ಮೈಸೂರಲ್ಲಿ ಇಲ್ಲ, ಮನೆಯಲ್ಲಿ ಇಲ್ಲ, ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿ ಹೋದರು ನಿವೇದಿತಾ ಗೌಡ..?
ಕಳೆದ ಒಂದು ವರ್ಷಗಳಿಂದ ವಿಚ್ಛೇದನದ ವಿಚಾರದಲ್ಲಿ ಯೋಚನೆ ಮಾಡಿ ಕೊನೆಗೂ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ದೂರವಾಗಿದ್ದಾರೆ. ಜೂನ್ 06ರಂದು ಗುರುವಾರ ವಿಚ್ಛೇದನಕ್ಕಾಗಿ ಶಾಂತಿನಗರದ ಫ್ಯಾಮಿಲಿ ಕೋರ್ಟ್‌ಗೆ ತೆರಳಿ ವಿಚ್ಛೇದನವನ್ನು ಪಡೆದಿದ್ದಾರೆ. ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ಕಹಿ ಸುದ್ದಿಯನ್ನ ತಮ್ಮೆಲ್ಲ ಹಿತೈಷಿಗಳಿಗೆ ಮತ್ತು ಅಭಿಮಾನಿಗಳಿಗೆ ತಿಳಿಸಿ ತಮ್ಮ ಖಾಸಗಿ ಜೀವನ ಗೌರವಿಸುವಂತೆ ಮನವಿ ಮಾಡಿದ್ದಾರೆ
ಆದರೆ..ಆಳಿಗೊಂದು ಕಲ್ಲು ಎಂಬಂತೆ, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮನವಿಯನ್ನ ಮಾಡಿಕೊಂಡರು ಇವರಿಬ್ಬರ ಕುರಿತ ಚರ್ಚೆ ಇನ್ನೂ ಕಡಿಮೆಯಾಗಿಲ್ಲ. ಬದಲಿಗೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿವಾಹ ವಿಚ್ಚೇದನ ಸುದ್ದಿ ಚಂದನವನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕರುನಾಡಿನೆಲ್ಲೆಡೆ ಚರ್ಚೆಗೀಡಾಗುತ್ತಿದೆ. ದಿನಕ್ಕೊಂದು ಸುದ್ದಿ.. ದಿನಕ್ಕೊಂದು ಮಾತು.. ಕುಂತರೂ ನಿಂತರೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಸಂಸಾರದ ಕಥೆಯನ್ನೇ ಬಹುತೇಕರು ಮಾತನಾಡುತ್ತಿದ್ದಾರೆ.

ಇದೆಲ್ಲದರ ನಡುವೆ ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಸುದ್ದಿ ವೈರಲ್ ಆಗುತ್ತಿದ್ದಂತೆ ನಿವೇದಿತಾ ಗೌಡ ಅವರ ಮನೆ ಖಾಲಿಯಾಗಿದೆ. ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿ ನಿವೇದಿತಾ ಗೌಡ ಫ್ಯಾಮಿಲಿ ವಾಸವಿದ್ದು, ಘಟನೆ ಬಳಿಕ ಕುಟುಂಬಸ್ಥರು ಮನೆಯಿಂದ ಹೊರಗೆ ಹೋಗಿದ್ದಾರೆ. ಮಾಹಿತಿ ಪ್ರಕಾರ ಗುರುವಾರದಿಂದ ಮನೆಗೆ ಬೀಗ ಹಾಕಿದ್ದಾರೆ ಎನ್ನಲಾಗುತ್ತಿದೆ.
ನಿವೇದಿತಾ ತಂದೆ ರಮೇಶ್, ತಾಯಿ ಹೇಮ ಗುರುವಾರ ಮಧ್ಯಾಹ್ನದವರಗೆ ಮನೆಯಲ್ಲಿದ್ದರು. ಆದರೆ ಮಧ್ಯಾಹ್ನದ ಬಳಿಕ ಮನೆಗೆ ಬೀಗ ಹಾಕಿದ್ದಾರೆ. ಸದ್ಯ ನಿವೇದಿತಾ ಕುಟುಂಬದವರು ಮಾಧ್ಯಮದವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೇ ಆಪ್ತರ ಕರೆಗೂ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಖಾಸಗಿ ಜೀವನ ಗೌರವಿಸುವಂತೆ ಮನವಿ
ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ವಿಚ್ಛೇದನ ಸುದ್ದಿ ವೈರಲ್ ಆಗುತ್ತಿದ್ದಂತೆ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಈ ಮೂಲಕ ತಾವು ದೂರಾದ ಬಗ್ಗೆ ಅಧೀಕೃತವಾಗಿ ತಿಳಿಸಿದ್ದರು.
'ಈ ದಿನ, ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೆವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ನಿವೇದಿತಾ ಗೌಡ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದರು. ಇದೇ ರೀತಿ ಚಂದನ್ ಶೆಟ್ಟಿ ಕೂಡ ಪೋಸ್ಟ್ ಮಾಡಿದ್ದರು.


Click it and Unblock the Notifications











