''ಬಾಲಿವುಡ್‌''ನ ಕರಾಳ ''ಸತ್ಯ''ವನ್ನ ಹೇಳಿದ ''ನಿನ್ನಿಂದಲೇ'' ನಾಯಕಿ ; ಕರೆದು ಏನ್ಮಾಡಿದರು ಗೊತ್ತಾ..?

ಇದು ಬಣ್ಣದ ಲೋಕ. ''ದೂರದ ಬೆಟ್ಟ ಕಣ್ಣಿಗೆ ನುಣ್ಣ''ಗೆ ಅನ್ನುವಂತೆ, ಹೊರಗಡೆಯಿಂದ ಈ ಲೋಕ ತುಂಬಾನೇ ''ಕಲರ್ ಫುಲ್'' ಆಗಿ ಕಾಣುತ್ತೆ. ಆದರೆ .. ಅದರ ಒಳಹೊಕ್ಕಾಗಲೇ ''ಬಣ್ಣ ಅಸಲಿ ಅಲ್ಲ ನಕಲಿ'' ಅನ್ನುವುದು ಮನದಟ್ಟಾಗುತ್ತೆ. ''ಮುಖವಾಡ''ದ ಬದುಕು ಎಷ್ಟೊಂದು ವಿಚಿತ್ರ ಎಂದು ಅನಸುತ್ತೆ. ''ಎರಿಕಾ ಫರ್ನಾಂಡಿಸ್'' ಗೆ ಇಂಥಹದ್ದೇ ಒಂದು ಅನುಭವ ಆಗಿದೆ.

ಹೌದು, ''ಎರಿಕಾ ಫರ್ನಾಂಡಿಸ್''.. ಗೊತ್ತಲ್ವಾ..? ''ಪುನೀತ್ ರಾಜ್ ಕುಮಾರ್'' ಅಭಿನಯದ ''ನಿನ್ನಿಂದಲೇ'' ಚಿತ್ರದ ಮೂಲಕ, ''ಕನ್ನಡ ಚಿತ್ರರಂಗ''ಕ್ಕೆ ಬಂದಿದ್ದ ''ಮಂಗ್ಳೂರ್ ಮೀನು''. ''ನಿನ್ನಿಂದಲೇ'' ಚಿತ್ರಕ್ಕೂ ಮುನ್ನ ''ತಮಿಳು ಚಿತ್ರ''ವೊಂದರಲ್ಲಿ ನಟಿಸಿದ್ದ ಎರಿಕಾ, ನಿನ್ನಿಂದಲೇ ನಂತರ ಸೀದಾ ''ಮುಂಬೈನ ಪ್ಲೈಟ್'' ಹತ್ತಿದ್ದರು. ''ಬಬ್ಲೂ ಹ್ಯಾಪಿ ಹೈ'' ಚಿತ್ರದಲ್ಲಿ ನಾಯಕಿ ಪಾತ್ರವನ್ನ ನಿರ್ವಹಿಸಿದರು. ವಿಶೇಷ ಅಂದರೆ ಎರಿಕಾ ಫರ್ನಾಂಡಿಸ್ ಬದುಕಿನಲ್ಲಿ ಇದೆಲ್ಲವೂ ಘಟಿಸಿದ್ದು ಕೇವಲ ''ಒಂದೇ ವರ್ಷದಲ್ಲಿ''.

Ninnindale fame actress Erica Fernandes reveals dark secrets of bollywood

ಒಂದೇ ವರ್ಷದಲ್ಲಿ ''ತಮಿಳು, ಕನ್ನಡ ಹಾಗೂ ಹಿಂದಿ''ಯಲ್ಲಿ ನಟಿಸಿದ್ದ ಎರಿಕಾ ಫರ್ನಾಂಡಿಸ್ ಅವರನ್ನ ಇನ್ನೂ ತಡೆದು ನಿಲ್ಲಿಸುವವರು ಯಾರು ಇಲ್ಲ ಎಂದೇ ಎಲ್ಲರು ಅಂದುಕೊಂಡಿದ್ದರು. ಎರಿಕಾ ಅವರಲ್ಲಿಯೂ ಕೇವಲ ಒಂದೇ ವರ್ಷದಲ್ಲಿ ಮೂರು ಭಾಷೆಯಲ್ಲಿ ಬಣ್ಣ ಹಚ್ಚಿದ ಸಂಭ್ರಮವೂ ಇತ್ತು. 2014ರಲ್ಲಿ ಈ ಸಂಭ್ರಮ ಇನ್ನೂ ದುಪ್ಪಟ್ಟಾಗಿತ್ತು. ಯಾಕೆಂದರೆ 2014ರಲ್ಲಿ ಕೂಡ ಎರಿಕಾ ಮೂರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷ ಅಂದರೆ ಆ ಮೂರರಲ್ಲಿ ಒಂದು ''ತಮಿಳು'' ಚಿತ್ರವಾದರೆ, ಮಿಕ್ಕ ಎರಡು ''ತೆಲುಗು'' ಸಿನಿಮಾಗಳಾಗಿದ್ದವು.

