಣಿಗಳಲ್ಲಿ ಆಕ್ಟ್ ಮಾಡಿರುವ ಚೆಲುವೆ. ''ಫ್ರೆಂಡ್‌ಶಿಪ್ ಬ್ಯಾಂಡ್'' ಎಂಬ ಮರಾಠಿ ಚಿತ್ರದಲ್ಲಿ ಕೂಡ ಇವರು ಅಭಿನಯಿಸಿದ್ದಾರೆ.
2024ರಲ್ಲಿ ತಮ್ಮ ''ಬೆತ್ತಲೆ'' ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಸಂಚಲನವನ್ನು ಸೃಷ್ಟಿಸಿದ್ದ ನಿಖಿತಾ ಕೇವಲ ನಟಿ ಮಾತ್ರವಲ್ಲ ಮಹರಾಷ್ಟ್ರದ ''ಬಿಜೆಪಿ''ಯ ಉಪಾಧ್ಯಕ್ಷೆ ಕೂಡ ಹೌದು. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಖುದ್ದು ಈ ವಿಚಾರವನ್ನು ನಿಖಿತಾ ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲ '''ರೋರ್ ಲೈಕ್ ಎ ಲಯನೆಸ್' ' ಎಂಬ ಪುಸ್ತಕವನ್ನು ಕೂಡ ಇವರು ಬರೆದಿದ್ದಾರೆ.
ಇಂಥಾ ನಿಖಿತಾ ಘಾಗ್ ಅವರ ವಿರುದ್ಧ ಸದ್ಯ ನಿರ್ಮಾಪಕರೊಬ್ಬರು ದೂರು ನೀಡಿದ್ದು ತಮ್ಮ ಕಚೇರಿಗೆ ಬಲವಂತವಾಗಿ ನುಗ್ಗಿ ನಿಖಿತಾ ₹10 ಲಕ್ಷ ಹಣ ದೋಚಿಕೊಂಡು ಹೋಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ 48 ವರ್ಷದ ನಿರ್ಮಾಪಕ ಕೃಷ್ಣಕುಮಾರ್ ವೀರ್ ಸಿಂಗ್ ಮೀನಾ ಅಲಿಯಾಸ್ ಕೆ.ಕುಮಾರ್, ನಿಖಿತಾ ಘಾಗ್ ತಮ್ಮ ಜೊತೆ 10-15 ಜನರನ್ನು ಕರೆದುಕೊಂಡು ಬಂದು ಅಂಧೇರಿ ಪಶ್ಚಿಮದಲ್ಲಿರುವ ನನ್ನ ಚಿತ್ರಲೇಖಾ ಹೆರಿಟೇಜ್ ಸ್ಟುಡಿಯೋಗೆ ನುಗ್ಗಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮೂರು ಗಂಟೆಗಳ ಕಾಲ ನನ್ನದೇ ಕಚೇರಿಯಲ್ಲಿ ನನ್ನನ್ನೂ ಒತ್ತೆಯಾಳಾಗಿ ಇರಿಸಲಾಗಿತ್ತು ಎಂದು ಹೇಳಿರುವ ನಿರ್ಮಾಪಕ ಕೃಷ್ಣಕುಮಾರ್, ನಿಖಿತಾ ಘಾಗ್ ಅವರ ಜೊತೆ ಇದ್ದ ವ್ಯಕ್ತಿಯೊಬ್ಬ ತನ್ನನ್ನು ವಿವೇಕ್ ಜಗತಾಪ್ ಎಂದು ಪರಿಚಯ ಮಾಡಿಕೊಂಡು ಪಿಸ್ತೂಲ್‌ದಿಂದ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
₹25 ಲಕ್ಷ ಹಣಕ್ಕೆ ಅವರು ಆರಂಭದಲ್ಲಿ ಬೇಡಿಕೆ ಇಟ್ಟಿದ್ದರು ನಾನು ಹಣ ಕೊಡಲು ನಿರಾಕರಿಸಿದಾಗ ನನ್ನನ್ನು ಥಳಿಸಿ ಚಾಕು ಕೂಡ ನನಗೆ ತೋರಿಸಿದರು ಎಂದು ಹೇಳಿರುವ ಕೃಷ್ಣಕುಮಾರ್ ಪ್ರಾಣಭಯದಿಂದ ನಾನು ₹10 ಲಕ್ಷ ಹಣವನ್ನು ನಾನು ಅವರಿಗೆ ಆನ್‌ಲೈನ್ ಮೂಲಕ ವರ್ಗಾಯಿಸಿದೆ ಎಂದು ಹೇಳಿದ್ದಾರೆ.
ಹಣ ನೀಡಿದ ನಂತರ ಮುಂದಿನ ಚಿತ್ರಕ್ಕೆ ನಿಖಿತಾ ನಾಯಕಿಯಾಗಿದ್ದಾರೆ ಈ ಹಿನ್ನೆಲೆ ಅವರಿಗೆ ಮುಂಗಡ ಹಣವನ್ನು ನೀಡಲಾಗಿದೆ ಎಂದು ನಮೂದಿಸುವಂತೆ ಇಮೇಲ್‌ನ್ನೂ ಕೂಡ ಬಲವಂತದಿಂದ ಬರೆಸಿಕೊಂಡಿರುವ ನಿಖಿತಾ ಆಂಡ್ ಗ್ಯಾಂಗ್ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಪರಿಣಾಮವನ್ನು ಎದುರಿಸಬೇಕಾಗುತ್ತೆಎಂದು ನನಗೆ ಬೆದರಿಕೆಯನ್ನು ಕೂಡ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ಕೃಷ್ಣಕುಮಾರ್ ನೀಡಿದ್ದ ದೂರನ್ನು ಸ್ವೀಕರಿಸಿರುವ ಪೊಲೀಸರು ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಖಿತಾ ಘಾಗ್ ಮತ್ತು ಅವರ ಸಹಚರರನ್ನು ಹುಡುಕುತ್ತಿದ್ದಾರೆ.


Click it and Unblock the Notifications











