ರವಿಶಾಸ್ತ್ರಿ ಜೊತೆ ಡೇಟಿಂಗ್: ನಿಮ್ರತ್ ಕೌರ್ ಕೊಟ್ಟ ಸ್ಪಷ್ಟನೆ ಏನು.?

By Harshitha

ಬಾಲಿವುಡ್ ಗಲ್ಲಿ ಗಲ್ಲಿಗಳಲ್ಲಿ ನಿನ್ನೆ ಒಂದೇ ಸುದ್ದಿಯ ಸದ್ದು. ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರಿ ಬಾಲಿವುಡ್ ನಟಿ ನಿಮ್ರತ್ ಕೌರ್ ರನ್ನ ಡೇಟಿಂಗ್ ಮಾಡ್ತಿದ್ದಾರಂತೆ ಎಂಬ ಗುಸುಗುಸು ಬಿಟೌನ್ ನ ಮೂಲೆ ಮೂಲೆಯಲ್ಲೂ ಕೇಳಿ ಬಂದಿತ್ತು.

56 ವರ್ಷ ವಯಸ್ಸಿನ ರವಿಶಾಸ್ತ್ರಿ 36 ವರ್ಷದ ನಟಿ ನಿಮ್ರತ್ ಕೌರ್ ರನ್ನ ಪ್ರೀತಿಸುತ್ತಿದ್ದಾರೆ, ಎರಡು ವರ್ಷಗಳಿಂದ ಇಬ್ಬರೂ ಆತ್ಮೀಯವಾಗಿದ್ದಾರೆ. ಪತ್ನಿಯಿಂದ ದೂರ ಆಗಿರುವ ರವಿಶಾಸ್ತ್ರಿ, ನಿಮ್ರತ್ ಕೌರ್ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ ಎನ್ನಲಾಗಿತ್ತು.

ಕಾಡ್ಗಿಚ್ಚಿನಂತೆ ಹಬ್ಬಿದ ಈ ಗಾಸಿಪ್ ನಟಿ ನಿಮ್ರತ್ ಕೌರ್ ಕಿವಿಗೂ ಬಿದ್ದಿದೆ. ಹೀಗಾಗಿ, ಈ ಬಗ್ಗೆ ಆಕೆ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

Nimrat Kaur clarifies about her dating gossip with Ravi Shastri

''ನನಗೆ ರೂಟ್ ಕೆನಾಲ್ ಬೇಕಾಗಬಹುದು ಎಂಬುದಷ್ಟೇ ಸದ್ಯದ ವಾಸ್ತವ. ಅದನ್ನ ಬಿಟ್ಟು ನನ್ನ ಬಗ್ಗೆ ಕೇಳಿಬರುತ್ತಿರುವ ಸುದ್ದಿಯೆಲ್ಲಾ ಸುಳ್ಳು. ಈ ಸುಳ್ಳು ಸುದ್ದಿಗಳು ಮನಸ್ಸಿಗೆ ತುಂಬಾ ಬೇಸರ ಉಂಟು ಮಾಡುತ್ತೆ'' ಎಂದು ನಟಿ ನಿಮ್ರತ್ ಕೌರ್ ಟ್ವೀಟ್ ಮಾಡಿದ್ದಾರೆ.

ಅಲ್ಲಿಗೆ, ರವಿಶಾಸ್ತ್ರಿ ಜೊತೆಗಿನ ತಮ್ಮ ಗಾಸಿಪ್ ನ ನಿಮ್ರತ್ ಕೌರ್ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಸೆಲೆಬ್ರಿಟಿ ಲೈಫ್ ಅಂದ್ಮೇಲೆ ಗಾಸಿಪ್ ಗಳು ಮಾಮೂಲು ಬಿಡಿ.

ಅಂದ್ಹಾಗೆ, 'ಏರ್ ಲಿಫ್ಟ್' ಚಿತ್ರದಲ್ಲಿ ಮಿಂಚಿದ್ದ ನಿಮ್ರತ್ ಕೌರ್ ಸದ್ಯ ವೆಬ್ ಸೀರೀಸ್ ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Nimrat Kaur has taken her twitter account to clarify about her dating gossip with Ravi Shastri.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X