ಆದರೆ ಆ ನಂತರ ಏನಾಯಿತೋ ಗೊತ್ತಿಲ್ಲ. ''ಬೆಳ್ಳಿ ಪರದೆ''ಯ ಮೇಲೆ ಮಿಂಚಬೇಕಿದ್ದ ಎರಿಕಾ ಫರ್ನಾಂಡಿಸ್ ಏಕಾಏಕಿ ''ಕಾಣೆಯಾದರು''. ಎಲ್ಲಿ ಹೋದರು ಎಂದು ಎಲ್ಲರೂ ಹುಡುಕುವ ಸಂದರ್ಭದಲ್ಲಿ ಇವರು ಕಂಡಿದ್ದು ''ಕಿರುತೆರೆ''ಯಲ್ಲಿ. ''ಚಿತ್ರರಂಗ''ದಲ್ಲಿ ''ನಾಯಕಿ''ಯಾಗುವ ಎಲ್ಲ ಅರ್ಹತೆ ಹಾಗೂ ಯೋಗ್ಯತೆಯನ್ನ ಹೊಂದಿರುವ ಎರಿಕಾ ಅವರನ್ನ ತಮ್ಮ ಮನೆಯಲ್ಲಿ ಕಂಡ ಅನೇಕರು, ನಿಜಕ್ಕೂ ಆಗ ಅಚ್ಚರಿಗೊಳಗಾಗಿದ್ದರು. ''ಹಿರಿತೆರೆ'' ಬಿಟ್ಟು ''ಕಿರುತೆರೆ''ಯಲ್ಲಿ ಏನ್ಮಾಡ್ತಿದ್ದೀರಾ ನೀವು..? ಎಂದು ''ಪ್ರಶ್ನೆ''ಯನ್ನೂ ಕೇಳಿದ್ದರು. ಆ ಪ್ರಶ್ನೆಗಳಿಗೆ ಎರಿಕಾ ಫರ್ನಾಂಡಿಸ್ ಈಗ ''ಉತ್ತರ'' ಕೊಟ್ಟಿದ್ದಾರೆ. ಬದುಕು ಹಳಿ ತಪ್ಪಿದ್ಹೇಗೆ..? ತಪ್ಪಲು ಕಾರಣ ಏನು ಅನ್ನುವುದನ್ನ ವಿವರಿಸಿದ್ದಾರೆ. ''ಬಾಲಿವುಡ್'' ನ ಇನ್ನೊಂದು ''ಮುಖ'' ಕಂಡು ಬೆಚ್ಚಿ ಬಿದ್ದಿದ್ದೆ ಅಂದಿದ್ದಾರೆ.

ಹೌದು, ಸಂದರ್ಶನವೊಂದರಲ್ಲಿ ಎರಿಕಾ ತಮ್ಮ ''ಮನದ ನೋವನ್ನ'' ಹಂಚಿಕೊಂಡಿದ್ದಾರೆ. ''ಬಾಲಿವುಡ್ ನಲ್ಲಿ ನೆಲೆಯೂರ''ಬೇಕೆಂಬ ಕನಸನ್ನೊತ್ತು, ''ಮುಂಬೈ''ನಲ್ಲಿ ನಾನು ಸಾಕಷ್ಟು ''ಅಲೆದಾಡಿದ್ದೆ'', ಅನೇಕ ಕಡೆ ''ಆಡಿಷನ್'' ಗಳನ್ನೂ ಕೂಡ ಕೊಟ್ಟು ಬಂದಿದ್ದೆ ಎಂದು ಎರಿಕಾ ಹೇಳಿದ್ದಾರೆ.

ಇನ್ನೂ ಆಡಿಷನ್ ಕೊಟ್ಟ ನಂತರ ನನ್ನ ''ಅಭಿನಯ''ದಿಂದ ಪ್ರಭಾವಕ್ಕೊಳಗಾದ ಅನೇಕ ನಿರ್ದೇಶಕರು ನಮ್ಮ ಚಿತ್ರಕ್ಕೆ ''ನೀವೇ ನಾಯಕಿ'' ಎಂಬ ಆಶ್ವಾಸನೆಯನ್ನೂ ಕೊಟ್ಟು ಕಳಿಸಿದ್ದರು. ಆದರೆ ಆ ನಂತರ ಕೇಳಿದಾಗ ನಿಮ್ಮ ಬದಲು ''ಸ್ಟಾರ್ ಹೀರೋಯಿನ್'' ನ ಆಯ್ಕೆ ಮಾಡಿಕೊಂಡಿದ್ದೇವೆ ಎಂದರು. ಇನ್ನೂ ಹಲವರು ''ಸ್ಟಾರ್ ಕಿಡ್'' ಗಳಿಗೆ ಮಣೆಯನ್ನೂ ಹಾಕಿದರು. ಯಾರು ಏನೇ ಹೇಳಲಿ ಚಿತ್ರರಂಗದಲ್ಲಿ ''ಸ್ವಜನಪಕ್ಷಪಾತ'' ಇದ್ದೇ ಇದೆ ಎಂದು ಬಿಕ್ಕಿದ್ದಾರೆ ಎರಿಕಾ ಫರ್ನಾಂಡಿಸ್.

Ninnindale fame actress Erica Fernandes reveals dark secrets of bollywood

ಇನ್ನೂ.. ಇದೇ ಸಮಯದಲ್ಲಿ ತನ್ನನ್ನ ಆಡಿಕೊಂಡವರ ಬಗ್ಗೆಯೂ ಎರಿಕಾ ಮಾತನಾಡಿದ್ದಾರೆ. ಅನೇಕರು ನನ್ನ ''ದೇಹದ ಆಕಾರ''ದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ನೋಡಲು ''ಒಣ ಕಡ್ಡಿ''ಯಂತೆ ಇರುವ ನೀನು ನಾಯಕಿನಾ..? ಎಂದು ಕಿಂಡಲ್ ಮಾಡಿದರು. ನನ್ನ ''ಎತ್ತರ''ವನ್ನ ಅಣುಕಿಸಿದರು. ಇದೆಲ್ಲದರ ಪರಿಣಾಮ ಕೆಲ ದಿನ ನಾನು ''ಮಾನಸಿಕ ಖಿನ್ನತೆ''ಗೆ ಒಳಗಾಗಿದ್ದೆ ಎಂದು ಕಣ್ಣೀರಿಟ್ಟಿದ್ದಾರೆ ಎರಿಕಾ ಫರ್ನಾಂಡಿಸ್.

ಕೇವಲ ''ಬಾಲಿವುಡ್'' ನವರ ''ಜಾತಕ''ವನ್ನಷ್ಟೇ ಎರಿಕಾ ಬಯಲು ಮಾಡಿಲ್ಲ. ''ದಕ್ಷಿಣ ಭಾರತೀಯ ಚಿತ್ರರಂಗ''ದಲ್ಲಿ ತನಗಾದ ಕೆಟ್ಟ ''ಅನುಭವ''ವನ್ನೂ ಕೂಡ ಎರಿಕಾ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ''ದಕ್ಷಿಣದ ಚಿತ್ರ''ವೊಂದಕ್ಕೆ ನಾನು ''ನಾಯಕಿ''ಯಾಗಿ ಆಯ್ಕೆಯಾಗಿದ್ದೆ, ''ಎರಡು ದಿನ''ಗಳ ಕಾಲ ''ಚಿತ್ರೀಕರಣ'' ಕೂಡ ನಡೆದಿತ್ತು. ಆದರೆ ಆ ನಂತರ ಹೇಳದೇ ಕೇಳದೇ ಆ ಚಿತ್ರದಿಂದ ನನ್ನನ್ನೂ ''ತೆಗೆದು ಹಾಕಲಾಯಿತು''. ಪತ್ರಕರ್ತರೊಬ್ಬರು ಕರೆ ಮಾಡಿದಾಗ್ಲೇ ನಾನು ಚಿತ್ರದಲ್ಲಿ ಇಲ್ಲ ಎನ್ನುವ ವಿಚಾರ ನನಗೆ ಗೊತ್ತಾಗಿತ್ತು ಅಂದಿದ್ದಾರೆ ಎರಿಕಾ ಫರ್ನಾಂಡಿಸ್.

ಇಷ್ಟೆಲ್ಲ ಅಡೆ, ತಡೆ, ನೋವು, ಅವಮಾನಗಳನ್ನ ಎದುರಿಸಿದ ಎರಿಕಾ ಕೊನೆಯದಾಗಿ ''ಕಿರುತೆರೆ''ಗೆ ಕಾಲಿಡುವ ಮನಸು ಮಾಡಿದರು. ಯಾಕೆಂದರೆ ಖುದ್ದು ಎರಿಕಾ ಹೇಳಿದಂತೆ, ತಲ್ಲಣ ಸೃಷ್ಟಿಯಾಗಿತ್ತು. ಬದುಕಿನ ಅನಿವಾರ್ಯತೆ ಮನಸ್ಥಿತಿಯನ್ನ ಬದಲಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ತನ್ನನ್ನ ತಾನು ಎರಿಕಾ ಸಾಬೀತು ಮಾಡಿಕೊಳ್ಳಬೇಕಿತ್ತು. ಈ ಕಾರಣಕ್ಕೆ ಕಿರುತೆರೆಗೆ ಕಾಲಿಡಲು ನಿರ್ಧಾರ ಮಾಡಿದೆ ಎಂದಿರುವ ಎರಿಕಾ ಸದ್ಯಕ್ಕೆ ''ಸ್ಮಾಲ್ ಸ್ಕ್ರೀನ್'' ನಲ್ಲಿ ನಾನು ''ಹ್ಯಾಪಿ''ಯಾಗಿದ್ದೇನೆ ಎಂದಿದ್ದಾರೆ. ವೆಬ್ ಸರಣಿಗಳಲ್ಲಿ ಅವಕಾಶಗಳು ಸಿಗುತ್ತಿವೆ ಅಷ್ಟೇ ಸಾಕು ಎಂದು ಹೇಳಿದ್ದಾರೆ. ಅಮಾನಗಳಿಂದ ನಾನು ಇನ್ನಷ್ಟು ಗಟ್ಟಿಯಾಗಿದ್ದೇನೆ ಎಂದಿದ್ದಾರೆ ಎರಿಕಾ ಫರ್ನಾಂಡಿಸ್

Ninnindale fame actress Erica Fernandes reveals dark secrets of bollywood

ಒಟ್ನಲ್ಲಿ ನಾಯಕಿಯರು ದಪ್ಪ ಇದ್ದರೂ ಕಷ್ಟ. ಸಣ್ಣ ಇದ್ದರೂ ಕಷ್ಟ. ಕುಳ್ಳಗಿದ್ದರು ತಪ್ಪು. ಎತ್ತರ ಇದ್ದರೂ ತಪ್ಪು ಎಂಬ ಮನಸ್ಥಿತಿಗೆ ಎರಿಕಾ ಫರ್ನಾಂಡಿಸ್ ಕೈ ಗನ್ನಡಿ ಹಿಡಿದಿದ್ದಾರೆ. ಇನ್ನೂ ''ಸ್ವಜನ ಪಕ್ಷಪಾತ'' ಅವತ್ತು ಇತ್ತು. ಇವತ್ತು ಇದೆ. ಪ್ರಾಯಶಃ ಮುಂದೆಯೂ ಇರಲಿದೆ. ಎರಿಕಾ ಹೇಳಿರುವಂತೆ ''ನೆಪೋಟಿಸಂ''ಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ವಿರುದ್ಧ ದಿಕ್ಕಿನಲ್ಲಿ ಈಜಿ ದಡ ತಲುಪಲು ಕೂಡ ಎಲ್ಲರಿಂದ ಸಾಧ್ಯ ಇಲ್ಲ.

More from Filmibeat

English summary
In an recent interview Kannada film Ninnindale fame actress Erica Fernandes reveals dark secrets of bollywood. says i was replaced in Bollywood films by ‘known face’s child’
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X